ಆನೆಗಳು ಮದವೇರಿದಾಗ ಹೇಗೆ ವರ್ತಿಸುತ್ತವೆ: ದಸರಾ ಮದ ಗಜಗಳ ಕಾಳಗದಿಂದ ಆಗಿದೆ ಅನಾಹುತಗಳು-elephant news mysuru dasara elephants musth time how to handle ferocious elephant in festive time kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಆನೆಗಳು ಮದವೇರಿದಾಗ ಹೇಗೆ ವರ್ತಿಸುತ್ತವೆ: ದಸರಾ ಮದ ಗಜಗಳ ಕಾಳಗದಿಂದ ಆಗಿದೆ ಅನಾಹುತಗಳು

ಆನೆಗಳು ಮದವೇರಿದಾಗ ಹೇಗೆ ವರ್ತಿಸುತ್ತವೆ: ದಸರಾ ಮದ ಗಜಗಳ ಕಾಳಗದಿಂದ ಆಗಿದೆ ಅನಾಹುತಗಳು

ಆನೆಗಳಿಗೆ ಮದ ಬಂದರೆ ಸ್ಥಿತಿ ಹೇಗಿರಲಿದೆ. ದಸರಾದಂತಹ ಉತ್ಸವದ ವೇಳೆ ಆನೆಗಳಿಗೆ ಮದ ಬಂದಾಗ ಹೇಗೆ ನೋಡಿಕೊಳ್ಳಬೇಕು. ಆನೆಗಳ ವರ್ತನೆ ಹೇಗಿರಲಿದೆ.. ಇಲ್ಲಿದೆ ಮಾಹಿತಿ

ಆನೆಗೆ ಮದವೇರಿದ ಸಂದರ್ಭದಲ್ಲಿ ಸುರಿಯುವ ಮದಜಲ.
ಆನೆಗೆ ಮದವೇರಿದ ಸಂದರ್ಭದಲ್ಲಿ ಸುರಿಯುವ ಮದಜಲ. (Yathin S Krishnappa )

ಮೈಸೂರು: ಮೂರು ದಶಕದ ಹಿಂದೆ ಕಟ್ಟು ಮಸ್ತಾದ ಆನೆ ಅರ್ಜುನನಿಗೆ ಮಾವುತ ಸ್ನಾನ ಮಾಡಿಸುತ್ತಿದ್ದ. ಅದೇನು ಆಯಿತೋ ಮದವೇರಿದ ಅರ್ಜುನ ಮಾವುತನ್ನು ಕೊಂದು ಹಾಕಿಯೇ ಬಿಟ್ಟ. ಮದದಲ್ಲಿದ್ದ ಆನೆಯನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ವಿಫಲನಾಗಿದ್ದ ಮಾವುತನಿಂದ ಒಂದು ಜೀವವೇ ಹೋಯಿತು. ಆನಂತರ ಅರ್ಜುನ ಆನೆ ದಸರಾದಿಂದ ದೂರವಾಯಿತು. ಅದೇನೋ ದೊಡ್ಡ ಮಾಸ್ತಿ ಎಂಬ ಮಾವುತನ ಕಾರಣಕ್ಕೆ ಅರ್ಜುನ ಮತ್ತೆ ಬೆಳಕಿಗೆ ಬಂದ. ದಶಕದ ಹಿಂದೆ ದಸರಾದ ಆನೆ ಗಜೇಂದ್ರನಿಗೆ ಮದ ಬಂದು ಶ್ರೀರಾಮ ಎನ್ನುವ ಮತ್ತೊಂದು ದಸರಾ ಆನೆ ಕೊಂದು ಹಾಕಿತ್ತು. ಆಗಿನಿಂದಲೂ ಗಜೇಂದ್ರ ದಸರಾದಿಂದ ದೂರ. ದಸರಾಕ್ಕೆ ಬಂದಿರುವ ಪ್ರಶಾಂತ ಆನೆ ಕೂಡ ಮದವೇರಿ ದುಬಾರೆ ಆನೆ ಶಿಬಿರದಲ್ಲಿ ಹಲವು ಬಾರಿ ದಾಳಿ ಮಾಡಿದ ಉದಾಹರಣೆಯೂ ಇದೆ. ಇದಕ್ಕೆ ಕಂಜನ್‌ ಆನೆ ಕೂಡ ಫಲಾನುಭವಿಯೇ.

ಆನೆಗಳು ಮದವೇರುವುದು ಸಾಮಾನ್ಯ. ಕಾಡಿನಲ್ಲಿ ಇದ್ದಾಗ ಇಲ್ಲವೇ ಶಿಬಿರದಲ್ಲಿದ್ದಾಗ ಹೀಗೆ ಮದವೇರಿದಾಗ ಕಾಳಗಗಳು ನಡೆಯುತ್ತವೆ. ಆಗ ಅದನ್ನು ತಡೆದುಬಿಡುವುದು ನಡೆಯುತ್ತಲೇ ಇರುತ್ತವೆ. ಆದರೆ ಲಕ್ಷಾಂತರ ಜನ ಸೇರುವ, ಕೋಟ್ಯಂತರ ಜನರ ಗಮನಿಸುವ ಮೈಸೂರು ದಸರಾ ವೇಳೆ ಬರುವ ಆನೆಗಳು ಮದವೇರಿದಾಗ ಕೊಂಚ ಅನಾಹುತವಾದರೂ ಅದು ಇಡೀ ಉತ್ಸವಕ್ಕೆ ಕಪ್ಪು ಚುಕ್ಕೆಯಾಗಿಬಿಡಬಲ್ಲವು.

ಅಂತಹ ಘಟನೆಗಳೂ ದಸರಾದಲ್ಲಿ ಆಗಿವೆ. ಹೀಗಿರುವಾಗ ಮೈಸೂರು ದಸರಾದಲ್ಲಿ ಶನಿವಾರ ರಾತ್ರಿ ಧನಂಜಯ ಆನೆ ದಾಳಿ ಹಾಗೂ ತುಂಟ ಕಂಜನ್‌ ರಸ್ತೆಗೆ ಓಡಿದ ರೀತಿ ನಿಜಕ್ಕೂ ಆತಂಕಕಾರಿಯೇ ಆಗಿತ್ತು.

ಹೇಗಿರುತ್ತದೆ ಮದ

ಗಂಡಾನೆಗಳಿಗೆ ಮದ ಎನ್ನುವುದು ಆಗಾಗ ಕಾಣಬರುವ ಲಕ್ಷಣ. ಮದ (ಮಸ್ತಿ) ಲಕ್ಷಣಗಳಲ್ಲಿಗ ಸಂತಾನೋತ್ಪತ್ತಿ ಹಾರ್ಮೋನುಗಳಲ್ಲಿ ಭಾರಿ ಏರಿಕೆ ಕಂಡು ಅದರ ಪರಿಣಾಮವಾಗಿ ವಿಪರೀತ ಆಕ್ರಮಣಕಾರಿ ವರ್ತನೆಗೆ ಆನೆಗಳು ತಿರುಗುತ್ತವೆ. ಮದ ಬಂದಿರುವ ಆನೆಗಳು ಟೆಂಪೋರಿನ್ ಎಂಬ ಗಟ್ಟಿ ಡಾಂಬರು ರೀತಿಯ ಜಲದಂತ ಸ್ರಾವವನ್ನು ತಲೆಯ ಪಾರ್ಶ್ವಗಳಲ್ಲಿನ ಗಂಡಸ್ಥಳದ ನಾಳಗಳಿಂದ ವಿಸರ್ಜಿಸುತ್ತವೆ. ಆನೆ ಮದದಲ್ಲಿದೆ ಎನ್ನುವುದು ತಿಳಿಯುವ ಮೊದಲ ಅಂಶ. ಈ ಮದ ಜಲವುಬಾಯಿಯೊಳಗೆ ತೊಟ್ಟಿಕ್ಕಿ. ಆನೆಯ ಆಕ್ರಮಣಕಾರಿ ವರ್ತನೆಗೆ ಕಾರಣವಾಗುತ್ತದೆ.

ಈ ವೇಳೆ ಆನೆಗಳ ಗಂಡಸ್ಥಳದ ನಾಳಗಳು ಊದಿಕೊಳ್ಳುತ್ತವೆ. ಇದು ಆನೆಯ ಕಣ್ಣುಗಳಿಗೆ ಒತ್ತಿ ತೀವ್ರ ನೋವನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಆನೆ ಬಂದಾಗ ದಾಳಿ ಮಾಡುವ ಸಾಧ್ಯತೆ ಅಧಿಕ. ಕೆಲವೊಮ್ಮೆ ಮಾವುತನನ್ನೂ ಬಿಡುವುದಿಲ್ಲ. ಆಗ ಅಂತಹ ಆನೆಯನ್ನ ಆದಷ್ಟು ಇತರೆ ಆನೆಗಳಿಂದ ದೂರ ಇಡಲಾಗುತ್ತದೆ. ಇದನ್ನು ಮಾವುತ ಹಾಗೂ ಕವಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಆನೆ ಮದದಿಂದ ಇಳಿಯಲು ಎಣ್ಣೆಯ ಮಜ್ಜನದಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಸೂಕ್ತ ಮಾಹಿತಿ ನೀಡಬೇಕು

ಮಸ್ಥಿಲಿರುವ ಆನೆಯ ವಾಸನೆಯನ್ನು ಕಂಡರೆ ಗಂಡು ಆನೆಗಳು ಬೆದರಿ ಓಡಿ ಹೋಗುತ್ತವೆ. ಮಸ್ತಿಲಿರುವ ಆನೆಯನ್ನು ಬೇರೆ ಕಡೆ ಕಟ್ಟಿ ಹಾಕಬೇಕು .ಆದ್ದರಿಂದ ಮಸ್ತಿ ಲಿರುವ ಆನೆಯನ್ನು ಆನೆ ಶಿಬಿರಕ್ಕೆ ವಾಪಸ್ ಕಳಿಸಬೇಕು. ಇಲ್ಲದೇ ಇದ್ದರೆ ಹಲವು ತರದ ತೊಂದರೆ ಹಾಗೂ ಪ್ರಾಣ ಹಾನಿ ಆಗುವ ಸಾಧ್ಯತೆಯೂ ಅಧಿಕ.

ಮಸ್ತಿಯಲ್ಲಿರುವ ಆನೆಯ ಮಾವುತರು ಕೆಲವೊಮ್ಮೆ ಆನೆಯನ್ನು ಶಿಬಿರಕ್ಕೆ ವಾಪಸ್ಸು ಕಳಿಸುತ್ತಾರೆ ಎಂದು ಅದನ್ನುಮದ ಬಂದ ಜಾಗವನ್ನು ಮುಚ್ಚುತ್ತಾರೆ. ಮದಜಲ ಬರುವ ಜಾಗವನ್ನು ನೀರಲ್ಲಿ ತೊಳೆದು ನಂತರ ಮಣ್ಣನ್ನು ಸವರುತ್ತಾರೆ. ಹಾಗೆ ಮಾಡಿದರೆ ಮಸ್ತಿಗೆ ಬಂದಿರುವುದು ಕಾಣುವುದಿಲ್ಲ. ಪಶು ವೈದ್ಯದಾವರು ಇವುಗಳನ್ನೆಲ್ಲ ಪರೀಕ್ಷಿಸಿ ಮೇಲಧಿಕಾರಿಗಳಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯ.

ಅನನುಭವಿ ಅಧಿಕಾರಿಗಳು

ಹಿಂದೆ ಅರ್ಜುನ ಆನೆಯೂ ಮದ ಬಂದು ಮಾಡಿದ ಅನಾಹುತ ಗೊತ್ತಿದೆ. ಗಜೇಂದ್ರ ಶ್ರೀರಾಮ ಕಾಳಗದಲ್ಲಿ ಶ್ರೀರಾಮ ಪ್ರಾಣ ಬಿಟ್ಟಿದ್ದೂ ಗೊತ್ತಿದೆ. ಪ್ರಶಾಂತ ಆನೆ ದಾಳಿ ಮಾಡಿದ್ದು ತಿಳಿದಿದೆ. ಹೀಗಿದ್ದರೂ ಧನಂಜಯ ಆನೆ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕಂಜನ್‌ ಆನೆ ಕಾಲಿಗೆ ಗಾಯವಾಗಿ ಅದನ್ನು ತಾಲೀಮಿಗೂ ಬಳಸಿಲ್ಲ. ಕಂಜನ್ ಆನೆ ಸರಪಳಿ ಕಿತ್ತುಕೊಂಡು ಹಾಗೆ ಓಡಿ ಹೋಗದಿದ್ದರೆ ಅದನ್ನು ಧನಂಜಯ ಆನೆಯು ದಾಳಿ ಮಾಡಿ ಗಾಯಗೊಳಿಸಿ ಪ್ರಾಣ ಹಾನಿಯೂ ಆಗಬಹುದಿತ್ತು. ಇದನ್ನೆಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಎಚ್ಚರಿಕೆಯಿಂದ ಗಮನಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕು. ಅನುಭವ ಇಲ್ಲದವರನ್ನು ದಸರಾ ಆನೆ ಸೇವೆಗೆ ಹಾಕುವ ಮುನ್ನ ಇಲಾಖೆ ಹಿರಿಯ ಅಧಿಕಾರಿಗಳೂ ಗಮನಿಸಬೇಕು ಎನ್ನುವ ಸಲಹೆಯೂ ಕೇಳಿ ಬಂದಿದೆ.

mysore-dasara_Entry_Point