ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

Bengaluru: ಪರವಾನಗಿ ಅವಧಿ ಮೀರಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್‌ಟಿಓ ಅಧಿಕಾರಿಗಳು ಶೋರೂಂ ಮೇಲೆ ದಾಳಿದ್ದರು. ಅದರ ಬೆನ್ನಲ್ಲೇ ಶುಕ್ರ ಮೋಟಾರ್ಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ
ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಂ ಶುಕ್ರ ಮೋಟಾರ್ಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 20ಕ್ಕೂ ಹೆಚ್ಚು ಬೈಕ್‌ ಗಳು ಸುಟ್ಟು ಭಸ್ಮವಾಗಿವೆ. ಇಲ್ಲಿ ಒಕಿನೊವಾ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಬ್ಯಾಟರಿ ಓವರ್ ಚಾರ್ಜ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಶೋ ರೂಂನಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲವಾದರೂ ಆರ್ಥಿಕವಾಗಿ ಅಪಾರ ನಷ್ಟ ಉಂಟಾಗಿದೆ.

ಕಟ್ಟಡದ ನೆಲಮಹಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯು ಮೇಲಿನ ಮಹಡಿಗಳಿಗೆ ಹರಡುವುದಕ್ಕೂ ಮುನ್ನವೇ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಮೇಲಿನ ಮಹಡಿಗಳಲ್ಲಿ ಕಚೇರಿ ಮತ್ತು ವಾಸದ ಮನೆಗಳಿದ್ದವು. ಈ ಶೋರೂಂನಲ್ಲಿ ಒಟ್ಟು 74 ಬೈಕ್‌ಗಳಿದ್ದು, 19 ಬೈಕ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. 9 ಬೈಕ್‌ಗಳು ಭಾಗಶಃ ಸುಟ್ಟಿವೆ.

ಪರವಾನಗಿ ಅವಧಿ ಮೀರಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್‌ಟಿಓ ಅಧಿಕಾರಿಗಳು ಈ ಶೋರೂಂ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ನೋಟಿಸ್‌ ನೀಡಿದ್ದರು. ಗುಣಮಟ್ಟ ಇಲ್ಲದ ಬ್ಯಾಟರಿಗಳನ್ನು ಬಳಕೆ ಮಾಡುತ್ತಿದ್ದದ್ದೂ ಶಾರ್ಟ್‌ ಸರ್ಕ್ಯೂಟ್‌ಗೆ ಕಾರಣವಾಗಿದೆ.

ಶಾರ್ಟ್ ಸರ್ಕ್ಯೂಟ್‌ ಅಥವಾ ಬ್ಯಾಟರಿ ಸ್ಫೋಟ

ಅಗ್ನಿಶಾಮಕದಳದ ಅಧಿಕಾರಿ ಕಿಶೋರ್ ಮಾತನಾಡಿ; ಇಂದು ಮಧ್ಯಾಹ್ನ 2.06 ನಿಮಿಷಕ್ಕೆ ಅಗ್ನಿಶಾಮಕ ಕಂಟ್ರೋಲ್‌ ರೂಂಗೆ ದೂರು ಬಂದಿದೆ. ನಂತರ ರಾಜಾಜಿನಗರ ಅಗ್ನಿಶಾಮಕ ಸೆಂಟರ್‌ನಿಂದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ ಅಥವಾ ಬ್ಯಾಟರಿ ಸ್ಫೋಟಗೊಂಡು ಈ ದುರಂತ ಸಂಭವಿಸಿರಬಹುದು ಎಂದು ಊಹಿಸಲಾಗಿದೆ ಎಂದು ಹೇಳಿದ್ದಾರೆ.

ಅಗ್ನಿ ಅವಘಡ ಸಂಭವಿಸಿದಾಗ ನಾಲ್ವರು ಸಿಬ್ಬಂದಿ ಮತ್ತು ಕೆಲವು ಗ್ರಾಹಕರು ಶೋರೂಂನಲ್ಲಿದ್ದರು. ಅವರು ಕೂಡಲೇ ಹೊರ ಬಂದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

ಒಂದೇ ತಿಂಗಳಲ್ಲಿ ಎರಡು ದುರಂತ

ಬೆಂಗಳೂರು ನಗರದಲ್ಲಿ 2024ರ ನವೆಂಬರ್ 19ರಂದು ಇದೇ ರಸ್ತೆಯಲ್ಲಿರುವ ಮೈ ಇವಿ ಎಂಬ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಆ ದುರಂತದಲ್ಲಿ 20 ವರ್ಷದ ಪ್ರಿಯಾ ಎಂಬ ಯವತಿ ಸಜೀವ ದಹನವಾಗಿದ್ದರು. ಆಗಲೂ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ ಸಂಭವಿಸಿತ್ತು. ನಂತರ 2025ರ ಹೊಸ ವರ್ಷದ ಮೊದಲ ದಿನ, ಜನವರಿ 1ರಂದು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದಲ್ಲಿರುವ ಬೈಕ್ ಶೋರೂಂಗೆ ಬೆಂಕಿಬಿದ್ದು ಸುಮಾರು 60 ಯಮಹಾ ಬೈಕ್‌ಗಳು ಅಗ್ನಿಗಾಹುತಿಯಾಗಿದ್ದವು. ಇದರ ಬೆನ್ನಲ್ಲೇ ಇಂದು ಮತ್ತೊಂದು ಅಗ್ನಿ ಅವಘಡಸಂಭವಿಸಿದೆ.

Whats_app_banner