ಕನ್ನಡ ಸುದ್ದಿ  /  Karnataka  /  Explainer Karnataka Election Expenditure: Why Indian Election World Most Expensive, How Much Cost Elect An Mla Pcp

Election Cost: ಭಾರತದ ಚುನಾವಣೆ ಜಗತ್ತಿನಲ್ಲಿಯೇ ದುಬಾರಿ, ಶಾಸಕರೊಬ್ಬರ ಆಯ್ಕೆಗೆ ಬೇಕು ಹಲವು ಕೋಟಿ, ಇಲ್ಲಿದೆ ಕರ್ನಾಟಕ ಚುನಾವಣೆಯ ಲೆಕ್ಕಾಚಾರ

ಕರ್ನಾಟಕ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದೆ. ಈ ಚುನಾವಣೆಗೆ ಚುನಾವಣಾ ಆಯೋಗ (Election Commision) ಎಷ್ಟು ಹಣ ಖರ್ಚು ಮಾಡುತ್ತಿದೆ (Election Expenditure)? ಏಕೆ ಭಾರತದ ಚುನಾವಣೆ ಜಗತ್ತಿನಲ್ಲಿಯೇ ದುಬಾರಿ ಏಕೆ? ಒಬ್ಬ ಎಂಎಲ್‌ಎ ಆಯ್ಕೆಗೆ ಎಷ್ಟು ಖರ್ಚಾಗುತ್ತದೆ(Cost Elect an MLA) ಇತ್ಯಾದಿ ಲೆಕ್ಕಾಚಾರದ ಮಾಹಿತಿ ಇಲ್ಲಿದೆ.

Election Cost: ಭಾರತದ ಚುನಾವಣೆ ಜಗತ್ತಿನಲ್ಲಿಯೇ ದುಬಾರಿ, ಶಾಸಕರೊಬ್ಬರ ಆಯ್ಕೆಗೆ ಬೇಕು ಹಲವು ಕೋಟಿ, ಇಲ್ಲಿದೆ ಕರ್ನಾಟಕ ಚುನಾವಣೆಯ ಲೆಕ್ಕಾಚಾರ (PTI)
Election Cost: ಭಾರತದ ಚುನಾವಣೆ ಜಗತ್ತಿನಲ್ಲಿಯೇ ದುಬಾರಿ, ಶಾಸಕರೊಬ್ಬರ ಆಯ್ಕೆಗೆ ಬೇಕು ಹಲವು ಕೋಟಿ, ಇಲ್ಲಿದೆ ಕರ್ನಾಟಕ ಚುನಾವಣೆಯ ಲೆಕ್ಕಾಚಾರ (PTI)

ಕರ್ನಾಟಕ ವಿಧಾನಸಭೆ ಚುನಾವಣೆ(Karnataka Election)ಗೆ ದಿನಗಣನೆ ಆರಂಭವಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಶಾಸಕ/ಶಾಸಕಿ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ, ಗೊತ್ತಿದ್ದು, ಗೊತ್ತಿಲ್ಲದೆ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆಗೆ ರಾಜಕಾರಣಿಗಳಿಂದ ನೇಪತ್ಯದಲ್ಲಿ ನಡೆಯುವ ಹಣದ ಲೆಕ್ಕ ಅಷ್ಟು ಸುಲಭವಾಗಿ ಜಪ್ತಿಗೆ ಸಿಗುವಂತಹದ್ದಲ್ಲ. ಆದರೆ, ಕರ್ನಾಟಕ ಚುನಾವಣಾ ಆಯೋಗವು ಕರ್ನಾಟಕದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರೊಬ್ಬರನ್ನು ಆಯ್ಕೆ ಮಾಡಲು ಹಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಅನಿವಾರ್ಯತೆಯಿದೆ.

ಚುನಾವಣಾ ಆಯೋಗದ ಒಂದು ಅಂದಾಜಿನ ಪ್ರಕಾರ ಈ ವರ್ಷ ಕರ್ನಾಟಕದಲ್ಲಿ ಚುನಾವಣೆ ನಡೆಸಲು ನೂರಾರು ಕೋಟಿ ರೂಪಾಯಿ ಹಣ ವ್ಯಯಿಸಬೇಕಿದೆ. ಆಯೋಗದ ಪ್ರಕಾರ ಒಬ್ಬ ಎಂಎಲ್‌ಎ ಆಯ್ಕೆಗೆ ಸರಾಸರಿ 2.2 ಕೋಟಿ ರೂಪಾಯಿಗೂ ಹೆಚ್ಚು ಹಣ ವಿನಿಯೋಗ ಮಾಡಬೇಕಿರುತ್ತದೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ಈ ವರ್ಷ ಕರ್ನಾಟಕದ ಚುನಾವಣೆಯ ವೆಚ್ಚ 511 ಕೋಟಿ ರೂ. ಆಸುಪಾಸಿನಲ್ಲಿರಲಿದೆ.

ಕಳೆದ ವಿಧಾನಸಭೆಯ ಚುನಾವಣೆಯ ಖರ್ಚುವೆಚ್ಚ ಎಷ್ಟು ಎಂಬ ಸಂದೇಹ ನಿಮ್ಮಲ್ಲಿರಬಹುದು. ಕಳೆದ ವರ್ಷ ರಾಜ್ಯದಲ್ಲಿ ಚುನಾವಣಾ ಆಯೋಗವು 394 ಕೋಟಿ ರೂಪಾಯಿ ಖರ್ಚು ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 1.75 ಕೋಟಿ ರೂಪಾಯಿ ಖರ್ಚು ಮಾಡಿದೆ. 2013ರಲ್ಲಿ ಒಂದು ರಾಜ್ಯದ ಚುನಾವಣೆಗೆ ಸುಮಾರು 160 ಕೋಟಿ ರೂಪಾಯಿ ಖರ್ಚಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 65 ಲಕ್ಷ ರೂಪಾಯಿ ಖರ್ಚಾಗಿದೆ. ಚುನಾವಣೆಯಿಂದ ಚುನಾವಣೆಗೆ ಚುನಾವಣಾ ಖರ್ಚು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಗಮನಿಸಬಹುದು.

ದೇಶದಲ್ಲಿ ಹಣದ ಮೌಲ್ಯ ಕುಸಿತ, ಹಣದುಬ್ಬರ ಇತ್ಯಾದಿ ಕಾರಣಗಳಿಂದ ಚುನಾವಣಾ ವೆಚ್ಚ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿ ಯಾವ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಖರ್ಚಾಗಲಿದೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಒಂದೊಂದು ಕ್ಷೇತ್ರವೂ ಅದರ ಗಾತ್ರ, ವಿಸ್ತಾರದಿಂದ ಭಿನ್ನವಾಗಿವೆ. ದೊಡ್ಡ ಗಾತ್ರದ ಕ್ಷೇತ್ರದ ಖರ್ಚು ಗಮನಾರ್ಹವಾಗಿ ಹೆಚ್ಚಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ಮಂಡಿಸಿದ್ದ ಪೂರಕ ಅಂದಾಜಿನಲ್ಲಿ ರಾಜ್ಯ ಸರ್ಕಾರ ಚುನಾವಣಾ ಸಿದ್ಧತೆಗಾಗಿ 300 ಕೋಟಿ ಮೀಸಲಿಟ್ಟಿತ್ತು. ಉಳಿದ 211 ಕೋಟಿಯನ್ನು ಮುಂಬರುವ ಬಜೆಟ್‌ನಲ್ಲಿ ಮಂಜೂರು ಮಾಡಲಾಗುವುದು. ನಮ್ಮ ಒಟ್ಟು ಬೇಡಿಕೆ ಸುಮಾರು 511 ಕೋಟಿಯಾಗಿದೆ' ಎಂದು ಮೀನಾ ಹೇಳಿದ್ದರು.

ಚುನಾವಣಾ ದಿನದ ಖರ್ಚು

ಚುನಾವಣೆಯ ಬಹುತೇಕ ಅಂದರೆ ಶೇಕಡ 45ರಷ್ಟು ವೆಚ್ಚವು ಮತದಾನದ ದಿನ ನಡೆಯುತ್ತದೆ. ಅಂದರೆ, ಸಾರಿಗೆ, ಎಲೆಕ್ಟ್ರೊಲ್‌ ರೋಲ್ಸ್‌ ಪ್ರಿಂಟಿಂಗ್‌, ಎಪಿಕ್‌ ಕಾರ್ಡ್ಸ್‌, ಮತದಾರರ ಜಾಗೃತಿ ಕಾರ್ಯಕ್ರಮಗಳು, ಮತದಾನ ಸಿಬ್ಬಂದಿಗಳಿಗೆ ವೇತನ ಇತ್ಯಾದಿಗಳು ಸೇರಿದಂತೆ ಚುನಾವಣಾ ದಿನ ಭಾರೀ ಹಣ ಖರ್ಚಾಗುತ್ತದೆ. ಹೆಚ್ಚು ಮತದಾರರು ಇರುವ ಕ್ಷೇತ್ರದಲ್ಲಿ ಈ ವೆಚ್ಚ ಹೆಚ್ಚಿರುತ್ತದೆ. ಇವಿಎಂ ಜಾಗೃತಿ, ಇವಿಎಂ ಸಾಗಾಟ, ಸಿಬ್ಬಂದಿಗಳಿಗೆ ತರಬೇತಿ ಸೇರಿದಂತೆ ಹಲವು ಖರ್ಚುಗಳು ಇರುತ್ತವೆ.

ಇದರೊಂದಿಗೆ ಭದ್ರತಾ ಖರ್ಚು ಕೂಡ ಚುನಾವಣೆಯ ಒಟ್ಟು ವೆಚ್ಚವನ್ನು ಹೆಚ್ಚಿಸುತ್ತದೆ. ಕಳೆದ ಹಲವು ದಿನಗಳಿಂದ ರಾಜ್ಯದ ಅಲ್ಲಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಣ ಹೆಂಡ ಹಂಚಿಕೆಯಾಗದಂತೆ ಚುನಾವಣಾ ಅಧಿಕಾರಿಗಳನ್ನು ಅಲ್ಲಲ್ಲಿ ನಿಯೋಜಿಸಲಾಗಿರುತ್ತದೆ. ವಿವಿಧ ಚೆಕ್‌ಪೋಸ್ಟ್‌ ನಿರ್ಮಾಣ, ಸಿಸಿಟಿವಿ, ಮೊಬೈಲ್‌ ಸ್ಕ್ಯಾಡ್‌ಗಳಿಗೂ ಹಣ ಖರ್ಚು ಮಾಡಬೇಕಾಗುತ್ತದೆ. ಇದರೊಂದಿಗೆ ಅಂಚೆಮತದಾನ ಇತ್ಯಾದಿಗಳ ವೆಚ್ಚವೂ ಇರುತ್ತದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಎಂಎಲ್‌ಎಯೊಬ್ಬರನ್ನು ಆಯ್ಕೆ ಮಾಡಲು ಸರಕಾರ ಈ ರೀತಿ ದುಬಾರಿ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ, ಪ್ರತಿಯೊಬ್ಬ ಮತದಾರರೂ ತಮ್ಮ ಅಮೂಲ್ಯ ಮತವನ್ನು ಎಚ್ಚರಿಕೆಯಿಂದ ಚಲಾಯಿಸಿ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು.

IPL_Entry_Point