ಕನ್ನಡ ಸುದ್ದಿ  /  ಕರ್ನಾಟಕ  /  Forest News: ಮಂಗಟ್ಟೆ ಹಕ್ಕಿಗಳು ಬರೀ ಗೂಡು ಕಟ್ಟಿ ಮರಿ ಹಾಕೋಲ್ಲ, ಬೀಜಗಳ ಪ್ರಸಾರವನ್ನು ಸದ್ದಿಲ್ಲದೇ ಮಾಡುತ್ತವೆ !

Forest News: ಮಂಗಟ್ಟೆ ಹಕ್ಕಿಗಳು ಬರೀ ಗೂಡು ಕಟ್ಟಿ ಮರಿ ಹಾಕೋಲ್ಲ, ಬೀಜಗಳ ಪ್ರಸಾರವನ್ನು ಸದ್ದಿಲ್ಲದೇ ಮಾಡುತ್ತವೆ !

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಮಂಗಟ್ಟೆ( Hornbill) ಹಕ್ಕಿಗಳ ವಿಶೇಷ ಏನು. ಇಲ್ಲಿದೆ ವರದಿ

ಮಂಗಟ್ಟೆ ಹಕ್ಕಿಗಳ ಸಾಗಿಸುವ ಬಗೆಬಗೆಯ ಹಣ್ಣು, ಮರದ ಬೀಜಗಳು.
ಮಂಗಟ್ಟೆ ಹಕ್ಕಿಗಳ ಸಾಗಿಸುವ ಬಗೆಬಗೆಯ ಹಣ್ಣು, ಮರದ ಬೀಜಗಳು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ( Dandeli) ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಹೋದರೆ ನೀವು ಯಥೇಚ್ಚ ಚೂಪು ಮೂತಿಯ ಮಂಗಟ್ಟೆ ಹಕ್ಕಿಗಳನ್ನು( Great Hornbills) ಕಾಣಬಹುದು. ಕೊಕ್ಕಿನಲ್ಲಿ ಏನನ್ನೋ ಹಿಡಿದುಕೊಂಡು ಹೋಗುವ ಮಂಗಟ್ಟೆ ಹಕ್ಕಿಗಳು ಸದ್ದಿಲ್ಲದ ಜೀವ ವೈವಿಧ್ಯರ ಪ್ರಸಾರಕಗಳೂ ಹೌದು. ಮಂಗಟ್ಟೆ (ಹಾರ್ನ್‌ಬಿಲ್) ಹಕ್ಕಿಗಳು ಗೂಡು ಕಟ್ಟಿರುವ ಮರದಡಿಯಲ್ಲಿ‌ ಕಂಡು ಬರುವ ವೈವಿಧ್ಯಮಯ ವೃಕ್ಷಜಾತಿ ಬೀಜಗಳನ್ನು ಒಮ್ಮೆ ಕಣ್ಣಾಡಿಸಿದರೆ ಅದರ ಅರಿವಿಗೆ ಬರುತ್ತದೆ. ನಿಜಕ್ಕೂ ಈ ಹಕ್ಕಿಗಳು ಜೀವವೈವಿಧ್ಯತೆಯನ್ನೂ ಪ್ರಸಾರ ಮಾಡುವ ಕಾಯಕದಲ್ಲೂ ನಿರತವಾಗಿವೆ.

ಟ್ರೆಂಡಿಂಗ್​ ಸುದ್ದಿ

ಜೀವ ವೈವಿಧ್ಯತೆಯು ಸಸ್ಯ, ಪ್ರಾಣಿ, ಪಕ್ಷಿ, ಕೀಟ, ಹೊಲಗದ್ದೆಯ ಬೆಳೆಗಳು ಎಲ್ಲವೂಗಳ ವೈವಿಧ್ಯತೆಯನ್ನು ಒಳಗೊಳ್ಳುತ್ತದೆ. ಕಾಡಿನಲ್ಲಿ ಜೀವವೈವಿಧ್ಯವನ್ನು ರೂಪಿಸುವಲ್ಲಿ, ಅಭಿವೃದ್ಧಿ ಪಡಿಸುವಲ್ಲಿ ಅಲ್ಲಿನ ವೈವಿಧ್ಯಮಯ ವನ್ಯಜೀವಿಗಳು ಪ್ರಧಾನ ಪಾತ್ರ ನಿರ್ವಹಿಸುತ್ತವೆ. ದಾಂಡೇಲಿ ಸುತ್ತಮುತ್ತಲಿನ ಪ್ರದೇಶವನ್ನು ಮಂಗಟ್ಟೆ ಹಕ್ಕಿಗಳ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ಅರಣ್ಯ ಇಲಾಖೆ( Karnataka Forest Department) ಕೂಡ ಈಗಾಗಲೇ ಘೋಷಿಸಿದೆ.

ಮಂಗಟ್ಟೆಗಳ ಸುತ್ತಮುತ್ತ

ವಿವಿಧ ಪಕ್ಷಿ ಪ್ರಾಣಿಗಳು ತಿಂದ ವೈವಿಧ್ಯಮಯ ಹಣ್ಣುಗಳ ಬೀಜಗಳು ವಿವಿಧ ಪಕ್ಷಿಗಳು, ಆನೆ, ಕೋತಿ, ಅಳಿಲು, ಕರಡಿ, ಪುನಗುಬೆಕ್ಕಿನಂತಹ ಫಲಹಾರ ಇಷ್ಟಪಡುವ ಪ್ರಾಣಿಗಳಿಂದ ಕಾಡಿನ ವಿವಿಧ ಭಾಗಕ್ಕೆ ಸ್ವಾಭಾವಿಕವಾಗಿ ಪ್ರಸಾರಗೊಂಡು ಅವು ಮರುಹುಟ್ಟು ಪಡೆಯಲು ಸಾಧ್ಯವಾಗುತ್ತದೆ.

ಅದರಲ್ಲೂ ಕೆಲವು ಬೀಜಗಳು ಪ್ರಾಣಿಪಕ್ಷಿಗಳ ದೇಹ ಸೇರಿ ಬೀಜೋಪಚಾರವಾದರೆ (Seed treatment) ಮಾತ್ರ ಅವು ಮರುಹುಟ್ಟು (Germination) ಪಡೆಯುತ್ತವೆ. ಆಲ, ಅರಳಿ, ಗೋಣಿ, ಶ್ರಿಗಂಧದಂತ ಮರಗಳ ಹಣ್ಣುಗಳನ್ನು ತಿನ್ನುವ ಪಕ್ಷಿಗಳು ನಂತರ ತಮ್ಮ ಪಿಕ್ಕೆಗಳ‌ ಮೂಲಕ ಹೊರಹಾಕುವ ಬೀಜಗಳು ಅತ್ಯಂತ ಪರಿಣಾಮಕಾರಿಯಾಗಿ ಮೊಳಕೆಯೊಡೆದು ಗಿಡವಾಗುತ್ತವೆ.

ಕಾಡಿನ ಆಯಕಟ್ಟಿನ ಜಾಗಕ್ಕೆ ಬೀಜ ಪ್ರಸಾರ ಮಾಡುವ ವಿಶೇಷ ಸಾಮರ್ಥ್ಯ ಇರುವುದು ವನ್ಯಜೀವಿಗಳಿಗೆ ಮಾತ್ರ. ಈ ಹಿನ್ನಲೆಯಲ್ಲಿ ಕಾಡಿನ ನಿರಂತರ ಬೆಳವಣಿಗೆ, ಅಭಿವೃದ್ಧಿಗೆ ನಿರಂತರವಾಗಿ ತಮ್ಮ ಚಟುವಟಿಕೆಗಳ ಮೂಲಕ ಕೊಡುಗೆ ನೀಡುವ ವಿವಿಧ ವನ್ಯಜೀವಿಗಳು ಕಾಡಿನ ರೈತರುಗಳು ಎಂದೇ ಗುರುತಿಸಲಾಗುತ್ತದೆ.

ಹಾರ್ನ್‌ಬಿಲ್‌ಗಳ ವಿಶೇಷ

ಹಾರ್ನ್'ಬಿಲ್ ಹಕ್ಕಿಗಳ‌ ಬಗ್ಗೆ ಹೇಳುವುದಾದರೆ ಭಾರತದಲ್ಲಿ ಸದ್ಯ 9 ಬಿವಿಧ ಬಗೆಯ ಹಾರ್ನ್‌ಬಿಲ್‌ಗಳಿದ್ದು, ನಮ್ಮ ರಾಜ್ಯದ ದಾಂಡೇಲಿ ಕರ್ನಾಟಕದಲ್ಲಿ ಇವುಗಳ ಪ್ರಮುಖ ನೆಲೆ. ಗ್ರೇಟ್ ಹಾರ್ನ್ ಬಿಲ್ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಕಂಡುಬಂದರೆ, ಗ್ರೇ ಹಾರ್ನ್ ಬಿಲ್ ನಮ್ಮ ಬಯಲು ಸೀಮೆಯಲ್ಲೂ ಸಾಕಷ್ಟು ಕಂಡುಬರುತ್ತವೆ.

ದೊಡ್ಡ ಗಾತ್ರದ ಹಾರ್ನ್ ಬಿಲ್'ಗಳು ವೈವಿಧ್ಯಮಯ ಆಹಾರ ಸೇವಿಸಿದರೂ‌ ಕಾಡಿನ ವಿವಿಧ ಬಗೆಯ ಹಣ್ಣುಗಳು ಇವುಗಳ‌ ನೆಚ್ಚಿನ ಆಹಾರ.

ಪಕ್ಕಾ ಕೌಟುಂಬಿಕ ಜೀವಿಗಳಾದ ಇವುಗಳಲ್ಲಿ ಸಂತಾನ ಸಮಯದಲ್ಲಿ ಹೆಣ್ಣುಹಕ್ಕಿ ಗೂಡೊಳಗಿದ್ದು ಚಿಕ್ಕರಂದ್ರವೊಂದನ್ನು ಬಿಟ್ಟು ಉಳಿದ ಜಾಗ ಇರದಂತೆ ತನ್ನ ಗೂಡನ್ನು ಭದ್ರಪಡಿಸಿಕೊಂಡು ತನ್ನ ಸಂಗಾತಿ ಗಂಡುಹಕ್ಕಿ ತರುವ ಆಹಾರಕ್ಕೆ ಅವಲಂಬಿಯಾಗಿ ಮೊಟ್ಟೆಗಳಿಗೆ ಕಾವುಕೊಟ್ಟು ದೀರ್ಘ ಕಾಲ ಮರಿಗಳ ಪೋಷಣೆ ಮಾಡುತ್ತದೆ.

ಇದನ್ನೂ ಓದಿರಿ: National Brothers Day: ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು? ಈ ದಿನ ಅಣ್ಣ-ತಮ್ಮನಿಗೆ ಹೇಗೆಲ್ಲಾ ವಿಶ್‌ ಮಾಡಬಹುದು? ಇಲ್ಲಿದೆ ಐಡಿಯಾ

ಈ ಸಂದರ್ಭದಲ್ಲಿ ಕಾಡಿನ ವಿವಿಧ ಪ್ರದೇಶದಿಂದ ವಿವಿಧ ಹಣ್ಣು ಹಂಪಲುಗಳನ್ನು ತರುವ ಗಂಡುಹಕ್ಕಿ, ಅವನ್ನು ದೂರದಿಂದ ತರುವಾಗಲೆ ಕೆಲವು ಹಣ್ಣುಗಳನ್ನು ಕಾಡಿನ ವಿವಿಧ ಭಾಗಗಳಲ್ಲಿ ಆಯತಪ್ಪಿ ಬೀಳಿಸಿರುತ್ತದೆ. ಇದರ ಜೊತೆಗೆ ಹಣ್ಣು ತಿಂದ ನಂತರ ತಮ್ಮ ಪಿಕ್ಕೆಗಳಿಂದ ಮತ್ತೆ ಬೀಜಗಳನ್ನು ಕಾಡಿಗೆ ಮರಳಿಸುತ್ತವೆ. ಹೀಗಾಗಿ ಇವು ಕಾಡಿನ ಜೀವವೈವಿಧ್ಯತೆಗೆ ನೀಡುವ ಕೊಡುಗೆ ಅಪಾರ ಎನ್ನುವುದು ಪರಿಸರ ಪರಿವಾರ ಬಳಗದ ಸಂಜಯ ಹೊಯ್ಸಳ ಅವರ ಅಭಿಪ್ರಾಯ.

ಟಿ20 ವರ್ಲ್ಡ್‌ಕಪ್ 2024