Fighter aircraft crash: ಮಧ್ಯಪ್ರದೇಶದಲ್ಲಿ ಸಮರ ವಿಮಾನ ಅಪಘಾತ ಪ್ರಕರಣ; ಬೆಳಗಾವಿಯಲ್ಲಿ ಯೋಧನ ಅಂತ್ಯಸಂಸ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Fighter Aircraft Crash: ಮಧ್ಯಪ್ರದೇಶದಲ್ಲಿ ಸಮರ ವಿಮಾನ ಅಪಘಾತ ಪ್ರಕರಣ; ಬೆಳಗಾವಿಯಲ್ಲಿ ಯೋಧನ ಅಂತ್ಯಸಂಸ್ಕಾರ

Fighter aircraft crash: ಮಧ್ಯಪ್ರದೇಶದಲ್ಲಿ ಸಮರ ವಿಮಾನ ಅಪಘಾತ ಪ್ರಕರಣ; ಬೆಳಗಾವಿಯಲ್ಲಿ ಯೋಧನ ಅಂತ್ಯಸಂಸ್ಕಾರ

Fighter aircraft crash: ಸಮರ ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಸಂಜೆ ಕರ್ನಾಟಕದ ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿ ರಕ್ಷಣಾ ಮತ್ತು ಆಡಳಿತಾತ್ಮಕ ಗೌರವಗಳೊಂದಿಗೆ ಸರ್ಕಾರ ನೆರವೇರಿಸಿದೆ.

ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್‌ ಕಮಾಂಡರ್‌ ಹನುಮಂತರಾವ್ ಸಾರಥಿ ಅವರ ಅಂತ್ಯಯಾತ್ರೆಯ ಒಂದು ನೋಟ
ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್‌ ಕಮಾಂಡರ್‌ ಹನುಮಂತರಾವ್ ಸಾರಥಿ ಅವರ ಅಂತ್ಯಯಾತ್ರೆಯ ಒಂದು ನೋಟ

ಬೆಂಗಳೂರು: ಭಾರತೀಯ ವಾಯುಪಡೆಯ (ಐಎಎಫ್) ಸಮರ ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಸಂಜೆ ಕರ್ನಾಟಕದ ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿ ರಕ್ಷಣಾ ಮತ್ತು ಆಡಳಿತಾತ್ಮಕ ಗೌರವಗಳೊಂದಿಗೆ ಸರ್ಕಾರ ನೆರವೇರಿಸಿದೆ.

ಬೆಳಗಾವಿಗೆ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಆಗಮಿಸಿದ ವಿಶೇಷ ವಿಮಾನದಲ್ಲಿ ಐಎಎಫ್ ಅಧಿಕಾರಿಗಳು ಸಾರಥಿ ಅವರ ಪಾರ್ಥಿವ ಶರೀರವನ್ನು ತಂದರು. ಸೇನಾ ಅಧಿಕಾರಿಗಳು, ಐಎಎಫ್, ರಕ್ಷಣಾ ಸಿಬ್ಬಂದಿ ಮತ್ತು ಚುನಾಯಿತ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಅಗಲಿದ ಪೈಲಟ್‌ಗೆ ಅಂತಿಮ ನಮನ ಸಲ್ಲಿಸಿದರು.

ಎರಡು ಐಎಎಫ್ ಯುದ್ಧ ವಿಮಾನಗಳು - ಸುಖೋಯ್ -30 ಮತ್ತು ಮಿರಾಜ್ -2000 - ವಾಡಿಕೆಯ ತರಬೇತಿ ವ್ಯಾಯಾಮದ ವೇಳೆ ಶನಿವಾರ ಮಧ್ಯಪ್ರದೇಶದ ಮೊರೆನಾದ ಪಹಾಡ್‌ಗಢ ಪ್ರದೇಶದಲ್ಲಿ ಪತನಗೊಂಡು ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ.

ಸುಖೋಯ್-30MKI ವಿಮಾನದ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಹೊರಬಂದರೆ, ಮಿರಾಜ್-2000 ಪೈಲಟ್ ಮಾಡುತ್ತಿದ್ದ ವಿಂಗ್ ಕಮಾಂಡರ್ ಸಾರಥಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು.

ಹನುಮಂತ ರಾವ್‌ ಸಾರಥಿ ಯಾರು? (Who was Hanumantrao Sarathi)

ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರು, 1987ರ ಅಕ್ಟೋಬರ್‌ 28ರಂದು ಜನಿಸಿದವರು. ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ ಸಾರಥಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದರು. ಅಲ್ಲಿ ಅವರು ಚಿನ್ನದ ಪದಕದೊಂದಿಗೆ ಉತ್ತಮ ಸಾಧನೆ ಮಾಡಿದರು. ಇದಾಗಿ 2009 ರಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಅವರು, ಪತ್ನಿ, ಮೂರು ವರ್ಷದ ಮಗಳು ಮತ್ತು ಒಂದು ವರ್ಷದ ಮಗನನ್ನು ಅಗಲಿದ್ದಾರೆ.

ಐಎಎಫ್ ಅಧಿಕಾರಿ ಕೌಟುಂಬಿಕವಾಗಿ ಕೂಡ ರಕ್ಷಣಾ ಹಿನ್ನೆಲೆಯವರು. ಸಾರಥಿಯವರ ಹಿರಿಯ ಸಹೋದರ ಪ್ರವೀಣ್ ಸಾರಥಿ ಐಎಎಫ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಮತ್ತು ಪೈಲಟ್ ಆಗಿದ್ದರೆ, ಅವರ ತಂದೆ ರೇವಣಸಿದ್ದಯ್ಯ ಸಾರಥಿ ಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನಿವೃತ್ತರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ರಾತ್ರಿ ವಿಂಗ್‌ ಕಮಾಂಡರ್‌ ಸಾರಥಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಅಪಘಾತವು ಮತ್ತೊಮ್ಮೆ ಭಾರತದ ಅತ್ಯಂತ ದೀರ್ಘಾವಧಿಯ ಯುದ್ಧ ವಿಮಾನ, ಅದರ ಸುರಕ್ಷತಾ ದಾಖಲೆ ಮತ್ತು ಮುಂಬರುವ ವರ್ಷಗಳಲ್ಲಿ ವಯಸ್ಸಾದ ಜೆಟ್‌ಗಳನ್ನು ಹೊಸದರೊಂದಿಗೆ ಬದಲಾಯಿಸುವ ಐಎಎಫ್‌ನ ಯೋಜನೆಗಳ ಮೇಲೆ ಗಮನ ಹರಿಸುವಂತೆ ಮಾಡಿದೆ.

ಆಗಸದಲ್ಲಿ ಅಪಘಾತವೇ ಪತನಕ್ಕೆ ಕಾರಣವಾಯಿತು. ಆದಾಗ್ಯೂ, ಈ ವಿಚಾರ ದೃಢೀಕರಿಸುವುದಕ್ಕೆ ಐಎಎಫ್‌ ತನಿಖೆಯನ್ನು ಪ್ರಾರಂಭಿಸಿದೆ. ಇದು ಈ ವರ್ಷ ಬೈಸನ್ ಜೆಟ್ ಒಳಗೊಂಡ ಐದನೇ ಅಪಘಾತ. ಬೈಸನ್ IAF ಸೇವೆಯಲ್ಲಿ Mig-21 ನ ಇತ್ತೀಚಿನ ರೂಪಾಂತರವಾಗಿದೆ. IAF MiG-21 ಬೈಸನ್ ವಿಮಾನದ ನಾಲ್ಕು ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುತ್ತದೆ - ಒಂದು ಸ್ಕ್ವಾಡ್ರನ್ 16 ರಿಂದ 18 ಫೈಟರ್ ಜೆಟ್‌ಗಳನ್ನು ಹೊಂದಿದೆ.

ಗ್ವಾಲಿಯರ್ ವಾಯುನೆಲೆಯು ವಾಯುಪಡೆಗೆ ಸೇರಿದ ವಿಮಾನಗಳು ಸಾಮಾನ್ಯ ತರಬೇತಿ ನಡೆಸುತ್ತವೆ. ಈ ಕ್ರಮದಲ್ಲಿ ಎರಡು ಯುದ್ಧವಿಮಾನಗಳಾಗ ಸುಖೋಯ್-30 ಮತ್ತು ಮಿರಾಜ್ 2000 ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿವೆ. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೊರೆನಾ ಪ್ರದೇಶದಲ್ಲಿ ಪತನಗೊಂಡಿವೆ. ಸರಿಯಾದ ಸಮಯಕ್ಕೆ ಪೈಲಟ್‌ಗಳು ವಿಮಾನಗಳಿಂದ ಜಿಗಿದಿದ್ದಾರೆ. ಪರಿಣಾಮವಾಗಿ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದಾರೆ. ಇದುವರೆಗೆ ಇಬ್ಬರು ಪೈಲಟ್‌ಗಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿತ್ತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner