ಶಿವಮೊಗ್ಗದಲ್ಲಿ 10 ದಿನಗಳ ಕಾಲ ಅಗ್ನಿಪಥ್ ನೇಮಕಾತಿ ರ‍್ಯಾಲಿ; 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ-employment news agnipath recruitment rally at shivamogga nehru district stadium by army recruiting office jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಶಿವಮೊಗ್ಗದಲ್ಲಿ 10 ದಿನಗಳ ಕಾಲ ಅಗ್ನಿಪಥ್ ನೇಮಕಾತಿ ರ‍್ಯಾಲಿ; 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಶಿವಮೊಗ್ಗದಲ್ಲಿ 10 ದಿನಗಳ ಕಾಲ ಅಗ್ನಿಪಥ್ ನೇಮಕಾತಿ ರ‍್ಯಾಲಿ; 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳು, ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಭಾರತೀಯ ಸೇನೆಗೆ ಸೇರಲು ಬಯಸುವ ರಾಜ್ಯದ 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಲಿದೆ.

ಶಿವಮೊಗ್ಗದಲ್ಲಿ 10 ದಿನಗಳ ಕಾಲ ಅಗ್ನಿಪಥ್ ನೇಮಕಾತಿ ರ‍್ಯಾಲಿ
ಶಿವಮೊಗ್ಗದಲ್ಲಿ 10 ದಿನಗಳ ಕಾಲ ಅಗ್ನಿಪಥ್ ನೇಮಕಾತಿ ರ‍್ಯಾಲಿ

ಶಿವಮೊಗ್ಗದ ನೆಹರು ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ನೇಮಕಾತಿ ರ‍್ಯಾಲಿ ನಡೆಯಲಿದೆ. ಮಂಗಳೂರಿನ ಸೇನಾ ನೇಮಕಾತಿ ಕಚೇರಿಯು (Army Recruiting Office, Mangalore) ಇದನ್ನು ನಡೆಸುತ್ತಿದ್ದು, ಆಗಸ್ಟ್‌ 22ರಿಂದ 31ರವರೆಗೆ ಒಟ್ಟು 10 ದಿನಗಳ ಕಾಲ ರ‍್ಯಾಲಿ ನಡೆಯಲಿದೆ. ಬೆಂಗಳೂರಿನ HQ ನೇಮಕಾತಿ ವಲಯದ ಅಡಿಯಲ್ಲಿ ನೇಮಕಾತಿ ರ‍್ಯಾಲಿ ನಡೆಸಲಾಗುತ್ತಿದ್ದು, ಕರ್ನಾಟಕದ ಒಟ್ಟು 11 ಜಿಲ್ಲೆಗಳಿಂದ ಶಾರ್ಟ್‌ಲಿಸ್ಟ್ ಆಗಿರುವ ಪುರುಷ ಅಭ್ಯರ್ಥಿಗಳು ಇದರಲ್ಲಿ ಭಾಗಿಯಾಗಬಹುದಾಗಿದೆ.

ಯಾವೆಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿಯಾಗಬಹುದು?

  • ಶಿವಮೊಗ್ಗ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಉಡುಪಿ
  • ದಾವಣಗೆರೆ
  • ಬಾಗಲಕೋಟ
  • ವಿಜಯಪುರ
  • ಧಾರವಾಡ
  • ಗದಗ
  • ಹಾವೇರಿ
  • ಚಿಕ್ಕಮಗಳೂರು

2024ರ ಏಪ್ರಿಲ್ 22ರಿಂದ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Exam -CEE) ಬಳಿಕ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗಾಗಿ ಈ ರ‍್ಯಾಲಿ ನಡೆಸಲಾಗುತ್ತಿದೆ. ಸೇನೆಯಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮೆನ್ (10ನೇ ತರಗತಿ ಪಾಸ್), ಅಗ್ನಿವೀರ್ ಟ್ರೇಡ್ಸ್‌ಮೆನ್ (8ನೇ ತರಗತಿ ಪಾಸ್) ಮತ್ತು ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೋಂದಣಿಗಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

ಅಡ್ಮಿಟ್ ಕಾರ್ಡ್‌ ಎಲ್ಲಿದೆ?

ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್‌ಗಳನ್ನು ಈಗಾಗಲೇ ಆಯಾ ಅಭ್ಯರ್ಥಿಗಳ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗಿದೆ. ಇದೇ ವೇಳೆ ಭಾರತೀಯ ಸೇನೆಯ ಜಾಯಿಂಟ್‌ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ರ‍್ಯಾಲಿಯನ್ನು ಸುಗಮವಾಗಿ ನಡೆಸಲು ಪೂರ್ವಭಾವಿಯಾಗಿ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಹೊರ ಜಿಲ್ಲೆಗಳ ಎಲ್ಲಾ ಅಭ್ಯರ್ಥಿಗಳಿಗೆ ವಸತಿಯನ್ನು ಸ್ಥಳೀಯ ಆಡಳಿತವು ಏರ್ಪಡಿಸುತ್ತಿದೆ.