Indian Railways: ನಿಲ್ದಾಣಗಳ ನಡುವೆ ಕಾಮಗಾರಿ; ಕರ್ನಾಟಕ 8 ರೈಲು ಸಂಚಾರ ತಾತ್ಕಾಲಿಕ ರದ್ದು, ಪ್ರಮುಖ ರೈಲುಗಳ ಸೇವೆಗಳಲ್ಲಿ ಬದಲಾವಣೆ
Indian Railways: ತುಮಕೂರು ಜಿಲ್ಲೆಯ ನಿಟ್ಟೂರು ಹಾಗೂ ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.
ಬೆಂಗಳೂರು: ತುಮಕೂರು ಜಿಲ್ಲೆಯ ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 64 ರಲ್ಲಿ ತಾತ್ಕಾಲಿಕ ಗರ್ಡರ್ ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಸಂಚರಿಸುವ ಚಾಮರಾಜನಗರ, ಚಿಕ್ಕಮಗಳೂರು. ಶಿವಮೊಗ್ಗದ ಎಂಟು ರೈಲುಗಳ ಸೇವೆ ಎರಡು ದಿನ ರದ್ದಾಗಲಿದೆ. ಇದಲ್ಲದೇ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಂಚಾರ ಭಾಗಶಃ ರದ್ದು ಮಾಡಲಾಗಿದೆ. ರೈಲುಗಳ ಸೇವೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲುಗಳ ಸಂಚಾರ ರದ್ದು
2025ರ ಜನವರಿ 2 ಮತ್ತು 9 ರಂದು ತುಮಕೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ಸ್ಪೆಷಲ್ (07346), ಚಾಮರಾಜನಗರ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ (07328), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ (16239), ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (16240), ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್ (06576), ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06575), ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ್ ಪ್ರೆಸ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ ಇಂಟರ್ ಸಿಟಿ ಡೈಲಿ ಎಕ್ಸ್ ಪ್ರೆಸ್ (16580) ರೈಲುಗಳ ಸಂಚಾರ ತಾತ್ಕಾಲಿಕ ರದ್ದಾಗಲಿದೆ.
ಭಾಗಶಃ ರದ್ದು ರೈಲುಗಳು
2025ರ ಜನವರಿ 02 ಮತ್ತು 09 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ಹಿರೇಹಳ್ಳಿ-ತುಮಕೂರು ನಿಲ್ದಾಣಗಳ ನಡುವೆ, ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ತುಮಕೂರು-ಹಿರೇಹಳ್ಳಿ ನಿಲ್ದಾಣಗಳ ನಡುವೆ, ತಾಳಗುಪ್ಪ-ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (20652) ರೈಲು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (12725) ರೈಲು ಕೆಎಸ್ಆರ್ ಬೆಂಗಳೂರು-ಅರಸೀಕೆರೆ ನಿಲ್ದಾಣಗಳ ನಡುವೆ, ಧಾರವಾಡ-ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (12726) ರೈಲು ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಮತ್ತು ತುಮಕೂರು-ಯಶವಂತಪುರ ಮೆಮು ವಿಶೇಷ (06201) ರೈಲು ತುಮಕೂರು-ಹಿರೇಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ.
ರೈಲುಗಳ ಮಾರ್ಗ ಬದಲಾವಣೆ
2025ರ ಜನವರಿ 1 ಮತ್ತು 8 ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಈ ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಜನವರಿ 2 ಮತ್ತು 9, 2025 ರಂದು ಮೈಸೂರಿನಿಂದ ಹೊರಡುವ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ತುಮಕೂರು ನಿಲ್ದಾಣದಲ್ಲಿ ಇರುವುದಿಲ್ಲ.
ರೈಲು ಸಂಖ್ಯೆ 20667 ಯಶವಂತಪುರ-ಜೈಪುರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಜನವರಿ 2 ಮತ್ತು 9, 2025 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ಈ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ತುಮಕೂರು ನಿಲ್ದಾಣದಲ್ಲಿ ತಪ್ಪಿರುತ್ತದೆ.
ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು 2025ರ ಜನವರಿ 2 ಮತ್ತು 9 ರಂದು ಮೈಸೂರಿನಿಂದ ಹೊರಡುವ ಈ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮತ್ತು ದಾವಣಗೆರೆ ನಿಲ್ದಾಣಗಳ ಮೂಲಕ ಚಲಿಸಲಿದೆ.
2025ರ ಜನವರಿ 2 ಮತ್ತು 9 ರಂದು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆ ತಪ್ಪಿರುತ್ತದೆ.
ರೈಲುಗಳ ನಿಯಂತ್ರಣ
2024ರ ಡಿಸೆಂಬರ್ 31, ಮತ್ತು 2025 ರ ಜನವರಿ 7, ರಂದು ಬಿಕಾನೇರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16588 ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 120 ನಿಮಿಷ ನಿಯಂತ್ರಿಸಲಾಗುವುದು.
ಜನವರಿ 2 ಮತ್ತು 9 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್ ದ್ವಿ-ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 50 ನಿಮಿಷ, ರೈಲು ಸಂಖ್ಯೆ 20651 ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ10 ನಿಮಿಷ, ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 07345 ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಸಮಯ ಮರುನಿಗದಿ
ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್ ಪ್ರೆಸ್ ಜನವರಿ 2 ಮತ್ತು 9 ರಂದು ಯಶವಂತಪುರ ನಿಲ್ದಾಣದಿಂದ 30 ನಿಮಿಷ ತಡವಾಗಿ ಹೊರಡಲಿದೆ.