ಕನ್ನಡ ಸುದ್ದಿ  /  Karnataka  /  Electric Vehicles Charging Points Installed In Six Metro Stations In Bengaluru

Metro Station: ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್:‌ ಎಲ್ಲೆಲ್ಲಿ ಸಿಗಲಿದೆ ಈ ಸೌಲಭ್ಯ?

ಬೆಂಗಳೂರಿನಲ್ಲಿರುವ ಇ-ವಾಹನಗಳ ಅನುಕೂಲಕ್ಕಾಗಿ ಮತ್ತು ಇ-ವಾಹನಗಳನ್ನು ಖರೀದಿಸುವಂತೆ ಜನರನ್ನು ಉತ್ತೇಜಿಸುವ ಉದ್ದೇಶದಿಂದ, ಮೆಟ್ರೋ ನಿಲ್ದಾಣದ ಆವರಣದಲ್ಲಿ ಇ-ಚಾರ್ಜಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮುಂದಾಗಿದೆ. ನಗರದ ಆರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೋಂಡಾ ಇ ಟೆಕ್ನಾಲಾಜಿಯ ಇ ಚಾರ್ಜಿಂಗ್‌ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ಪರಿಸರ ಸುರಕ್ಷತೆಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳನ್ನು ಕೈಬಿಟ್ಟು, ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವಂತೆ ಕೇಂದ್ರ ಸರ್ಕಾರ ಜನರನ್ನು ಪ್ರೆರೇಪಿಸುತ್ತಿದೆ. ಇ-ವಾಹನಗಳನ್ನು ಖರೀದಿಸುವವರಿಗೆ ವಿಶೇಷ ಸಬ್ಸಿಡಿ ಮತ್ತು ಇತರೆ ರಿಯಾಯ್ತಿಗಳನ್ನೂ ಕೇಂದ್ರ ಸರ್ಕಾರ ಘೋಷಿಸಿದೆ.

ಇ-ವಾಹನ ಖರೀದಿಗೆ ಕೇವಲ ಉತ್ತೇಜನ ಮಾತ್ರವಲ್ಲದೇ, ಇ-ವಾಹನ ಓಡಾಟಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನೂ ಒದಗಿಸಲು ಮುಂದಡಿ ಇಟ್ಟಿದೆ. ಈ ಎಲ್ಲ ಕಾರಣಗಳಿಂದಾಗಿ ಈಗ ದೇಶದ ರಸ್ತೆಗಳಲ್ಲಿ ಇ-ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಾವೂ ಹೆಚ್ಚಿನ ಸಂಖ್ಯೆಯಲ್ಲಿ ಇ-ವಾಹನಗಳ ಸಂಚಾರವನ್ನು ಕಾಣಬಹುದಾಗಿದೆ.

ಅದರಂತೆ, ನಗರದಲ್ಲಿರುವ ಇ-ವಾಹನಗಳ ಅನುಕೂಲಕ್ಕಾಗಿ ಮತ್ತು ಇ-ವಾಹನಗಳನ್ನು ಖರೀದಿಸುವಂತೆ ಜನರನ್ನು ಉತ್ತೇಜಿಸುವ ಉದ್ದೇಶದಿಂದ ಮೆಟ್ರೋ ನಿಲ್ದಾಣದ ಆವರಣದಲ್ಲಿ ಇ-ಚಾರ್ಜಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮುಂದಾಗಿದೆ. ನಗರದ ಆರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೋಂಡಾ ಇ ಟೆಕ್ನಾಲಾಜಿಯ ಇ ಚಾರ್ಜಿಂಗ್‌ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ.

ಹೋಂಡಾ ಚಾರ್ಜಿಂಗ್‌ ಬ್ಯಾಟರಿ ಉಪಯೋಗಿಸುವ ಎಲೆಕ್ಟ್ರಿಕಲ್‌ ತ್ರಿಚಕ್ರ ವಾಹನ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಚಾರ್ಜಿಂಗ್‌ ಕೇಂದ್ರಗಳ ಬಳಿ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಹೋಂಡಾ ಕಂಪನಿಯ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್‌ ತ್ರಿಚಕ್ರ ವಾಹನಗಳ ಬ್ಯಾಟರಿಯನ್ನು ಮಾತ್ರ ಇಲ್ಲಿ ಚಾರ್ಜ್ ಮಾಡಬಹುದಾಗಿದೆ.

ಎಲೆಕ್ಟ್ರಿಕ್‌ ತ್ರಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ನಾಲ್ಕು ಬ್ಯಾಟರಿ ಮತ್ತು ಒಂದು ಒಂದು ಸ್ಮಾರ್ಟ್‌ ಕೊಡಲಾಗಿರುತ್ತದೆ. ಈ ಸ್ಮಾರ್ಟ್‌ ಕಾರ್ಡ್‌ ಆ ನಿರ್ದಿಷ್ಟ ಬ್ಯಾಟರಿ ಮತ್ತು ವಾಹನದ ಸಂಪೂರ್ಣ ಮಾಹಿತಿ ಹೊಂದಿದ್ದು, ಅದನ್ನು ಚಾರ್ಜರ್‌ ಯಂತ್ರಕ್ಕೆ ತೋರಿಸುವ ಮೂಲಕ ತ್ರಿಚಕ್ರ ವಾಹನ ಸವಾರರು ಬ್ಯಾಟರಿ ಚಾರ್ಚ್ ಮಾಡಿಕೊಳ್ಳಬಹುದಾಗಿದೆ.

ಚಾರ್ಜಿಂಗ್‌ ಕೇಂದ್ರಗಳ ವ್ಯವಸ್ಥೆ ಇಲ್ಲದಿರುವುದರಿಂದಲೇ ಜನರು ಇ-ವಾಹನ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಬೆಂಗಳೂರಿನಂತಹ ಸಂಚಾರ ದಟ್ಟಣೆಯ ನಗರದಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವುದು ಕೂಡ ಸವಾಲಿನ ಕೆಲಸವಾಗಿದೆ. ಆದರೆ ಇ-ವಾಹನ ಬಳಕೆಯ ಮಹತ್ವವನ್ನು ಅರಿಯುತ್ತಿರುವ ಜನರ ಅನುಕೂಲಕ್ಕಾಗಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ ಯೋಜನೆಗೂ ವೇಗ ನೀಡಲಾಗಿದೆ.

ನಗರದ ಮೆಟ್ರೋ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಚಾರ್ಜಿಂಗ್‌ ಕೇಂದ್ರಗಳಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 70 ಕಿ.ಮೀ. ದೂರ ಸಂಚಾರ ಮಾಡಬಹುದು. ಈ ಆರು ನಿರ್ದಿಷ್ಟ ಮೆಟ್ರೋ ನಿಲ್ದಾಣಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ ಮೆಟ್ರೋಗೂ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಯೋಜನೆ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಸ್ಥಾಪಿಸಲುಇ ಹೊಂಡಾ ಕಂಪನಿ ನಿರ್ಧರಿಸಿದೆ.

ಎಲ್ಲೆಲ್ಲಿ ಚಾರ್ಜಿಂಗ್‌ ವ್ಯವಸ್ಥೆ?:

ಸದ್ಯ ನಗರದ ನ್ಯಾಷನಲ್‌ ಕಾಲೇಜು, ಕೆ.ಆರ್‌. ಮಾರುಕಟ್ಟೆ, ಬನಶಂಕರಿ ಸೇರಿದಂತೆ ಆರು ಮೆಟ್ರೊ ನಿಲ್ದಾಣದಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಚಾರ್ಜ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಈ ಮೊದಲೇ ಹೇಳಿದಂತೆ ಕೇವಲ ಹೊಂಡಾ ಬ್ಯಾಟರಿ ಹೊಂದಿರುವ ತ್ರಿಚಕ್ರ ವಾಹನಗಳನ್ನು ಮಾತ್ರ ಇಲ್ಲಿ ಚಾರ್ಜ್‌ ಮಾಡಬಹುದಾಗಿದೆ.

ಸದ್ಯ ರಾಜ್ಯದಲ್ಲಿ ವಿವಿಧ ಮಾದರಿಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಇ-ವಾಹನಗಳು ನೋಂದಣಿಯಾಗಿದ್ದು, ಸರ್ಕಾರದ ಉತ್ತೇಜನದ ಫಲವಾಗಿ ಇ-ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲೆ ಹೊಣೆಯಾಗಿದ್ದು, ಇ-ವಾಹನ ಬಳಕೆ ಈ ನಿಟ್ಟಿನಲ್ಲಿ ನಾವು ನಿರ್ವಹಿಸಬಹುದಾದ ಬಹುದೊಡ್ಡ ಸಾಮಾಜಿಕ ಜವಾಬ್ದಾರಿ ಎಂಬುದರಲ್ಲಿ ಎರಡು ಮಾತಿಲ್ಲ.

IPL_Entry_Point