Court Jobs: ಸುಪ್ರೀಂ ಕೋರ್ಟ್‌ನಲ್ಲಿ 90 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 80 ಸಾವಿರ ರೂ ವೇತನ, ಫ್ರೆಶರ್ಸ್‌ಗೂ ಅವಕಾಶ
ಸುಪ್ರೀಂ ಕೋರ್ಟ್‌ನಲ್ಲಿ (Supreme Court of India) ಗುತ್ತಿಗೆ ಆಧಾರದಲ್ಲಿ ಲಾ ಕ್ಲರ್ಕ್ ಕಂ ರಿಸರ್ಚ್ ಅಸೋಸಿಯೇಟ್ (Law Clerk cum-Research Associates) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ (Supreme Court of India) ಗುತ್ತಿಗೆ ಆಧಾರದಲ್ಲಿ ಲಾ ಕ್ಲರ್ಕ್ ಕಂ ರಿಸರ್ಚ್ ಅಸೋಸಿಯೇಟ್ (Law Clerkcum-Research Associates) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಅಲ್ಪಾವಧಿಯ ಗುತ್ತಿಗೆ ಆಧರಿತ ಉದ್ಯೋಗವಾಗಿದೆ. ಸುಮಾರು 90 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. 2025-26ನೇ ಸಾಲಿನಲ್ಲಿ ನೇಮಕ ಮಾಡುವ ಈ ಹುದ್ದೆಗಳಿಗೆ ಪ್ರತಿತಿಂಗಳು 80 ಸಾವಿರ ರೂಪಾಯಿ ವೇತನ ನಿಗದಿಪಡಿಸಲಾಗಿದೆ.
ಇದು ತಾತ್ಕಾಲಿಕ ಹುದ್ದೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆಫ್ ಇಂಡಿಯಾದಲ್ಲಿ ಕಾಯಂ ಹುದ್ದೆಯೆಂದು ಪ್ರತಿಪಾದಿಸಬಾರದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉದ್ಯೋಗ ಸಮಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 7, 2025
ವಿದ್ಯಾರ್ಹತೆ ಏನು?
ಲಾ ಕ್ಲರ್ಕ್ ಕಂ ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಕಾನೂನು ಪದವಿ ಪೂರ್ಣಗೊಳಿಸಿರಬೇಕು. ಅಂತಿಮ ವರ್ಷದ ಪದವಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದು, ಆದರೆ, ಈ ಅಸೈನ್‌ಮೆಂಟ್‌ಗೆ ಸೇರುವ ಮುನ್ನ ಪದವಿ ಪೂರ್ಣಗೊಳಿಸಿರಬೇಕು. ಹೀಗಾಗಿ, ಇದು ಫ್ರೆಶರ್ಸ್‌ಗೂ ಅವಕಾಶವಿರುವ ಕೋರ್ಟ್ ಉದ್ಯೋಗವಾಗಿದೆ. ಅಭ್ಯರ್ಥಿಗಳಿಗೆ ರಿಸರ್ಚ್ ಮತ್ತು ಅನಾಲಿಟಿಕಲ್ ಕೌಶಲ ಇರಬೇಕು, ಬರವಣಿಗೆ, ಕಂಪ್ಯೂಟರ್ ಜ್ಞಾನ ಇರಬೇಕು. ಇ-ಎಸ್‌ಸಿಆರ್, ಮನುಪತ್ರ, ಎಸ್‌ಸಿಸಿ ಆನ್‌ಲೈನ್, ಲೆಕ್ಸಿನೆಕ್ಸಿಸ್, ವೆಸ್ಟ್‌ಲಾ ಇತ್ಯಾದಿಗಳಿಂದ ಮಾಹಿತಿ ಪಡೆಯಲು ತಿಳಿದಿರಬೇಕು.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸಲು ಕನಿಷ್ಠ 22 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಮೂರು ಹಂತಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಬಹು ಆಯ್ಕೆ ಮಾದರಿಯ (ಮಲ್ಟಿಪಲ್ ಚಾಯ್ಸ್) ಪ್ರಶ್ನೆಗಳು ಇರುತ್ತವೆ. ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ಇರುತ್ತದೆ. ಮೂರನೇ ಹಂದಲ್ಲಿ ಸಂದರ್ಶನ ಇರುತ್ತದೆ.
ಪರೀಕ್ಷಾ ಕೇಂದ್ರ
ಭಾರತದ ವಿವಿಧೆಡೆ ಪರೀಕ್ಷಾ ಕೇಂದ್ರಗಳು ಇರಲಿವೆ. ಕರ್ನಾಟಕದಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಾಗಿದೆ.
ಪರೀಕ್ಷೆ ದಿನಾಂಕ
ಲಾ ಕ್ಲರ್ಕ್ ಕಂ ಅಸೋಸಿಯೇಟ್ ಹುದ್ದೆಗೆ ಪರೀಕ್ಷೆಯು ಮಾರ್ಚ್ 9, 2025ರಂದು ನಡೆಯಲಿದೆ. ಮೊಲದ ಹಂತದ ಪರೀಕ್ಷೆಯು ಆನ್‌ಲೈನ್ ಮೋಡ್‌ನಲ್ಲಿ ನಡೆಯಲಿದೆ. ಎರಡನೇ ಹಂತದ ಪರೀಕ್ಷೆಯಲ್ಲಿ ಪ್ರಶ್ನೆಯು ಕಂಪ್ಯೂಟರ್‌ನಲ್ಲಿ ಕಾಣಲಿದೆ. ಅಭ್ಯರ್ಥಿಯು ಪೆನ್ ಮತ್ತು ಪೇಪರ್‌ನಲ್ಲಿ ಉತ್ತರ ಬರೆಬೇಕಿರುತ್ತದೆ. ಸರಿ ಉತ್ತರ ಕೀಗಳನ್ನು ಮಾರ್ಚ್ 10ರಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು sci.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಜಿ ಶುಲ್ಕ 500 ರೂಪಾಯಿ ಇರುತ್ತದೆ. ಅರ್ಜಿ ಶುಲ್ಕವನ್ನೂ ಆನ್‌ಲೈನ್ ಪಾವತಿ ವಿಧಾನದ ಮೂಲಕ ಪಾವತಿಸಬೇಕು.
