ಕೃಷ್ಣ ಜನ್ಮಾಷ್ಟಮಿ ಸಂಭ್ರಮ: 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ, ಮಂಗಳೂರಿನ ವೈದ್ಯರ ಟ್ವೀಟ್ ವೈರಲ್
ಕನ್ನಡ ಸುದ್ದಿ  /  ಕರ್ನಾಟಕ  /  ಕೃಷ್ಣ ಜನ್ಮಾಷ್ಟಮಿ ಸಂಭ್ರಮ: 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ, ಮಂಗಳೂರಿನ ವೈದ್ಯರ ಟ್ವೀಟ್ ವೈರಲ್

ಕೃಷ್ಣ ಜನ್ಮಾಷ್ಟಮಿ ಸಂಭ್ರಮ: 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ, ಮಂಗಳೂರಿನ ವೈದ್ಯರ ಟ್ವೀಟ್ ವೈರಲ್

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯಗಳ ಫೋಟೋಗಳನ್ನು ಎಕ್ಸ್ ( ಟ್ವಿಟರ್) ನಲ್ಲಿ ಶೇರ್​ ಮಾಡಿದ್ದಾರೆ.

ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ
ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಭಕ್ತೆಯೊಬ್ಬರು ಕೃಷ್ಣನಿಗೆ 88 ಬಗೆಯ ಖಾದ್ಯ ಬಡಿಸಿದ್ದು ಇದರ ಫೋಟೋವನ್ನು ಮಂಗಳೂರಿನ ವೈದ್ಯರೊಬ್ಬರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯಗಳ ಫೋಟೋಗಳನ್ನು ಎಕ್ಸ್ ( ಟ್ವಿಟರ್) ನಲ್ಲಿ ಶೇರ್​ ಮಾಡಿದ್ದಾರೆ.

“ಆಕೆಗೆ ಮತ್ತು ಆಕೆಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದ (ರೋಗಿ) ಅವರು ಈ ಹಿಂದಿನ ಅವರ ದಾಖಲೆಯನ್ನು ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ” ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಮಥುರಾ ಶ್ರೀ ಕೃಷ್ಣನ ಜನ್ಮ ಸ್ಥಳ. ಶ್ರಾವಣ ಮಾಸದಲ್ಲಿ ಬರುವ ಕೃಷ್ಟ ಪಕ್ಷದ ಅಷ್ಟಮಿಯು ಕೃಷ್ಣ ಹುಟ್ಟಿದ ದಿನ. ಈ ದಿನ ಕಾರಾಗೃಹದಲ್ಲಿ ಕೃಷ್ಣನ ಜನನವಾಗಿತ್ತು. ಮೈನವಿರೇಳಿಸುವ ಕೃಷ್ಣ ಹುಟ್ಟಿದ ಕಥೆ ಇಲ್ಲಿದೆ ಓದಿ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

Whats_app_banner