ಕೆಪಿಎಸ್‌ಸಿ: ಕೃಷಿ ಇಲಾಖೆಯಲ್ಲಿ ಉದ್ಯೋಗ, 43,100 -83,900 ರೂ ವೇತನ, 945 ಗ್ರೂಪ್‌-ಬಿ ಹುದ್ದೆಗಳಿಗೆ ಫೆ 1ರ ಮೊದಲು ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಪಿಎಸ್‌ಸಿ: ಕೃಷಿ ಇಲಾಖೆಯಲ್ಲಿ ಉದ್ಯೋಗ, 43,100 -83,900 ರೂ ವೇತನ, 945 ಗ್ರೂಪ್‌-ಬಿ ಹುದ್ದೆಗಳಿಗೆ ಫೆ 1ರ ಮೊದಲು ಅರ್ಜಿ ಸಲ್ಲಿಸಿ

ಕೆಪಿಎಸ್‌ಸಿ: ಕೃಷಿ ಇಲಾಖೆಯಲ್ಲಿ ಉದ್ಯೋಗ, 43,100 -83,900 ರೂ ವೇತನ, 945 ಗ್ರೂಪ್‌-ಬಿ ಹುದ್ದೆಗಳಿಗೆ ಫೆ 1ರ ಮೊದಲು ಅರ್ಜಿ ಸಲ್ಲಿಸಿ

KPSC Jobs: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಮರುಚಾಲನೆ ನೀಡಿದೆ. ಒಟ್ಟು 945 ಹುದ್ದೆಗಳಿವೆ. ಅರ್ಜಿ ಸಲ್ಲಿಕೆ, ಹುದ್ದೆಗಳ ವರ್ಗೀಕರಣ, ಅರ್ಹತೆಗಳು ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಕೆಪಿಎಸ್‌ಸಿ: ಕೃಷಿ ಇಲಾಖೆಯಲ್ಲಿ ಉದ್ಯೋಗ, 43,100 -83,900 ರೂ ವೇತನ
ಕೆಪಿಎಸ್‌ಸಿ: ಕೃಷಿ ಇಲಾಖೆಯಲ್ಲಿ ಉದ್ಯೋಗ, 43,100 -83,900 ರೂ ವೇತನ

KPSC Jobs: ಕೃಷಿ ಇಲಾಖೆಯಲ್ಲಿ ಅಧಿಕಾರಿ ಹುದ್ದೆ ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ಕೃಷಿ ಇಲಾಖೆಯಲ್ಲಿನ ನೇಮಕಕ್ಕೆ ಕೆಪಿಎಸ್‌ಸಿ ಮರು ಚಾಲನೆ ನೀಡಿದೆ. ಕಳೆದ ವರ್ಷ ಸೆಪ್ಟಂಬರ್‌ ತಿಂಗಳಲ್ಲಿ ಕೆಪಿಎಸ್‌ಸಿಯು ಕೃಷಿ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಆದರೆ, ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಈ ಹುದ್ದೆಗಳಿಗೆ ಅಳವಡಿಸಬೇಕಿದ್ದ ಕಾರಣ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಇದೀಗ ಹೊಸ ವರ್ಷದ ಆರಂಭದಲ್ಲಿಯೇ ಕೆಪಿಎಸ್‌ಸಿಯು ಕೃಷಿ ಇಲಾಖೆಯ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 1, 2025ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೃಷಿ ಅಧಿಕಾರಿ (ಎಒ) ಮತ್ತು ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಕೆ ವಿಧಾನ, ಅರ್ಜಿ ಶುಲ್ಕ, ವಿದ್ಯಾರ್ಹತೆ ಸೇರಿದಂತೆ ಈ ಹುದ್ದೆಗಳಿಗೆ ಸಂಬಂಧಪಟ್ಟ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ.

ಕೆಪಿಎಸ್‌ಸಿ ನೇಮಕ ವಿವರ

ಎಲ್ಲಿ ಉದ್ಯೋಗ?: ಕೃಷಿ ಇಲಾಖೆ

ಹುದ್ದೆಗಳ ಹೆಸರು: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ

ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ಮೂಲಕ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 3, 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 1, 2025

ಒಟ್ಟು ಹುದ್ದೆಗಳ ಸಂಖ್ಯೆ: 947

ಹುದ್ದೆಗಳ ವಿವರ

ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ 86 ಮತ್ತು ಸಹಾಯಕ ಕೃಷಿ ಅಧಿಕಾರಿಗಳು 586 ಹುದ್ದೆಗಳಿವೆ. ಇದೇ ರೀತಿ ಹೃದರಾಬಾದ್‌ ಕರ್ನಾಟಕ ವೃಂದದಲ್ಲಿ ಕೃಷಿ ಅಧಿಕಾರಿಗಳು 42 ಮತ್ತು ಸಹಾಯಕ ಕೃಷಿ ಅಧಿಕಾರಿಗಳು 236 ಹುದ್ದೆಗಳಿವೆ.

ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಿ. ಎಸ್‌ಎಸ್‌ಎಲ್‌ಸಿಯನ್ನು 2002 ಅಥವಾ ಅದಕ್ಕಿಂತ ಮೊದಲು ಅಧ್ಯಯನ ಮಾಡಿರುವವರು ಸ್ವತಃ ನಮೂದು ಮಾಡಬೇಕಾಗುತ್ತದೆ. 2003ರ ನಂತರ ಎಸ್‌ಎಸ್‌ಎಲ್‌ಸಿ ಪೂರೈಸಿರುವವರು ಎಸ್‌ಎಸ್‌ಎಲ್‌ಸಿ ನೋಂದಣಿ ಸಂಖ್ಯೆ ನಮೂದಿಸಿದಾಗ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗುತ್ತವೆ. ಇದೇ ರೀತಿ ಸಿಬಿಎಸ್‌ಇಯನ್ನು 2003 ಮತ್ತು ಅದಕ್ಕಿಂತ ಮೊದಲು ಪೂರೈಸಿರುವವರು ಸ್ವತಃ ನಮೂದಿಸಬೇಕು. ಇದೇ ರೀತಿ ಪಿಯುಸಿಗೂ (2007/08 ಮೊದಲು) ಅನ್ವಯವಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿ, ಒಬಿಸಿಗೆ 300 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕ ಇರುತ್ತದೆ. ಎಸ್‌ಎಸ್‌ಸಿ, ಎಸ್‌ಟಿ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಪಾವತಿ ವಿಧಾನದ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ನೇರ ನೇಮಕದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆ ಪರೀಕ್ಷೆ ಇರಲಿದೆ.

ವಿದ್ಯಾರ್ಹತೆ

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಶೇಕಡ 85ರಷ್ಟು ಹುದ್ದೆಗಳಿಗೆ ಬಿಎಸ್ಸಿ ಕೃಷಿ, ಬಿಎಸ್ಸಿ ಆನರ್ಸ್‌ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಉಳಿದ ಕೃಷಿ ಅಧಿಕಾರಿ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಬಿಟೆಕ್‌, ಬಿಎಸ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಕೆಪಿಎಸ್‌ಸಿ ಎಒ ಮತ್ತು ಎಒಒ ನೇಮಕಾತಿ ಅಧಿಸೂಚನೆ ಪಿಡಿಎಫ್‌

ಉಳಿಕೆ ಮೂಲವೃಂದ ಅಧಿಸೂಚನೆ ಪಿಡಿಎಫ್‌

ಹೈದರಾಬಾದ್‌ ಕರ್ನಾಟಕ ವೃಂದ ಅಧಿಸೂಚನೆ ಪಿಡಿಎಫ್‌

 

 

ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ 86 ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: kpsc.kar.nic.in

Whats_app_banner