UGNEET 2024; ವೈದ್ಯ ಕೋರ್ಸ್‌ಗಳ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ-education news ugneet 2024 post seat allotment procedure first round time table announced by kea uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Ugneet 2024; ವೈದ್ಯ ಕೋರ್ಸ್‌ಗಳ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

UGNEET 2024; ವೈದ್ಯ ಕೋರ್ಸ್‌ಗಳ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

UGNEET 2024 Post Seat Allotment Procedure; ವೈದ್ಯ ಕೋರ್ಸ್‌ಗಳ ಅಂದರೆ, ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಕೋರ್ಸುಗಳಿಗೆ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು (ಆಗಸ್ಟ್ 30) ಪ್ರಕಟಿಸಿದೆ.

UGNEET 2024;  ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
UGNEET 2024; ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಬೆಂಗಳೂರು: ಯುಜಿ ನೀಟ್‌ 2024ರ ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ನಂತರದ ಪ್ರಕ್ರಿಯೆಯ ಮೊದಲ ಸುತ್ತು ಶನಿವಾರ (ಆಗಸ್ಟ್ 31)ಕ್ಕೆ ಶುರುವಾಗುತ್ತಿದ್ದು, ಸೆಪ್ಟೆಂಬರ್ 5ಕ್ಕೆ ಕೊನೆಗೊಳ್ಳಲಿದೆ.

ಇದಕ್ಕೆ ಸಂಬಂಧಿಸಿದಂತೆ ಅಂದರೆ ಯುಜಿ ನೀಟ್‌ 2024ರ ವೈದ್ಯ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ನಂತರದ ಪ್ರಕ್ರಿಯೆಯ ಮೊದಲ ಸುತ್ತಿನ ಟೈಮ್‌ ಟೇಬಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ (ಆಗಸ್ಟ್ 30) ಪ್ರಕಟಿಸಿದೆ.

ಇದರಂತೆ, ವೈದ್ಯಕೀಯ,| ದಂತವೈದ್ಯಕೀಯ, ಆಯುಷ್ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್‌ (Choice) ಗಳನ್ನು ಆಯ್ಕೆ ಮಾಡಿಕೊಳ್ಳಲು, ನಂತರ ಶುಲ್ಕ ಪಾವತಿ ಮಾಡಲು, ಮೂಲ ದಾಖಲೆಗಳನ್ನು ಸಲ್ಲಿಸಲು ಹಾಗು ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಾದ ಸಮಯ ಸಾರಿಣಿ (ಟೈಮ್ ಟೇಬಲ್‌)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಮಾಡಿದೆ.

ಶನಿವಾರ ಬೆಳಗ್ಗೆ 11 ರಿಂದ ಚಾಯ್ಸ್ ಆಯ್ಕೆ ಮತ್ತು ನಂತರದ ಪ್ರಕ್ರಿಯೆ ಶುರು

1) ಪೋಷಕರ ಜೊತೆ ಚರ್ಚಿಸಿ ಸೂಕ್ತ ಚಾಯ್ಸ್ (CHOICE) ಅನ್ನು ಆಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳು ನಾಲ್ಕು ಚಾಯ್ಸ್‌ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್‌ ಅನ್ನು ಆಯ್ಕೆ ಮಾಡುವ ಮೊದಲು, ಪ್ರತಿ ಚಾಯ್ಸ್‌ಗಳ ವಿವರಣೆಯನ್ನು ಓದಿ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅದರಲ್ಲಿ ತಮಗೆ ಸೂಕ್ತವೆನಿಸಿದ ಚಾಯ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಆಗಸ್ಟ್‌ 31ರ ಬೆಳಗ್ಗೆ 11 ಗಂಟೆಯಿಂದ ಸೆಪ್ಟೆಂಬರ್ 3ರ ರಾತ್ರಿ 11.59ರ ತನಕ ಕಾಲಾವಕಾಶ ನಿಗದಿ ಮಾಡಲಾಗಿದೆ.

2) ಚಾಯ್ಸ್ 1 ಮತ್ತು ಚಾಯ್ಸ್ 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದಕ್ಕೆ ಆಗಸ್ಟ್ 31 ರ ಅಪರಾಹ್ನ 1 ಗಂಟೆಯಿಂದ ಸೆಪ್ಟೆಂಬರ್ 4ರ ಸಂಜೆ 4 ಗಂಟೆ ತನಕ ಕೆಲಸದ ಅವಧಿಯಲ್ಲಿ ಅವಕಾಶ ನೀಡಲಾಗಿದೆ.

3) ಚಾಯ್ಸ್ 1 ಆಯ್ಕೆ ಮಾಡಿ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಬೆಂಗಳೂರು ಇಲ್ಲಿ ಖುದ್ದಾಗಿ ಸಲ್ಲಿಸುವುದು. ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಕೈಪಿಡಿಯಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಇದಕ್ಕೆ ಸೆಪ್ಟೆಂಬರ್ 2 ರಿಂದ 4 ರ ತನಕ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆ ತನಕ ಕಾಲಾವಕಾಶ ನೀಡಲಾಗಿದೆ. (ಒರಿಜಿನಲ್ ದಾಖಲೆ ಸಲ್ಲಿಸುವುದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಸರಿಯಾಗಿ ಗಮನಿಸಿ)

4) Choice 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಅಡ್ಮಿಷನ್ ಆರ್ಡರ್‌ ಅನ್ನು ಡೌನ್‌ಲೋಡ್‌ ಮಾಡುವುದು. ಇದಕ್ಕೆ ಸೆಪ್ಟೆಂಬರ್ 2 ರಿಂದ 5 ರ ತನಕ ಸಮಯಾವಕಾಶ ನೀಡಲಾಗಿದೆ.

5) (ಎಲ್ಲಾ ಧೃಡೀಕರಿಸಿದ ದಾಖಲಾತಿಗಳೊಂದಿಗೆ ವೆರಿಫಿಕೇಶನ್ ಸ್ಲಿಪ್‌ (Verification slip) ನಲ್ಲಿ ನಮೂದಿಸಿರುವಂತೆ) ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ ಸೆಪ್ಟೆಂಬರ್ 5ರ ಸಂಜೆ 5.30ರ ಮೊದಲು.

ವಿದ್ಯಾರ್ಥಿಗಳು ಸಮಯದ ವೇಳಾಪಟ್ಟಿ ಗಮನಿಸಿ

ಸಮಯದ ವೇಳಾಪಟ್ಟಿಯನ್ನು ಯಥಾವತ್ ಅನುಸರಿಸಬೇಕು. ಅದೇ ರೀತಿ, ಕೌನ್ಸೆಲಿಂಗ್ ನಡೆಸಲು ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿಟ್ಟುಕೊಂಡು, ಭಾಗವಹಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಿಗೆ ಎಲ್ಲಾ ಶನಿವಾರ ಮತ್ತು ಭಾನುವಾರ ಮತ್ತು ಗೆಜೆಟೆಡ್ ರಜಾದಿನಗಳನ್ನು ಕೆಲಸದ ದಿನಗಳಾಗಿ ಪರಿಗಣಿಸಲು ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.