ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ, 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲ
ಕನ್ನಡ ಸುದ್ದಿ  /  ಕರ್ನಾಟಕ  /  ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ, 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲ

ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ, 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲ

ಪಿಎಫ್ ಖಾತೆ ಮೊತ್ತ ವರ್ಗಾವಣೆಗೆ ಸಂಬಂಧಿಸಿದ ನಿಯಮವನ್ನು ಪರಿಷ್ಕರಿಸಲಾಗಿದೆ. ಇದರಿಂದಾಗಿ, ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ. 1 ಕೋಟಿಗೂ ಅಧಿಕ ಚಂದಾದಾರರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. (ಸಾಂಕೇತಿಕ ಚಿತ್ರ)
ಪಿಎಫ್ ಖಾತೆ ಮೊತ್ತ ವರ್ಗಾವಣೆ ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಮಹತ್ವದ ಸುಧಾರಣಾ ಬೆಳವಣಿಗೆಯೊಂದರಲ್ಲಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆ ವರ್ಗಾವಣೆ ನಿಯಮವನ್ನು ಸರಳಗೊಳಿಸಿದೆ. ಈ ಕ್ರಮದಿಂದಾಗಿ 1.25 ಕೋಟಿ ಇಪಿಎಫ್‌ಒ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಸರಳವಾಗಿ ಹೇಳಬೇಕು ಎಂದರೆ, ಪಿಎಫ್ ಖಾತೆ ವರ್ಗಾವಣೆ (ಪಿಎಫ್ ಮೊತ್ತ ವರ್ಗಾವಣೆ) ಮಾಡೋದಿನ್ನು ಸುಲಭ, ಉದ್ಯೋಗದಾತರ ಅನುಮೋದನೆ ಬೇಕಿಲ್ಲ.

ಕೆಲಸ ಬದಲಾಯಿಸಿದಾಗ ಪಿಎಫ್‌ ಖಾತೆ ವರ್ಗಾವಣೆ ಇನ್ನು ಸುಲಭ

ಪಿಎಫ್ ಖಾತೆ ವರ್ಗಾವಣೆಗೆ ಈ ಮೊದಲು ಉದ್ಯೋಗದಾತರ ಅನುಮೋದನೆ ಬೇಕಾಗಿತ್ತು. ಇನ್ನು ಹಾಗೆ ಕಾಯಬೇಕಾಗಿಲ್ಲ. ಉದ್ಯೋಗಿಗಳು ಕೆಲಸ ಬದಲಾಯಿಸಿದಾಗ ಈ ರೀತಿ ಉದ್ಯೋಗದಾತರ ಅನುಮೋದನೆ ಪಡೆದೇ ಪಿಎಫ್‌ ಖಾತೆ ಮತ್ತು ಖಾತೆಯ ಮೊತ್ತ ವರ್ಗಾವಣೆ ಮಾಡಬೇಕಾಗಿತ್ತು. ಈಗ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ನಿಯಮ ಸರಳಗೊಳಿಸಿ ಅದನ್ನು 2025 ಜನವರಿಯಿಂದಲೇ ಜಾರಿಗೊಳಿಸಿದೆ.

ಅಂದ ಹಾಗೆ, ಭವಿಷ್ಯ ನಿಧಿ ಮೊತ್ತದ ವರ್ಗಾವಣೆ ಪ್ರಕ್ರಿಯೆಯು ನೌಕರರ ಭವಿಷ್ಯ ನಿಧಿಯ (ಇಪಿಎಫ್‌) ಎರಡು ಕಚೇರಿಗಳ ನಡುವೆ ನಡೆಯುತ್ತಿತ್ತು. ಅಂದರೆ ಉದ್ಯೋಗಿಯು ಕೆಲಸಕ್ಕೆ ಸೇರಿದ ವೇಳೆ ಪಿಎಫ್‌ ಖಾತೆ ತೆರೆದ ಮೂಲ ಕಚೇರಿ ಮತ್ತು ಅಂತಿಮವಾಗಿ ಪಿಎಫ್‌ ಮೊತ್ತ ಜಮೆ ಮಾಡುವ ಕಚೇರಿ ನಡುವೆ ಈ ಪ್ರಕ್ರಿಯೆ ಜರುಗುತ್ತಿತ್ತು, ಇದರಲ್ಲಿ ಉದ್ಯೋಗದಾತರ ಅನುಮೋದನೆ ಕಡ್ಡಾಯವಾಗಿತ್ತು. ಈಗ ಇಪಿಎಫ್‌ಒ ಚಂದಾದಾರರಿಗೆ ಅನುಕೂಲ ಕಲ್ಪಿಸಲು ಹಳೆಯ ನಿಯಮವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಪಿಎಫ್‌ ಖಾತೆ ವರ್ಗಾವಣೆಗೆ ಸಂಬಂಧಿಸಿದ ಅರ್ಜಿ ನಮೂನೆ 13 ಪರಿಷ್ಕರಣೆ

ಉದ್ಯೋಗ ಬದಲಾಯಿಸಿದ ಸಂದರ್ಭದಲ್ಲಿ ಪಿಎಫ್ ಖಾತೆ ವರ್ಗಾವಣೆಗಾಗಿ ಯಾವುದೇ ಉದ್ಯೋಗಿಯು ಅರ್ಜಿ ನಮೂನೆ 13 ಅನ್ನು ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯ. ಪಿಎಫ್ ಮೊತ್ತವನ್ನು ಜಮೆ ಮಾಡಬೇಕಾಗಿರುವ ಕಚೇರಿಯು ಇದಕ್ಕೆ ಅನುಮೋದನೆ ನೀಡಬೇಕಾಗಿತ್ತು. ಈಗ ಈ ಅರ್ಜಿ ನಮೂನೆಯನ್ನು ಪರಿಷ್ಕರಿಸಿದ್ದು, ಉದ್ಯೋಗದಾತರು ಅನುಮೋದನೆ ನೀಡುವ ಅಂಶವನ್ನು ಕೈಬಿಡಲಾಗಿದೆ. ಇದಕ್ಕಾಗಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಈಗ ಪಿಎಫ್ ಖಾತೆ ವರ್ಗಾವಣೆಗೆ ಮೂಲ ಕಚೇರಿಯಿಂದ ಅನುಮೋದನೆ ಸಿಕ್ಕಿದರೆ ಸಾಕು. ಆ ಕೂಡಲೇ ಮೂಲ ಖಾತೆಯ ಮೊತ್ತವು ಉದ್ಯೋಗಿಯ ಹಾಲಿ ಖಾತೆಗೆ ಸ್ವಯಂ ಚಾಲಿತವಾಗಿ ಜಮೆಯಾಗುತ್ತದೆ. ಇದರಿಂದ ಚಂದಾದಾರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ನಿಯಮ ಸರಳಗೊಳಿಸಿದ ಕಾರಣ 90,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಕ್ಷಿಪ್ರವಾಗಿ ಉದ್ಯೋಗಿಗಳ ಖಾತೆಗೆ ಜಮೆಯಾಗಲಿದೆ ಎಂದು ಭಾರತ ಸರ್ಕಾರ ಹೇಳಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.