ಬೀದರ್‌ನಲ್ಲಿ ಹಾಡಹಗಲೇ ಡರೋಡೆ; ಎಟಿಎಂಗೆ ಹಣ ಹಾಕಲು ತಂದಿದ್ದ ವೇಳೆ ಫೈರಿಂಗ್‌ನಲ್ಲಿ ಸಿಬ್ಬಂದಿ ಸಾವು: ಹಣದೊಂದಿಗೆ ಪರಾರಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೀದರ್‌ನಲ್ಲಿ ಹಾಡಹಗಲೇ ಡರೋಡೆ; ಎಟಿಎಂಗೆ ಹಣ ಹಾಕಲು ತಂದಿದ್ದ ವೇಳೆ ಫೈರಿಂಗ್‌ನಲ್ಲಿ ಸಿಬ್ಬಂದಿ ಸಾವು: ಹಣದೊಂದಿಗೆ ಪರಾರಿ

ಬೀದರ್‌ನಲ್ಲಿ ಹಾಡಹಗಲೇ ಡರೋಡೆ; ಎಟಿಎಂಗೆ ಹಣ ಹಾಕಲು ತಂದಿದ್ದ ವೇಳೆ ಫೈರಿಂಗ್‌ನಲ್ಲಿ ಸಿಬ್ಬಂದಿ ಸಾವು: ಹಣದೊಂದಿಗೆ ಪರಾರಿ

ಬೀದರ್‌ನಲ್ಲಿ ಸಿನಮೀಯ ಶೈಲಿಯಲ್ಲಿ ಡರೋಡೆ ನಡೆದಿದ್ದು, ಭದ್ರತಾ ಸಿಬ್ಬಂದಿ ಸಹಿತ ಇಬ್ಬರ ಮೇಲೆ ಗುಂಡಿಕ್ಕಿ ಒಬ್ಬರನ್ನು ಕೊಂದು 93 ಲಕ್ಷ ರೂ. ಹಣ ದೋಚಲಾಗಿದೆ.

ಬೀದರ್‌ ನಲ್ಲಿ ನಡೆದ ಡರೋಡೆಯಲ್ಲಿ ಸಿಬ್ಬಂದಿ ಸಹಿತಯನ್ನು ಕೊಂದು ಹಣ ದೋಚಲಾಗಿದೆ.
ಬೀದರ್‌ ನಲ್ಲಿ ನಡೆದ ಡರೋಡೆಯಲ್ಲಿ ಸಿಬ್ಬಂದಿ ಸಹಿತಯನ್ನು ಕೊಂದು ಹಣ ದೋಚಲಾಗಿದೆ.

ಬೀದರ್‌ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ‌ ಸಿನಿಮಾ ಮಾದರಿಯಲ್ಲಿ ಡರೋಡೆ ನಡೆದಿದ್ದು, ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಕೋಟ್ಯಂತರ ರೂ. ಹಣವನ್ನು ದೋಚಿರುವ ಘಟನೆ ವರದಿಯಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪದ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಿದ್ದಾಗ ಇಬ್ಬರು ಮುಸುಕುಧಾರಿಗಳು ಗುಂಡಿ ಹಾರಿಸಿ ಹಣದೊಂದಿಗೆ ಪರಾರಿಯಾಗಿದ್ದಾರೆ. ಕಚೇರಿ ಕಣ್ಣಿಗೆ ಖಾರದ ಪುಡಿ ಎರಚಿ ಎಂಟು ಸುತ್ತು ಫೈಯರಿಂಗ್ ಮಾಡಿದ ದುಷ್ಕರ್ಮಿಗಳ ದಾಳಿಗೆ ಸಿಎಂಸಿ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಶಿವಕುಮಾರ್‌ ಎಂಬುವವರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಸಿಎಂಎಸ್ ಏಜೆನ್ಸಿ ವಾಹನದಲ್ಲಿ ತಂದಿದ್ದ 93 ಲಕ್ಷ ಹಣ ತೆಗೆದುಕೊಂಡು ಖದೀಮರು ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ಡಕಾಯಿತರ ಬಂಧನಕ್ಕೆ ನಾಕಾಬಂದಿ ಮೂಲಕ ಬಲೆ ಬೀಸಿದ್ದಾರೆ.

ಬೀದರ್‌ ನಗರದ ಶಿವಾಜಿ ವೃತ್ತದ ಬಳಿ ಇರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಬೆಳಿಗ್ಗೆ ಎಂದಿನಂತೆ ಎಟಿಎಂಗೆ ಹಣ ತುಂಬಲು ಸಿಎಂಎಸ್‌ ಏಜೆನ್ಸಿ ತಂಡ ಆಗಮಿಸಿತ್ತು. ಭದ್ರತಾ ಸಿಬ್ಬಂದಿಗಳೂ ಜತೆಗಿದ್ದರು. ಈ ವೇಳೆ ಎಟಿಎಂಗೆ ಹಾಕಲು ಎಸ್‌ಬಿಐ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ್ದ ಎಜೆನ್ಸಿ ಸಿಬ್ಬಂದಿ ಅಲ್ಲಿಗೆ ಬಂದಿದ್ದರು. ಎಟಿಎಂಗೆ ಹಾಕಲು ಹೊರ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಅಲ್ಲಿದ್ದವರ ಮೇಲೆ ಕಾರದಪುಡಿ ಎರಚಿತು. ಕಾರದ ಪುಡಿ ಎರಚಿ ಬಳಿಕ ಏಕಾಏಕಿ ಗುಂಡನ್ನು ಕೂಡ ದರೋಡೆಕೋರರು ಹಾರಿಸಿದರು. ಎಜೆನ್ಸಿಯಲ್ಲಿ ಕ್ಯಾಶ್‌ ತುಂಬುತ್ತಿದ್ದ ಹಣ ವ್ಯವಸ್ಥಾಪಕ ಗಿರಿ ವೆಂಕಟೇಶ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಸಿಬ್ಬಂದಿ ಶಿವಕುಮಾರ್‌ ಎಂಬುವವರಿಗೆ ತೀವ್ರ ಗಾಯಗಳಾಗಿ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್‌ನಲ್ಲೇ ಹಣದೊಂದಿಗೆ ಪರಾರಿ

ಈ ವೇಳೆ ಅಲ್ಲಿದ್ದ ಹಣದ ಸೂಟ್‌ಕೇಸ್‌ ಅನ್ನು ಹೊತ್ತುಕೊಂಡು ಬೈಕ್‌ನಲ್ಲಿಯೇ ಇಬ್ಬರೂ ಪರಾರಿಯಾಗಿದ್ದಾರೆ. ಅಲ್ಲಿದ್ದವರು ಇದನ್ನು ಗಮನಿಸಿ ಇಬ್ಬರನ್ನೂ ಹಿಡಿಯಲು ಪ್ರಯತ್ನಿಸಿದರೂ ತಪ್ಪಿಸಿಕೊಂಡು ಪರಾರಿಯಾದರು. ಕೆಲವೇ ಕ್ಷಣದಲ್ಲಿ ಅದೂ ಬೀದರ್‌ ನಗರದ ಹೃದಯ ಭಾಗದಲ್ಲಿ ನಡೆದ ಘಟನೆ ಇದಾಗಿದ್ದು. ಜನತೆಯನ್ನು ಬೆಚ್ಚಿಬೀಳಿಸಿದೆ.

ವಿಷಯ ತಿಳಿದು ಬೀದರ್‌ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ಎಡಿಷನಲ್ ಬೀದರ್‌ ಎಸ್ಪಿ ಚಂದ್ರಕಾಂತ ಪೂಜಾರಿ ಭೇಟಿ ನೀಡಿ ಬ್ಯಾಂಕ್ ಸಿಸಿ ಟಿವಿ ಪರಿಶೀಲನೆ ಮಾಡಿದರು. ಅಲ್ಲದೇ ಪೊಲೀಸರು ದರೋಡೆಕೋರರು ಪರಾರಿಯಾಗಿರುವ ಮಾರ್ಗ ಆಧರಿಸಿ ನಾಕಾಬಂದಿ ಹಾಕಿ ಪತ್ತೆ ಮಾಡಿದರು. ಈ ಕುರಿತು ತನಿಖೆ ನಡೆದಿದೆ.

ಪೊಲೀಸ್ ತನಿಖೆ ಚುರುಕು

ಬೀದರ್‌ ನಗರದಲ್ಲಿ ಹಿಂದೆಯೂ ಈ ರೀತಿ ಪ್ರಯತ್ನಗಳೂ ನಡೆದಿದ್ದವು. ಈ ಬಾರಿ ವ್ಯವಸ್ಥಿತವಾಗಿಯೇ ಬಂದ ಡರೋಡೆಕೋರರು ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ಹೊತ್ತೊಯ್ದರು, ಗುಂಡಿನ ಶಬ್ದ ಕೇಳಿ ಭಯವಾಯಿತು. ನೋಡ ನೋಡುತ್ತಿದ್ದಂತೆ ಕೋಟ್ಯಂತರ ರೂ. ಇದ ಹಣದೊಂದಿಗೆ ಬೈಕ್‌ನಲ್ಲಿ ಬಂದಿದ್ದವರು ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಧಾರೆ.

ಹಾಡಹಗಲೇ ಈ ಕೃತ್ಯ ನಡೆದಿದೆ. ಭದ್ರತಾ ಸಿಬ್ಬಂದಿ ಇದ್ದರೂ ಘಟನೆ ನಡೆದು ಹಣದೊಂದಿಗೆ ಇಬ್ಬರು ಪರಾರಿಯಾಗಿದ್ದಾರೆ. ಎಷ್ಟು ಹಣ ಹೋಗಿದೆ. ಘಟನೆ ಹೇಗೆ ನಡೆಯಿತು ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿಯೂ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಬೀದರ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Whats_app_banner