ಕನ್ನಡ ಸುದ್ದಿ  /  Karnataka  /  Explainer Bangalore News Karnataka Forest Department Had Guidelines For Compensation On Wildlife Attack Kub

Expaliner: ವನ್ಯಜೀವಿ ದಾಳಿಯಿಂದ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ನೀಡಲು ಇರುವ ಮಾನದಂಡಗಳೇನು, ಹೊರ ರಾಜ್ಯದವರಿಗೆ ನೀಡಬಹುದೇ

Kerala Elephant Attack: ಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದು, ಕರ್ನಾಟಕ ಅರಣ್ಯ ಇಲಾಖೆ ಪರಿಹಾರ ನೀಡಿದೆ. ಇದಕ್ಕೆ ಅವಕಾಶ ಇದೆಯೇ, ಇಲಾಖೆ ಮಾರ್ಗಸೂಚಿ ಏನು? ಇಲ್ಲಿದೆ ವಿವರ.

ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಅರಣ್ಯ ಇಲಾಖೆ ಪರಿಹಾರ ನೀಡಿದ್ದು ಚರ್ಚೆಗೆ ಕಾರಣವಾಗಿದೆ.
ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಅರಣ್ಯ ಇಲಾಖೆ ಪರಿಹಾರ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಕೇರಳದಲ್ಲಿ ವ್ಯಕ್ತಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಅವರು ಕರ್ನಾಟಕದಲ್ಲಿ ಸೆರೆ ಹಿಡಿದು ಬಿಟ್ಟ ಆನೆಯಿಂದ ಜೀವ ಕಳೆದುಕೊಂಡಿದ್ಧಾರೆ ಎನ್ನುವ ಕಾರಣ ನೀಡಿ ಕರ್ನಾಟಕ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ಕರ್ನಾಟಕದಿಂದ ಹೊರಗಡೆ ಮೃತಪಟ್ಟವರಿಗೆ ಪರಿಹಾರ ನೀಡುವ ಕ್ರಮ ಇದೇ ಮೊದಲಾಗಿರುವುದು, ಇದಕ್ಕೆ ರಾಜಕೀಯ ತಳುಕು ಹಾಕಿಕೊಂಡಿರುವುದು ಚರ್ಚೆಯ ಸ್ವರೂಪವನ್ನು ತೀವ್ರಗೊಳಿಸಿದೆ.

ವನ್ಯಜೀವಿಗಳಿಂದ ದಾಳಿಗೊಳಗಾದರೆ ಪರಿಹಾರ ನೀಡಲು ಕರ್ನಾಟಕ ಅರಣ್ಯ ಇಲಾಖೆಯೇ ಹಲವಾರು ಮಾನದಂಡಗಳನ್ನು ರೂಪಿಸಿದೆ. ಅದರ ಪ್ರಕಾರವೇ ಪರಿಹಾರವನ್ನು ವಿತರಿಸಬೇಕು ಎನ್ನುವ ನಿಯಮವೂ ಇದೆ. ಅದರಲ್ಲೂ ಕರ್ನಾಟಕದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೆ ಮಾತ್ರ ಪರಿಹಾರ ನೀಡಬೇಕು ಎನ್ನುವ ಸ್ಪಷ್ಟ ಮಾರ್ಗಸೂಚಿಯೂ ಇದೆ.

ಈ ಕುರಿತು ಕರ್ನಾಟಕ ಅರಣ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯ ಅಂಶಗಳು ಹೀಗಿವೆ.

 • ವನ್ಯಜೀವಿ ದಾಳಿ ಮಾಡಿ ವ್ಯಕ್ತಿ ಮೃತಪಟ್ಟಿದ್ದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಪರಿಹಾರ ನೀಡಲು ಅವಕಾಶವಿದೆ.
 • ವನ್ಯಜೀವಿ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ ಮೊದಲು 5 ಲಕ್ಷ ರೂ. ಇದ್ದ ಪರಿಹಾರದ ಪ್ರಮಾಣವನ್ನು ಆನಂತರ 7.50 ಲಕ್ಷ ರೂ.ಗೆ ಏರಿಸಲಾಗಿತ್ತು. ಆನಂತರ 10ಲಕ್ಷಕ್ಕೆ ಏರಿಸಲಾಗಿತ್ತು. ಎರಡು ವರ್ಷದ ಹಿಂದೆ ಈ ಮೊತ್ತವನ್ನು 15 ಲಕ್ಷ ರೂ.ಗೆ ಏರಿಸಲಾಗಿದೆ.
 • ವ್ಯಕ್ತಿ ಮೃತಪಟ್ಟರೆ 15 ಲಕ್ಷ ರೂ. ಪರಿಹಾರ ನೀಡಬಹುದು. ಗಾಯಗೊಂಡಿದ್ದರೆ ತೀವ್ರತೆ ನೋಡಿಕೊಂಡು ಮೊತ್ತವನ್ನು ನಿರ್ಧರಿಸಲಾಗುತ್ತದೆ. ಸಂತ್ರಸ್ತರು ವೈದ್ಯಕೀಯ ವೆಚ್ಚಗಳನ್ನು ಪಡೆಯುವುದಕ್ಕೂ ಅರ್ಹರಾಗಿರುತ್ತಾರೆ.
 • ನಿಗದಿತ ಪರಿಹಾರದ ಜತೆಗೆ 5 ವರ್ಷಗಳವರೆಗೆ ಕಾನೂನುಬದ್ಧ ಉತ್ತರಾಧಿಕಾರಿಗೆ ರೂ. 2,000 ಮಾಸಿಕ ಪಿಂಚಣಿ ಯನ್ನೂ ನೀಡಲಾಗುತ್ತದೆ.
 • ಪರಿಹಾರವನ್ನು ಮೊದಲ ಹಂತದಲ್ಲಿ ಇಂತಿಷ್ಟು ಬಿಡುಗಡೆ ಮಾಡಲಾಗುತ್ತದೆ. ಆನಂತರ ಘಟನೆಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಉಳಿಕೆ ಮೊತ್ತವನ್ನು ಮೃತಪಟ್ಟವರ ಕುಟುಂಬಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿರಿ: Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌; ಕಿಚ್ಚನ ಮಗಳು ಶಾನ್ವಿ ಸುದೀಪ್‌ ನೀಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

 • ಇದಕ್ಕೆ ಬೇಕಾದ ದಾಖಲೆಗಳನ್ನು ಕುಟುಂಬದವರು ಅರಣ್ಯ ಇಲಾಖೆ ಸಲ್ಲಿಸಬೇಕು. ಸಕಾಲ ನಿಯಮದಂತೆಯೇ ಪರಿಹಾರವನ್ನು ಬಿಡುಗಡ ಮಾಡಲಾಗುತ್ತದೆ.
 • ವನ್ಯಜೀವಿ ಎನ್ನುವ ಶಬ್ದವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಪವಿಭಾಗ 2(36)ರಲ್ಲಿ ಒದಗಿಸಲಾಗಿರುವ ವ್ಯಾಖ್ಯಾನದ ಅನುಸಾರ ‘ಕಾಡು ಮೃಗ’ ಷೆಡ್ಯೂಲ್1 ರಿಂದ 4 ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ ದಾಳಿ ಮಾಡಿದಾಗ ಪರಿಹಾರ ಪಡೆಯಬಹುದು.
 • ಆನೆ, ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಜಿಂಕೆ, ಮೊಸಳೆ, ಸೀಳು ನಾಯಿ ಸಹಿತ ಪ್ರಮುಖ ಪ್ರಾಣಿಗಳು ಈ ಪಟ್ಟಿಯಲ್ಲಿ ಬರುತ್ತವೆ.
 • ಸಂತ್ರಸ್ತ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಲಿಲ್ಲ ಮತ್ತು ವನ್ಯಜೀವಿ ದಾಳಿ ಸಂದರ್ಭ ಅರಣ್ಯ ಪ್ರದೇಶದಲ್ಲಿ ಅತಿಕ್ರಮಿಸಿ ಅಡ್ಡಾಡುತ್ತಿರಲಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ವನ್ಯಜೀವಿಯಿಂದ ಗಾಯಗೊಂಡ ವ್ಯಕ್ತಿ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ.
 • ಗಾಯ/ವೈಕಲ್ಯದ ಕಾರಣ ಮತ್ತು ಸ್ವರೂಪವನ್ನು ಖಚಿತಪಡಿಸುವುದಕ್ಕೆ ಜಿಲ್ಲಾ ಸರ್ಕಾರಿ ವೈದ್ಯರಿಂದ ವೈದ್ಯಕೀಯ ವರದಿಯನ್ನು ಪಡೆದುಕೊಳ್ಳಬೇಕು. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಕಾನೂನುವ್ಯಾಪ್ತಿಗೆ ಸಂಬಂಧಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಮಾಡಿಸಬೇಕು. ಸಂತ್ರಸ್ತರ/ ಉತ್ತರಾಧಿಕಾರಿಯ ಆಧಾರ್‌ ಸಂಖ್ಯೆ ಡಿ. ಪರಿಹಾರ ಮೊತ್ತವನ್ನು ಪಾವತಿಸಬೇಕಾದ ಸಂತ್ರಸ್ತರ ಬ್ಯಾಂಕ್‌ ಖಾತೆ ವಿವರಗಳನ್ನು ಸಲ್ಲಿಸಬೇಕು.
 • ಆಯಾ ವ್ಯಾಪ್ತಿಯ ವಲಯಾರಣ್ಯಧಿಕಾರಿ ಮೂಲಕ ಅರ್ಜಿ ಸಲ್ಲಿಸಬೇಕು. ವಿಭಾಗದ ಮುಖ್ಯಸ್ತರಾದ ಡಿಸಿಎಫ್‌ ಹಂತದಲ್ಲಿ ಪರಿಹಾರ ಬಿಡುಗಡೆಯಾಗುತ್ತದೆ.
 • ಯಾವುದೇ ಘಟನೆ ಅರಣ್ಯ ಪ್ರದೇಶದ ಹೊರಗೆ, ಅದರಲ್ಲೂ ಕರ್ನಾಟಕದಲ್ಲಿಯೇ ನಡೆದಿರಬೇಕು. ಅರಣ್ಯದ ಒಳಗೆ ಆಗಿದ್ದರೂ ಅದು ಅತಿಕ್ರಮ ಪ್ರವೇಶವಾಗಿರುವುದರಿಂದ ಪರಿಹಾರಕ್ಕೆ ಅವಕಾಶವಿಲ್ಲ.

ಇದನ್ನೂ ಓದಿರಿ:ಜೂನಿಯರ್‌ ಕೊಹ್ಲಿ ಆಗಮನಕ್ಕೆ ತೆಂಡೂಲ್ಕರ್‌ ಸಂತಸ; ವಿರುಷ್ಕ ದಂಪತಿಗೆ ಕ್ರಿಕೆಟ್‌ ದೇವರ ಅಭಿನಂದನೆ

 • ಕೆಲವೊಂದು ಬಾರಿ ಅರಣ್ಯದೊಳಗೆ ಉತ್ಪನ್ನಗಳನ್ನು ತರಲು ಹೋದಾಗ ದಾಳಿಯಾದ ಸನ್ನಿವೇಶವೂ ಉಂಟು. ಆಗ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಿರುವ ಉದಾಹರಣೆಗಳೂ ಇವೆ.
 • ಹೊರ ರಾಜ್ಯದವರು ಕರ್ನಾಟಕದಲ್ಲಿ ವನ್ಯಜೀವಿ ದಾಳಿಗೆ ಒಳಗಾಗಿ ಮೃತಪಟ್ಟಾಗ ಪರಿಹಾರ ನೀಡಿದ್ದೂ ಇದೆ.
 • ಹೊರ ರಾಜ್ಯದಲ್ಲಿ ಮೃತಪಟ್ಟವರಿಗೆ ಕರ್ನಾಟಕ ಅರಣ್ಯ ಇಲಾಖೆಯಿಂದ ಪರಿಹಾರ ನೀಡಿರುವುದು ಇದೇ ಮೊದಲು.

IPL_Entry_Point