ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವವರಿಗೆ ಬೆಂಗಳೂರಿನಲ್ಲಿ ಶಿಕ್ಷಣ ಮೇಳ; ಯುಎಸ್‌ ಪ್ರತಿನಿಧಿಗಳಿಂದ ನಿಮ್ಮ ಪ್ರಶ್ನೆಗೆ ಉತ್ತರ-education news study in the usa university fair 2024 to be held in bengaluru on august 18 sunday america jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವವರಿಗೆ ಬೆಂಗಳೂರಿನಲ್ಲಿ ಶಿಕ್ಷಣ ಮೇಳ; ಯುಎಸ್‌ ಪ್ರತಿನಿಧಿಗಳಿಂದ ನಿಮ್ಮ ಪ್ರಶ್ನೆಗೆ ಉತ್ತರ

ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವವರಿಗೆ ಬೆಂಗಳೂರಿನಲ್ಲಿ ಶಿಕ್ಷಣ ಮೇಳ; ಯುಎಸ್‌ ಪ್ರತಿನಿಧಿಗಳಿಂದ ನಿಮ್ಮ ಪ್ರಶ್ನೆಗೆ ಉತ್ತರ

EducationUSA: ದೂರದ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ-ಕನಸು ಹಲವು ವಿದ್ಯಾರ್ಥಿಗಳಿಗಿರುತ್ತದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ವಿದೇಶದಲ್ಲಿ ಶಿಕ್ಷಣ ಪಡೆಯಲು ಹಿಂಜರಿಯುತ್ತಾರೆ. ಇದೀಗ ಅಮೆರಿಕದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೇ ಭಾರತಕ್ಕೆ ಬಂದು, ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿ ನೀಡುತ್ತಿದ್ದಾರೆ.

ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವವರಿಗೆ ಬೆಂಗಳೂರಿನಲ್ಲಿ ಶಿಕ್ಷಣ ಮೇಳ
ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವವರಿಗೆ ಬೆಂಗಳೂರಿನಲ್ಲಿ ಶಿಕ್ಷಣ ಮೇಳ (Getty Images/iStockphoto)

ಬೆಂಗಳೂರು: ಯುಎಸ್ ಉನ್ನತ ಶಿಕ್ಷಣದ ಕುರಿತು ಯುಎಸ್ ಸರ್ಕಾರದ ಅಧಿಕೃತ ಮಾಹಿತಿಯ ಮೂಲವಾಗಿರುವ ಎಜುಕೇಶನ್‌ ಯುಎಸ್‌ಎ (EducationUSA), ಭಾರತದಾದ್ಯಂತ ಶಿಕ್ಷಣ ಮೇಳಗಳ ಸರಣಿಯನ್ನು ಆಯೋಜಿಸುತ್ತಿದೆ. ಭಾರತದ ಒಟ್ಟು 8 ಸ್ಥಳಗಳಲ್ಲಿ ಮೇಳ ನಡೆಯಲಿದ್ದು, ಆಗಸ್ಟ್ 16ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಮೇಳ ನಡೆಯುತ್ತಿದ್ದು, ಆಗಸ್ಟ್ 25ರಂದು ನವದೆಹಲಿಯಲ್ಲಿ ಈ ಮೇಳ ಮುಕ್ತಾಯಗೊಳ್ಳಲಿದೆ.

ಕರ್ನಾಟಕದ ಯುವಜನತೆಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಆಗಸ್ಟ್ 18ರಂದು ಎಂಜಿ ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲಿ ಮೇಳ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು; ಅಮೆರಿಕದಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಉನ್ನತ ಶಿಕ್ಷಣಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಇರುವ 80ಕ್ಕೂ ಹೆಚ್ಚು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವರನ್ನು ಭೇಟಿ ಮಾಡಲು ಭಾರತದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.

ಶಿಕ್ಷಣ ಮೇಳಗಳ ಮಹತ್ವದ ಕುರಿತು ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾತನಾಡಿ, "ಯುನೈಟೆಡ್ ಸ್ಟೇಟ್ಸ್ ನೀಡುವ ಶೈಕ್ಷಣಿಕ ಅವಕಾಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲು EducationUSA ಮೇಳ ಉತ್ತಮ ಮಾರ್ಗವಾಗಿದೆ. ನಿಮಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಇರಲಿ; ಇಲ್ಲವೇ ಕಲೆ ಅಥವಾ ವ್ಯವಹಾರ ವಿಷಯಗಳು ಆಸಕ್ತಿಯ ವಿಷಯವಾಗಿರಲಿ. ನಿಮ್ಮ ಕನಸುಗಳನ್ನು ನನಸು ಮಾಡಲು ನಿಮಗೆ ಸಹಾಯ ಮಾಡುವ ಕಾರ್ಯಕ್ರಮ ಇದಾಗಿದೆ. ಈ ಮೇಳಗಳು ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಬೃಹತ್ ಶ್ರೇಣಿಯ ಪ್ರತಿನಿಧಿಗಳನ್ನು ಭೇಟಿ ಮಾಡಲು ಮತ್ತು ಅರ್ಜಿ ಮತ್ತು ವೀಸಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯುವ ಅವಕಾಶವನ್ನು ನೀಡುತ್ತವೆ. ಪ್ರವೇಶ, ವಿದ್ಯಾರ್ಥಿವೇತನಗಳು, ಕ್ಯಾಂಪಸ್ ಜೀವನ ಮತ್ತು ಯುಎಸ್ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ನಿಮ್ಮ ಕನಸನ್ನು ನನಸಾಗಿಸಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಬೆಂಬಲವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದ್ದಾರೆ.

ಮೇಳದಲ್ಲಿ ಭಾಗವಹಿಸುವುದರಿಂದ ಪ್ರಯೋಜನವೇನು?

ಮೇಳದಲ್ಲಿ ಅಮೆರಿಕದ ಪ್ರತಿಷ್ಠಿತ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಇರುವ ಪದವಿಪೂರ್ವ, ಪದವಿ ಮತ್ತು ಡಾಕ್ಟರೇಟ್ ಹಂತಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತ ಮಾಹಿತಿ ನೀಡಲಾಗುತ್ತದೆ. ಯುಎಸ್ ವಿಶ್ವವಿದ್ಯಾನಿಲಯಗಳು, EducationUSA ಸಲಹೆಗಾರರು ಮತ್ತು ಯುಎಸ್ ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳು ಚರ್ಚೆ ನಡೆಸಬಹುದು. ಯುಎಸ್ ವಿದ್ಯಾರ್ಥಿ ವೀಸಾ ಅರ್ಜಿ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ಮತ್ತು ವಾಸಿಸುವ ಬಗ್ಗೆ ಆಳವಾದ ತಿಳುವಳಿಕೆ ಪಡೆಯಲು ಈ ಮೇಳೆ ಸಹಾಯವಾಗಲಿದೆ.

ಶಿಕ್ಷಣ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ಆದರೆ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದು ನೋಂದಣಿ ಮಾಡಿಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

  • ದಿನಾಂಕ: ಆಗಸ್ಟ್ 18, ರವಿವಾರ
  • ಸ್ಥಳ: ಹೋಟೆಲ್‌ ತಾಜ್, ಎಂಜಿ ರಸ್ತೆ, ಬೆಂಗಳೂರು
  • ಸಮಯ: ಮಧ್ಯಾಹ್ನ‌ 02:00ರಿಂದ ಸಂಜೆ 05:00 ರವರೆಗೆ

ಇನ್ನಷ್ಟು ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಒದಿ | ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಬಾಗಿಲು ಅಳವಡಿಸಲು ಬಿಎಂಆರ್‌ಸಿಎಲ್‌ ತೀರ್ಮಾನ; ಪ್ರಯಾಣಿಕರ ಒತ್ತಡದ ನಂತರ ನಿರ್ಧಾರ