ನವಿಲು ಬೇಟೆ, ಆಹಾರ ಸೇವನೆಯೂ ವನ್ಯಜೀವಿ ಕಾಯಿದೆ ಅಡಿ ಸಂಪೂರ್ಣ ನಿಷೇಧ; ವಿಶೇಷ ಅಡುಗೆ ವಿಡಿಯೋ ಮಾಡಿ ಜೈಲು ಸೇರಿದ ಯೂಟ್ಯೂಬರ್‌-forest news indian peacock hunting using meat illegal punishable telangana youtuber caught with peacock meat video kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನವಿಲು ಬೇಟೆ, ಆಹಾರ ಸೇವನೆಯೂ ವನ್ಯಜೀವಿ ಕಾಯಿದೆ ಅಡಿ ಸಂಪೂರ್ಣ ನಿಷೇಧ; ವಿಶೇಷ ಅಡುಗೆ ವಿಡಿಯೋ ಮಾಡಿ ಜೈಲು ಸೇರಿದ ಯೂಟ್ಯೂಬರ್‌

ನವಿಲು ಬೇಟೆ, ಆಹಾರ ಸೇವನೆಯೂ ವನ್ಯಜೀವಿ ಕಾಯಿದೆ ಅಡಿ ಸಂಪೂರ್ಣ ನಿಷೇಧ; ವಿಶೇಷ ಅಡುಗೆ ವಿಡಿಯೋ ಮಾಡಿ ಜೈಲು ಸೇರಿದ ಯೂಟ್ಯೂಬರ್‌

Peacock Hunt ನವಿಲು ಬೇಟೆ, ಮಾಂಸ ಸೇವನೆ, ನವಿಲು ಗರಿಗಳ ಮಾರಾಟ ವನ್ಯಜೀವಿ ಕಾಯಿದೆ ಅಡಿ ನಿಷಿದ್ಧ. ಹೀಗಿದ್ದರೂ ಯೂಟೂಬರ್‌ ಹುಚ್ಚಾಟವಾಡಿ ಸಿಕ್ಕಿಬಿದ್ದಿದ್ದಾನೆ.

Wildlife act ವನ್ಯಜೀವಿ ಕಾಯಿದ ಪ್ರಕಾರ ನವಿಲು ಬೇಟೆ, ಆಹಾರ ಸೇವನೆಗೆ ಅವಕಾಶವೇ ಇಲ್ಲ.
Wildlife act ವನ್ಯಜೀವಿ ಕಾಯಿದ ಪ್ರಕಾರ ನವಿಲು ಬೇಟೆ, ಆಹಾರ ಸೇವನೆಗೆ ಅವಕಾಶವೇ ಇಲ್ಲ.

ಬೆಂಗಳೂರು: ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ನವಿಲು ಬೇಟೆ, ಆಹಾರ ಸೇವನೆ ನಿಷಿದ್ಧ. ಹೀಗೆ ಮಾಡಿ ಸಿಕ್ಕಿಬಿದ್ದರೆ ಜೈಲು ಶಿಕ್ಷೆಯೂ ಗ್ಯಾರಂಟಿ. ಅವೂ ನವಿಲು ಮಾಂಸ ತಯಾರಿಸಿ ಅದನ್ನು ವಿಡಿಯೋ ಮಾಡಿದ ತೆಲಂಗಾಣದ ಯೂಟೂಬರ್‌ ಒಬ್ಬಾತ ಸಿಕ್ಕಿಬಿದ್ದಿದ್ದಾನೆ. ಆತ ಹಂಚಿಕೊಂಡ ವಿಡಿಯೋ ವೀಕ್ಷಿಸಿದ ನಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ತ್ವರಿತವಾಗಿ ದಾಳಿ ಮಾಡಿ ಯೂಟೂಬರ್‌ ಬಂಧಿಸಿ ಆತನ ಮನೆಯಲ್ಲಿ ಮಾಂಸವನ್ನು ಸಂಗ್ರಹಿಸಿದ್ದಾರೆ. ಬಂಧಿತನನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ಕರ್ನಾಟಕದಲ್ಲೂ ಅರಣ್ಯ ಇಲಾಖೆ ಅಲರ್ಟ್‌ ಆಗಿದೆ. ನವಿಲು ಬೇಟೆ, ಆಹಾರ ತಯಾರಿಸುವ ಪ್ರಕರಣಗಳಿದ್ದರೆ ಗಮನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಏಕೆಂದರೆ ಕರ್ನಾಟಕದಲ್ಲೂ ಕಳೆದ ವರ್ಷ ಮಾಂಸಕ್ಕಾಗಿ ನವಿಲು ಬೇಟೆ ಪ್ರಕರಣಗಳು ವರದಿಯಾಗಿದ್ದವು.

ಯೂಟೂಬರ್‌ ಹುಚ್ಚಾಟ

ಆತನ ಹೆಸರು ಕೋಡಂ ಪ್ರಣಯ ಕುಮಾರ್‌. ಕೆಲ ವರ್ಷಗಳಿಂದ ಯೂಟೂಬರ್‌ . ವಿಶೇಷವಾಗಿ ಆಹಾರಕ್ಕೆ ಸಂಬಂಧಿಸಿದ ರೆಸಿಪಿಗಳನ್ನು ಹಾಕುವುದು ನಡೆದುಕೊಂಡು ಬಂದಿದೆ. ಅದರಲ್ಲೂ ಮಾಂಸಾಹಾರದ ತಯಾರಿ ಮಾಡುವ ವಿಡಿಯೋಗಳು ಜನರನ್ನು ಸೆಳೆಯುತ್ತವೆ. ಅದೇ ಉತ್ಸಾಹದಲ್ಲಿ ನವಿಲು ಮಾಂಸವನ್ನು ತಯಾರಿಸುವ ವಿಡಿಯೋ ಹಾಕಿದ್ದ. ಮುಂದೆ ಬಣ್ಣ ಬಣ್ಣದ ನವಿಲಿನ ಚಿತ್ರವೂ ಇತ್ತು. ಈ ಬಾರಿ ಭಾರೀ ಲೈಕ್‌ಗಳು ಬರಬಹದು ಎನ್ನುವ ನಿರೀಕ್ಷೆ ಕುಮಾರ್‌ಗೆ ಇತ್ತು. ಆದರೆ ಆಗಿದ್ದೇ ಬೇರೆ. ಇದನ್ನು ನೋಡಿದ ನೆಟ್ಟಿಗರು, ನವಿಲು ಮಾಂಸ ಬಳಕೆ ನಿಷೇಧವಿದೆ. ಅದನ್ನು ತಯಾರಿಸಿದ್ದು ಏಕೆ, ನವಿಲು ಎಲ್ಲಿಂದ ತಂದಿರಿ, ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದಾಗುತ್ತಿದ್ದಂತೆ ಆತ ವಿಡಿಯೋ ಡಿಲೀಟ್‌ ಮಾಡಿದ್ದ. ಆದರೆ ವಿಷಯ ತಿಳಿದ ಅರಣ್ಯ ಇಲಾಖೆಯರು ಪೊಲೀಸರ ಸಹಕಾರದಿಂದ ತೆಲಂಗಾಣದ ಸಿರಸಿಲಾ ಜಿಲ್ಲೆಯ ತಂಗಪಲ್ಲಿ ಎಂಬಲ್ಲಿ ಆತನನ್ನು ವಶಕ್ಕೆ ಪಡೆದಿದ್ದರು. ಅಲ್ಲಿದ್ದ ಮಾಂಸವನ್ನು ವಶಕ್ಕೆ ಪಡೆದುಕೊಂಡು ಪರೀಕ್ಷೆಗೆ ರವಾನಿಸಿದರು. ಆನಂತರ ಆತನ ವಿರುದ್ದ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಮೊಕದ್ದಮೆ ದಾಖಲಿಸಿದ್ದು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಿರಸಿಲಾ ಎಸ್ಪಿ ಅಖಿಲ್‌ ಮಹಾಜನ್‌ ಅವರ ಪ್ರಕಾರ, ಕುಮಾರ್‌ ನವಿಲು ಮಾಂಸ ವಿಡಿಯೋ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಇದು ವನ್ಯಜೀವಿ ಕಾಯಿದೆ ಅಡಿ ನಿಷಿದಧ. ಆತನ ವಿರುದ್ದ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ನವಿಲು ಬೇಟೆಯಾಡಿದರೆ ಏನು ಶಿಕ್ಷೆ?

ನವಿಲು ಪ್ರಮುಖ ಪಕ್ಷಿ.ಅದಕ್ಕೆ ರಾಷ್ಟ್ರ ಪಕ್ಷಿ ಸ್ಥಾನ ನೀಡಲಾಗಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ನವಿಲುಗಳಿವೆ. ಕರ್ನಾಟಕದಲ್ಲೂ ಈ ಸಂಖ್ಯೆ ಹೆಚ್ಚೇ ಇದೆ. ನವಿಲು ಬೇಟೆ ಸಂಪೂರ್ಣ ನಿಷೇಧ.

ವನ್ಯಜೀವಿ ಸಂರಕ್ಷಣಾ ಕಾಯಿದೆ (WPA), 1972 ರ ಶೆಡ್ಯೂಲ್ - 1 ರ ಅಡಿಯಲ್ಲಿ ನವಿಲು ಸಂರಕ್ಷಿತ ಪಕ್ಷಿ.. ಕಾಯಿದೆಯ ಸೆಕ್ಷನ್ 51 ಅಂತಹ ಜಾತಿಗಳನ್ನು ಕೊಲ್ಲುವುದನ್ನು ನಿಷೇಧಿಸುತ್ತದೆ ಮತ್ತು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ಗಿಂತ ಕಡಿಮೆಯಿಲ್ಲದ ದಂಡವನ್ನು ಆಹ್ವಾನಿಸುತ್ತದೆ.

ನವಿಲುಗಳನ್ನು ಮುಖ್ಯವಾಗಿ ಮೂರು ವಿಧಗಳಲ್ಲಿ ಕೊಲ್ಲಲಾಗುತ್ತದೆ. ಬೇಟೆಯಾಡುವುದು, ರಸ್ತೆ ಮರಣ ಮತ್ತು ವಿಷ ಹಾಕುವುದು. ಇದರಲ್ಲಿ ವಿಷ ಹಾಕುವುದು, ಬೇಟೆಯಾಡುವುದು ಅಪರಾಧ.

ಮಾಂಸದ ಬೆಲೆ ಹೆಚ್ಚಾದಾಗ ನವಿಲು ಬೇಟೆ ಹೆಚ್ಚು ಸಾಮಾನ್ಯವಾಗಿದೆ. ನವಿಲುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದು ಈಗ ಸಾಮಾನ್ಯ ವಿದ್ಯಮಾನವಾಗಿದೆ. ಅರಣ್ಯ ಇಲಾಖೆಯೂ ವಿಚಕ್ಷಣೆ ಇಟ್ಟಿರುತ್ತದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.

ನವಿಲುಗರಿ

ನವಿಲು ಗರಿಗಳನ್ನು ಸಂಗ್ರಹಿಸಲು ಸಾರ್ವಜನಿಕರಿಗೆ ಯಾವುದೇ ನಿರ್ಬಂಧಗಳಿಲ್ಲ. ಮನೆಯ ಬಳಿ ಬಂದಾಗ ಬಿದ್ದ ನವಿಲುಗರಿಯನ್ನು ಪುಸ್ತಕದಲ್ಲೋ ಮನೆಯಲ್ಲೋ ಇಟ್ಟರೆ ಅಪರಾಧವಾಗದು. ಆದಾಗ್ಯೂ, ಅವರು ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದಾಗ ಅದು ಕಾನೂನುಬಾಹಿರವಾಗಿದೆ. ಅರಣ್ಯ ಅಧಿಕಾರಿಗಳು ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಗರಿಗಳು ಪ್ರತ್ಯೇಕ ಬೆಲೆಯನ್ನು ಹೊಂದಿದ್ದರೂ, ಮಾಂಸವು ಬೇಟೆಗಾರನಿಗೆ ಹೆಚ್ಚುವರಿ ಆದಾಯವನ್ನು ನೀಡುವುದರಿಂದ ಮಾಂಸಕ್ಕಾಗಿ ಬೇಟೆಯೇ ಹೆಚ್ಚು ಎನ್ನುತ್ತಾರೆ ಅಧಿಕಾರಿಗಳು.

ಕರ್ನಾಟಕದಲ್ಲೂ ಕಟ್ಟೆಚ್ಚರ

ಕರ್ನಾಟಕದಲ್ಲೂ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಪ್ರದೇಶ ಮಾತ್ರವಲ್ಲದೇ ಅರಣ್ಯದಂಚಿನಲ್ಲಿ. ಗುಡ್ಡ ಪ್ರದೇಶದಲ್ಲಿ ನವಿಲು ಇವೆ. ದಗ ಜಿಲ್ಲೆಯ ಕಾಲಕಾಲೇಶ್ವರ ಬಿಟ್ಟದಿಂದ ಹಿಡಿದು ಬಾಗಲಕೋಟೆ ಜಿಲ್ಲೆ ಗುಡೂರ ಮಧ್ಯದಲ್ಲಿ ಬರುವ ಚಂದಾಲಿಂಗಬೆಟ್ಟ, ವೆಂಕಟಾಪುರ ಬೆಟ್ಟ, ಬಾದಿಮನಾಳ, ಅರಸಿಬಿಡಿ ಕೆರೆ ಭಾಗದಲ್ಲಿ ಸುಮಾರು 40 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು2ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನವಿಲುಗಳು ಇವೆ. ಕೆಲವು ಕಡೆ ಆಹಾರಕ್ಕೆ ಬಂದು ವಿಷದಿಂದ ಸಾಯುತ್ತವೆ ನವಿಲುಗಳು. ಬೇಟೆಯಾಡಿ ಮಾಂಸ ಮಾರಾಟ ಮಾಡುವುದೂ ಅಲ್ಲಲ್ಲಿ ನಡೆದಿದೆ. ಕಳೆದ ವರ್ಷವೇ ಉತ್ತರ ಕನ್ನಡದ ಭಟ್ಕಳ, ತುಮಕೂರು ಸಹಿತ ಹಲವು ಕಡೆಗಳಲ್ಲಿ ಹೀಗೆ ನವಿಲು ಬೇಟೆಯಾಡಿ ಸಿಕ್ಕಿಬಿದ್ದ ಪ್ರಕರಣ ವರದಿಯಾಗಿವೆ. ಅವರ ವಿರುದ್ದ ವನ್ಯಜೀವಿ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಈಗಲೂ ಇಲಾಖೆ ಗಮನ ಹರಿಸುತ್ತಲೇ ಎಂದು ಅಧಿಕಾರಿಯೊಬ್ಬರು ವಿವರಿಸಿದರು.