ಕನ್ನಡ ಸುದ್ದಿ  /  Karnataka  /  Flood Situation Due To Rain In Bengaluru Master Plan Required For 600 Km Drainage Extension Knight Frank Report Rmy

Bengaluru Flood: ಬೆಂಗಳೂರಿನಲ್ಲಿ ಮಳೆಯಿಂದ ಪ್ರವಾಹ ಸ್ಥಿತಿ; 600 ಕಿಮೀ ಒಳಚರಂಡಿ ವಿಸ್ತರಣೆ, ಮಾಸ್ಟರ್ ಪ್ಲಾನ್ ಅಗತ್ಯ; ನೈಟ್ ಫ್ರಾಂಕ್

ಬೆಂಗಳೂರಿನಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿಯನ್ನು ತಡೆಯಬೇಕಾದರೆ ಇನ್ನೂ ಸುಮಾರು 658 ಕಿಮೀಗಳಷ್ಟು ಒಳಚರಂಡಿ ನಿರ್ಮಿಸಬೇಕಾದ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ತಡೆಯಲು ಒಳ ಚರಂಡಿಯನ್ನು ವಿಸ್ತರಣೆ ಮಾಡುವ ಅಗತ್ಯ ಸೇರಿದಂತೆ ಹಲವು ರೀತಿಯ ಪರಿಹಾರ ಕ್ರಮಗಳಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆ ಹೇಳಿದೆ.
ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ತಡೆಯಲು ಒಳ ಚರಂಡಿಯನ್ನು ವಿಸ್ತರಣೆ ಮಾಡುವ ಅಗತ್ಯ ಸೇರಿದಂತೆ ಹಲವು ರೀತಿಯ ಪರಿಹಾರ ಕ್ರಮಗಳಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆ ಹೇಳಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿ (Bengaluru Flood) ಕಳೆದ ಕೆಲ ವರ್ಷಗಳಿಂದ ನಗರದ ಜನತೆಯನ್ನು ಹೈರಾಣವಾಗಿಸಿದೆ. ಇದಕ್ಕೆ ದೀರ್ಘಕಾಲದ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಮಳೆ ನೀರು ಒಳ ಚರಂಡಿ ವ್ಯವಸ್ಥೆಗೆ (Stormwater Drainage) ಮಾಸ್ಟರ್‌ಪ್ಲಾನ್ ರೂಪಿಸಬೇಕಾದ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆ ಹೇಳಿದೆ.

ನಗರದಲ್ಲಿಂದು (ಮೇ 31, ಬುಧವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಆಸ್ತಿ ಸಲಹಾ ಸಂಸ್ಥೆಯಾಗಿರುವ ನೈಟ್ ಫ್ರಾಂಕ್ ಇಂಡಿಯಾ (Knight Frank India), ಬೆಂಗಳೂರು ನಗರ ಪ್ರವಾಹದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ನಗರದಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿ ತಡೆಗೆ 658 ಕಿಮೀಗಳಷ್ಟು ಪ್ರಾಥಮಿಕ ಮತ್ತು ಮಾಧ್ಯಮಿಕ ಒಳ ಚರಂಡಿಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದಿದೆ.

ಪ್ರಸ್ತುತ, ಬೆಂಗಳೂರು 842 ಕಿಮೀ ಚರಂಡಿಯನ್ನು ಹೊಂದಿದೆ. ಪ್ರಾದೇಶಿಕ ವಿಸ್ತರಣೆಗೆ ಪೂರಕವಾಗಿ, ನಗರದಲ್ಲಿ ಚರಂಡಿಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದಿದೆ. ಅಸ್ತಿತ್ವದಲ್ಲಿರುವ ಚರಂಡಿಯನ್ನ ಸರಿಪಡಿಸುವ ಜೊತೆಗೆ ಹೊಸ ಚರಂಡಿಗಳ ನಿರ್ಮಾಣಕ್ಕೆ 2,800 ಕೋಟಿ ರೂ.ಗಳ ಅತ್ಯವಿದೆ ಎಂದು ಅಂದಾಜಿಸಿದೆ.

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಸ್ಥಳಾಕೃತಿ ಮತ್ತು ಒಳಚರಂಡಿ ವ್ಯವಸ್ಥೆಯಿಂದ ಈ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 1.8 ಕೋಟಿಗೆ ತಲುಪುವ ಸಾಧ್ಯತೆಯಿದೆ.

ಜನಸಂಖ್ಯೆಗೆ ಅನುಗುಣವಾಗಿ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ಸಮರ್ಪಕವಾಗಿ ದುಪ್ಪಟ್ಟು ಅಭಿವೃದ್ಧಿಯ ಅಗತ್ಯವಿದೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ನಗರದ ಭೂ ಬಳಕೆಯ ಡೈನಾಮಿಕ್ಸ್ ಗಮನಾರ್ಹವಾಗಿ ಬದಲಾಗಿದೆ. ಬೆಂಗಳೂರಿನ ಬಿಲ್ಟ್-ಅಪ್ ಪ್ರದೇಶದ ಪಾಲು 2002 ರಲ್ಲಿ ಶೇ. 37.4 ರಿಂದ 2020ರ ವೇಳೆಗೆ ಶೇ. 93.3 ಕ್ಕೆ ಏರಿಯಾಗಿದೆ ಎಂದು ತನ್ನ ವರದಿಯಲ್ಲಿ ವಿವರಿಸಿದೆ.

ಒಳಚರಂಡಿಗಳ ವಿಸ್ತರಣೆಗೆ ಹಣಕಾಸು ವ್ಯವಸ್ಥೆ ಹೇಗೆ?

ದೀರ್ಘಾವಧಿಯ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳ ಜೊತೆಗೆ ಆರಂಭಿಕ ವೆಚ್ಚದ ರೂಪದಲ್ಲಿ ಇಂತಹ ಸುಸ್ಥಿರ ಮೂಲಸೌಕರ್ಯಗಳಿಗೆ ಹೆಚ್ಚಿನ ಹಣಕಾಸು ಸವಾಲಾಗಿರಬಹುದು. ಹೆಚ್ಚಿನ ನಿಧಿಯ ಅವಶ್ಯಕತೆಗಳ ಸಂದರ್ಭದಲ್ಲಿ, ಹಣಕಾಸಿನ ಅಂತರವನ್ನು ತುಂಬಲು ಹೆಚ್ಚಿನ ಹಣಕಾಸು ಆಯ್ಕೆಗಳ ಅವಶ್ಯಕತೆ ಇದೆ.

ಸಮರ್ಥವಾದ ಮಳೆನೀರು ನಿರ್ವಹಣಾ ಕಾರ್ಯವಿಧಾನಗಳು ಸುತ್ತಮುತ್ತಲಿನ ಭೂಮಿ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮೌಲ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ (ವಿಸಿಎಫ್) ನಂತಹ ಕಾರ್ಯವಿಧಾನಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಮೂಲಕ ಹಣಕಾಸು ಒದಗಿಸಬಹುದು ಎಂದು ನೈಟ್ ಫ್ರಾಂಕ್ ಸಂಸ್ಥೆ ಸಲಹೆ ನೀಡಿದೆ.

ಬೆಂಗಳೂರಿನ ಆರ್ಥಿಕ ಬೆಳವಣಿಗೆಗೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅನಿವಾರ್ಯ. 2005 ರಲ್ಲಿ 16 ಬಿಲಿಯನ್ ಡಾಲರ್‌ನಷ್ಟು ಇದ್ದ ನಗರದ ಜಿಡಿಪಿ 2023ರ ಹಣಕಾಸು ವರ್ಷಕ್ಕೆ 97 ಬಿಲಿಯನ್ ಡಾಲರ್‌ಗೆ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗೆ ಸಮನಾಗಿ, ನಗರದ ಆರ್ಥಿಕ ಬೆಳವಣಿಗೆಗೆ ನೈಜ ವಲಯವು ಅಂದಾಜು ಶೇ. 7 ರಷ್ಟು ಕೊಡುಗೆ ನೀಡುತ್ತದೆ.

ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಪ್ರವಾಹದ ಪರಿಸ್ಥಿತಿ ನಗರದ ಬೆಳವಣಿಗೆಗೆ ಅಡ್ಡಿಯಾಗಬಾರದು. ಸಂಸ್ಥೆ ಪ್ರಸ್ತಾಪಿಸಿರುವ ಪರಿಹಾರದ ಕ್ರಮ ತಕ್ಷಣಕ್ಕೆ ಆಗುವಂತದ್ದಲ್ಲ. ಇದಕ್ಕಾಗಿ ದೀರ್ಘಕಾಲದ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಾಂತಾನು ಮಜುಂದಾರ್ ಹೇಳಿದ್ದಾರೆ.

IPL_Entry_Point