ಬೆಂಗಳೂರು: ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದು ಕೊಂದೇ ಬಿಟ್ಟ ಅಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದು ಕೊಂದೇ ಬಿಟ್ಟ ಅಪ್ಪ

ಬೆಂಗಳೂರು: ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದು ಕೊಂದೇ ಬಿಟ್ಟ ಅಪ್ಪ

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದ ಅಪ್ಪ ಕೊಂದೇ ಬಿಟ್ಟ ಕಳವಳಕಾರಿ ಘಟನೆ ವರದಿಯಾಗಿದೆ.

ಬೆಂಗಳೂರು: ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದು ಕೊಂದೇ ಬಿಟ್ಟ ಅಪ್ಪ. ಕುಮಾರಸ್ವಾಮಿ ಲೇ ಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು: ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದು ಕೊಂದೇ ಬಿಟ್ಟ ಅಪ್ಪ. ಕುಮಾರಸ್ವಾಮಿ ಲೇ ಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ) (X)

ಬೆಂಗಳೂರು: ಹಳೆಯ ಮೊಬೈಲ್ ರಿಪೇರಿ ಮಾಡಿಸಿ ಕೊಡಪ್ಪಾ.. ಮೊಬೈಲ್ ಬೇಕು ನನಗೆ ಎಂದು ಕಾಡಿ, ಬೇಡಿದ 14 ವರ್ಷದ ಮಗನನ್ನು ಸಿಟ್ಟಿಗೆದ್ದ ತಂದೆ ಕೊಂದು ಬಿಟ್ಟು ಕಳವಳಕಾರಿ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ತೇಜಸ್ (14) ಎಂದು ಗುರುತಿಸಲಾಗಿದೆ. ಆರೋಪಿ ತಂದೆಯನ್ನು ರವಿಕುಮಾರ್ ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ಈ ಕಳವಳಕಾರಿ ಅಮಾನವೀಯ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಮೊಬೈಲ್ ಕೇಳಿದ್ದಕ್ಕೆ ಹತ್ಯೆ ಮಾಡಿದ ಅಪ್ಪ; ಏನಿದು ಪ್ರಕರಣ

ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ಆರೋಪಿ ರವಿಕುಮಾರ್ ಮತ್ತು ಕುಟುಂಬ ವಾಸವಿದೆ. ರವಿ ಕುಮಾರ್ ವೃತ್ತಿಯಲ್ಲಿ ಕಾರ್ಪೆಂಟರ್. ಮಗ ತೇಜಸ್‌ ನಿತ್ಯವೂ ಒಂದೊಂದೇ ಬೇಡಿಕೆ ಇರಿಸುತ್ತಿದ್ದ. ಇದರಿಂದಾಗಿ ಹಣಕಾಸು ನಿರ್ವಹಣೆ ಕಷ್ಟವೆನಿಸಿ ಕಿರಿಕಿರಿ ಅನುಭವಿಸಿದ್ದ ರವಿಕುಮಾರ್‌, ಸಿಟ್ಟಾಗುತ್ತಿದ್ದ. ಇದೇ ರೀತಿ, ನಿನ್ನೆ ತೇಜಸ್‌ ಅಪ್ಪ ರವಿಕುಮಾರ್ ಬಳಿಕ ಮೊಬೈಲ್ ಬೇಕು ಎಂಬ ಬೇಡಿಕೆ ಇರಿಸಿದ್ದ. “ ಫ್ರೆಂಡ್ಸ್ ಬಳಿ ಮೊಬೈಲ್ ಫೋನ್ ಇದೆ. ನನಗೂ ಹೊಸ ಮೊಬೈಲ್ ಫೋನ್ ಬೇಕು. ಹೊಸ ಫೋನ್ ಕೊಡಿಸಲಾಗದೇ ಇದ್ದರೆ, ಮನೆಯಲ್ಲಿರುವ ಹಳೆಯ ಫೋನ್‌ ರಿಪೇರಿ ಮಾಡಿಸಿ ಕೊಡು” ಎಂದು ಕೇಳಿಕೊಂಡಿದ್ದ. ಆದರೆ ರವಿ ಕುಮಾರ್ ಈ ಬಗ್ಗೆ ತಲೆ ಕೆಡಿಸದೇ ಇದ್ದಾಗ, ತೇಜಸ್ ಹಟ ಹಿಡಿದಿದ್ದ.

ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಬಂದಿದ್ದ ರವಿ ಕುಮಾರ್‌ಗೆ ತೇಜಸ್ ಹಟ ಕಂಡು ಕೆರಳಿದೆ. ಸರಿಯಾಗಿ ಓದಲ್ಲ, ಬರೆಯಲ್ಲ, ಶಾಲೆಗೆ ಹೋಗಲ್ಲ. ಕೆಟ್ಟವರ ಸಹವಾಸ ಮಾಡಿಕೊಂಡು ಮೊಬೈಲ್ ಫೋನ್ ಬೇಕು ಎಂದು ಹಟ ಹಿಡೀತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಆಗ ಮಗನಿಂದಲೂ ಪ್ರತಿರೋಧ ಕಂಡುಬಂತು. ಆಗ ರವಿ ಕುಮಾರ್ ಮಗ ತೇಜಸ್‌ನಲ್ಲಿ ಜೋರಾಗಿ ತಳ್ಳಿದ್ಧಾನೆ. ಬ್ಯಾಟ್‌ ನಿಂದ ಹಲ್ಲೆ ನಡೆಸಿದ್ಧಾನೆ. ದೂಡಿದ ರಭಸಕ್ಕೆ ಗೋಡೆಗೆ ತಲೆ ಬಡಿದು ಬಿದ್ದದ್ದ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆತ ಮೇಲೇಳಲಿಲ್ಲ. ಕೂಡಲೇ ಮನೆಯವರನ್ನು ತೇಜಸ್ ಅನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಈ ಘಟನೆ ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡು ರವಿ ಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ.

ಆಸ್ತಿ ಹಣಕ್ಕಾಗಿ ಕೊಲೆ

ಮತ್ತೊಂದು ಘಟನೆಯಲ್ಲಿ, ಬೆಂಗಳೂರಿನಲ್ಲಿ ಆಸ್ತಿ ಹಣವನ್ನು ಹಂಚಿಕೊಳ್ಳಲು ನಿರಾಕರಿಸಿದ 44 ವರ್ಷದ ಮಹಿಳೆಯನ್ನು ಆಕೆಯ ಮಗ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ತಮಿಳುನಾಡು ಮೂಲದ ಜಯಮ್ಮ ಅವರು ಇತ್ತೀಚೆಗೆ ಆಸ್ತಿಯನ್ನು ಮಾರಾಟ ಮಾಡಿದ್ದರು. ಆದರೆ ಅವರು ಆಟೋರಿಕ್ಷಾ ಚಾಲಕ ಉಮೇಶ್ ಅವರೊಂದಿಗೆ ಹಣವನ್ನು ಹಂಚಿಕೊಳ್ಳಲು ನಿರಾಕರಿಸಿದಾಗ ಕುಟುಂಬ ಕಲಹ ಹೆಚ್ಚಾಗಿದ್ದು, ಕೊಲೆಯಲ್ಲಿ ಮುಕ್ತಾಯವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆನೇಕಲ್‌ನಲ್ಲಿ ವಾಸವಾಗಿರುವ ಜಯಮ್ಮ ಅವರ ಹಿರಿಯ ಮಗ ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ವರದಿ ಹೇಳಿದೆ.

ಕೊಲೆಯಾದ ದಿನ ರಾತ್ರಿ 8 ಗಂಟೆ ಸುಮಾರಿಗೆ ಉಮೇಶ್ ತನ್ನ ತಾಯಿಯ ಮನೆಗೆ ಹೋಗಿದ್ದು, ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಉಮೇಶ್ ಆಕೆಯ ಮುಖಕ್ಕೆ ಹೊಡೆದು ನಂತರ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಸೋದರಳಿಯ ಸುರೇಶ್ ಎಂಬಾತ ಉಮೇಶ್‌ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.

Whats_app_banner