Puc Exam Results 3: ದ್ವಿತೀಯ ಪಿಯುಸಿ ಮರುಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ, ಒಟ್ಟಾರೆ ಫಲಿತಾಂಶ ಹೇಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Puc Exam Results 3: ದ್ವಿತೀಯ ಪಿಯುಸಿ ಮರುಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ, ಒಟ್ಟಾರೆ ಫಲಿತಾಂಶ ಹೇಗಿದೆ

Puc Exam Results 3: ದ್ವಿತೀಯ ಪಿಯುಸಿ ಮರುಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ, ಒಟ್ಟಾರೆ ಫಲಿತಾಂಶ ಹೇಗಿದೆ

Education News ಕರ್ನಾಟಕದಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ 3 ರ ಫಲಿತಾಂಶದಲ್ಲಿ ಬಾಲಕಿಯರೇ ಹೆಚ್ಚು ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶ ಹೊರ ಬಿದ್ದಿದೆ.
ಕರ್ನಾಟಕದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶ ಹೊರ ಬಿದ್ದಿದೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಹಾಗೂ ಅಂಕ ಉತ್ತಮಗೊಳಿಸಿಕೊಳ್ಳಲು ಬಯಸಿದ್ದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರನೇ ಪೂರಕ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಈ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ನಂತರದ ಸ್ಥಾನದಲ್ಲಿದ್ದಾರೆ. ಈ ಬಾರಿಯ ಪರೀಕ್ಷೆಗೆ ಬಯಸಿದ್ದ ಒಟ್ಟು 76005 ವಿದ್ಯಾರ್ಥಿಗಳಲ್ಲಿ 75466 ಪರೀಕ್ಷೆಗೆ ಹಾಜರಾಗಿದ್ದವರು. ಇವರಲ್ಲಿ 17911 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ. 23.73ರಷ್ಟು ಫಲಿತಾಂಶ ಲಭಿಸಿದೆ ಎಂದು ಮಂಡಲಿ ಅಧ್ಯಕ್ಷೆಯಾಗಿರುವ ಐಎಎಸ್‌ ಅಧಿಕಾರಿ ಎನ್‌.ಮಂಜುಶ್ರೀ ತಿಳಿಸಿದ್ದಾರೆ.

ಇದರಲ್ಲಿ 44027 ಬಾಲಕರು ಹಾಜರಾಗಿ 9531 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರ ಉತ್ತೀರ್ಣದ ಪ್ರಮಾಣ ಶೇ 21.65 . ಅದೇ ರೀತಿ 31439 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು 8380 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಫಲಿತಾಂಶ ಪ್ರಮಾಣ ಶೇ. 26.45ರಷ್ಟಿದೆ.

ಕಲಾವಿಭಾಗದಲ್ಲಿ 30489 ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 6618 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ಕಲಾ ವಿಭಾಗದ ಫಲಿತಾಂಶ ಪ್ರಮಾಣ ಶೇ. 21.71

ವಾಣಿಜ್ಯ ವಿಭಾಗದಲ್ಲಿ 25264ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 5958 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ವಾಣಿಜ್ಯ ವಿಭಾಗದ ಫಲಿತಾಂಶ ಪ್ರಮಾಣ ಶೇ. 23.58

ವಿಜ್ಞಾನ ವಿಭಾಗದಲ್ಲಿ 19713 ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 5335 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ವಿಜ್ಞಾನ ವಿಭಾಗದ ಫಲಿತಾಂಶ ಪ್ರಮಾಣ ಶೇ. 27.73.

ಸುಧಾರಣೆ ಬಯಸಿದವರು ಬಿಟ್ಟು

ಇನ್ನು ಫಲಿತಾಂಶ ಪೂರ್ಣಗೊಂಡಿರದ, ಪುನರಾವರ್ತಿತ ಹಾಗೂ ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ ಖಾಸಗಿ ವಿದ್ಯಾರ್ಥಿಗಳಲ್ಲಿ ಹಾಗೂ ಪರೀಕ್ಷೆ ಸುಧಾರಣೆ ಬಯಸಿದ ವಿದ್ಯಾರ್ಥಿಗಳನ್ನ ಹೊರತುಪಡಿಸಿ ಫಲಿಶಾಂಶ ಹೀಗಿದೆ.

ಕಲಾವಿಭಾಗದಲ್ಲಿ 30158 ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 6445 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ಕಲಾ ವಿಭಾಗದ ಫಲಿತಾಂಶ ಪ್ರಮಾಣ ಶೇ. 21.37

ವಾಣಿಜ್ಯ ವಿಭಾಗದಲ್ಲಿ24960 ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ5787 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ವಾಣಿಜ್ಯ ವಿಭಾಗದ ಫಲಿತಾಂಶ ಪ್ರಮಾಣ ಶೇ. 23. 19

ವಿಜ್ಞಾನ ವಿಭಾಗದಲ್ಲಿ 15884 ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 3566 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ಧಾರೆ. ವಿಜ್ಞಾನ ವಿಭಾಗದ ಫಲಿತಾಂಶ ಪ್ರಮಾಣ ಶೇ. 22.45.

ಉತ್ತರ ಪತ್ರಿಕೆ ಪಡೆಯೋದು ಹೇಗೆ

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಉತ್ತರ ಪತ್ರಿಕೆಯ ಸ್ಕಾನ್‌ ಪ್ರತಿ ಪಡೆಯಲು ಅವಕಾಶವಿದೆ. ಇದಲ್ಲದೇ ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಆನ್‌ಲೈನ್‌ ಮುಖಾಂತರವೇ ಅರ್ಜಿ ಸಲ್ಲಿಸಬೇಕು.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಜುಲೈ 17ರಿಂದ 21 ರವರಗೆ ಅವಕಾಶವಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿ ಪಡೆಯಲು kseab.karnataka.gov.in ವೆಬ್‌ಸೈಟ್‌ ಮೂಲಕ ಡೌನ್‌ ಮಾಡಿಕೊಳ್ಳಬಹುದು. ಜುಲೈ 18ರಿಂದ ಜುಲೈ 22ರವರೆಗೆ ಅವಕಾಶವಿದೆ. ಕಡ್ಡಾಯವಾಗಿ ಸ್ಕ್ಯಾನಿಂಘ್‌ ಪ್ರತಿ ತೆಗದುಕೊಂಡವರಿಗೆ ಮಾತ್ರ ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕೂಜುಲೈ 18ರಿಂದ ಜುಲೈ 24 ರವರೆಗೆ ಸಮಯಾವಕಾಶವಿದೆ.

ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರು ಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ 1670 ರೂ. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಡಲಿಯ ಸಹಾಯವಾಣಿ ಸಂಖ್ಯೆ 080 23310075 ಮತ್ತು 080 23310076 ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

Whats_app_banner