ಅಗ್ನಿವೀರ್ ವಾಯು ಭರ್ತಿಗೆ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಅಗ್ನಿವೀರ್ ವಾಯು ಭರ್ತಿಗೆ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಅಗ್ನಿವೀರ್ ವಾಯು ಭರ್ತಿಗೆ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಭಾರತೀಯ ವಾಯು ಪಡೆ ‘ಅಗ್ನಿವೀರ್ ವಾಯು’ ಭರ್ತಿ ಮಾಡಲು ಅವಿವಾಹಿತ ಯುವಕ, ಯುವತಿಯರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಐಎಎಫ್ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಫೆಬ್ರವರಿ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಐಎಎಫ್ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಫೆಬ್ರವರಿ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಬೆಂಗಳೂರು: ಭಾರತೀಯ ವಾಯು ಸೇನೆ-ಐಎಎಫ್‌ನ 'ಅಗ್ನಿವೀರ್ ವಾಯು' ಹುದ್ದೆಗಳ ಭರ್ತಿಗೆ ನಿನ್ನೆಯಿಂದ (ಜನವರಿ 17, ಬುಧವಾರ) ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು 550 ರೂಪಾಯಿ ಶುಲ್ಕದೊಂದಿಗೆ ಆಯ್ಕೆ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಬಹುದ್ದಾಗಿದ್ದು, ಫೆಬ್ರವರಿ 6 (ಮಂಗಳವಾರ) ಕೊನೆಯ ದಿನವಾಗಿದೆ.

ಸೇವಾ ಅವಶ್ಯಕತೆಯ ಆಧಾರದ ಮೇಲೆ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಗಳು ಏನು, ಅಗ್ನಿವೀರ್ ವಾಯು ಹುದ್ದೆಗೆ ಸಂಬಂಧಿಸಿದ ಇತರೆ ಮಾಹಿತಿಯನ್ನು ಐಎಎಫ್‌ನ ನೋಟಿಫಿಕೇಶನ್‌ನಲ್ಲಿ ತಿಳಿಯಿರಿ.

ಭಾರತೀಯ ವಾಯು ಸೇನೆ ಹೊರಡಿಸಿರುವ ಅಧಿಕೃತ ನೋಟಿಫಿಕೇಶನ್ ಪ್ರಕಾರ, 2024ರ ಜನವರಿ 17 (ಬುಧವಾರ) ರಿಂದ ಐಎಎಫ್‌ 'ಅಗ್ನಿವೀರ್ ವಾಯು' ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

ಐಎಎಫ್‌ 'ಅಗ್ನಿವೀರ್ ವಾಯು' ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಹಂತ 1 - ಐಎಎಫ್‌ನ 'ಅಗ್ನಿವೀರ್ ವಾಯು' ವೆಬ್‌ಸೈಟ್‌ಗೆ ಭೇಟಿ ನೀಡಿ https://agnipathvayu.cdac.in/.

ಹಂತ 2 - ಹೋಮ್ ಪೇಜ್‌ನಲ್ಲಿರುವ 'ಅಗ್ನಿವಾಯು' ಅಲ್ಲಿ ಕ್ಲಿಕ್ ಮಾಡಿದರೆ ಅರ್ಹತೆಯ ಮಾನದಂಡಗಳು (Eligibility Criteria) ಇವೆ. ಈ ಎಲ್ಲಾ ಮಾಹಿತಿಯನ್ನು ಒಮ್ಮೆ ಓದಿಕೊಂಡು ಅರ್ಹತೆಯ ಮಾನದಂಡಗಳ ಬಗ್ಗೆ ತಿಳಿದುಕೊಳ್ಳಿ

ಹಂತ 3 - ಹೋಮ್ ಪೇಜ್‌ನಲ್ಲಿ ಏರ್‌ ಫೋರ್ಸ್ ಅಗ್ನಿವೀರ್ ಅರ್ಜಿಗಾಗಿ ವಾಯು ಇಂತಕೆ 1/2025 ಲಿಂಕ್ ಕ್ಲಿಕ್ ಮಾಕಿ

ಹಂತ 4 - ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅದರಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ

ಹಂತ 5 - ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಅರ್ಜಿಯೊಂದಿಗೆ ದಾಖಲೆಗಳನ್ನ ಅಟ್ಯಾಚ್ ಮಾಡಿ.

ಹಂತ 6 - ವಿಳಾಸದಲ್ಲಿ ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ

ಐಎಎಫ್‌ 'ಅಗ್ನಿವೀರ್ ವಾಯು' 2024 ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣ ಸಂಸ್ಥೆಗಳಿಂದ ಗಣಿತ, ಭೌತಶಾಸ್ತ್ರ ಹಾಗೂ ಇಂಗ್ಲಿಷ್ ವಿಷಯಗಳನ್ನೊಳಗೊಂಡ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಮುಗಿಸಿರಬೇಕು. ಇಲ್ಲವೇ ವೃತ್ತಿಪರವಲ್ಲದ ವಿಷಯಗಳಲ್ಲಿ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ಗಳನ್ನು ಪಡೆದಿರಬೇಕು. ಇಂಜಿನಿಯರಿಂಗ್ ವಿಭಾಗದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಅಥವಾ ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳಲ್ಲಿ ಉತ್ತೀರಾರ್ಣರಾಗಿರಬೇಕು.

2024ರ ಮಾರ್ಚ್ 17 ರಿಂದ ಐಎಎಫ್ ಅಗ್ನಿವೀರ್‌ವಾಯು ಹುದ್ದೆಗಳು ಪರೀಕ್ಷೆ ಆರಂಭವಾಗಲಿವೆ. ಅಭ್ಯರ್ಥಿಗಳನ್ನ ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆ, ದಾಖಲೆಗಳ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುತ್ತದೆ.

ಐಎಎಫ್ ಅಗ್ನಿವೀರ್‌ವಾಯು ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 30,000 ವೇತನ ನೀಡಲಾಗುತ್ತಿದೆ. ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧವಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಅರ್ಜಿ ಸಲ್ಲಿಸಿದರೆ ಮುಂದಾಗುವ ಗೊಂದಲಗಳಿಂದ ದೂರ ಉಳಿಯಬಹುದು.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

Whats_app_banner