ಕನ್ನಡ ಸುದ್ದಿ  /  ಕರ್ನಾಟಕ  /  Forest News: ಅರಣ್ಯ ಇಲಾಖೆ ಪ್ರಕರಣ ವಜಾ, ಹಿರಿಯ ಅಧಿಕಾರಿಗಳಿಂದಲೇ ಮೊಕದ್ದಮೆಗೆ ಸೂಚನೆ

Forest News: ಅರಣ್ಯ ಇಲಾಖೆ ಪ್ರಕರಣ ವಜಾ, ಹಿರಿಯ ಅಧಿಕಾರಿಗಳಿಂದಲೇ ಮೊಕದ್ದಮೆಗೆ ಸೂಚನೆ

ಕರ್ನಾಟಕದಲ್ಲಿ ಅರಣ್ಯ ಸಂಬಂಧಿ ಅಪರಾಧ ಪ್ರಕರಣಗಳನ್ನು ವಲ ಅರಣ್ಯಾಧಿಕಾರಿ( RFO) ದರ್ಜೆ ಹಾಗೂ ಮೇಲ್ಪಟ್ಟ ಅಧಿಕಾರಿಗಳು ದಾಖಲಿಸಬೇಕು ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಅರಣ್ಯ ಅಪರಾಧ ಪ್ರಕರಣದ ಬಗ್ಗೆ ಗಮನ ಹರಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ
ಅರಣ್ಯ ಅಪರಾಧ ಪ್ರಕರಣದ ಬಗ್ಗೆ ಗಮನ ಹರಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಅರಣ್ಯ ಇಲಾಖೆಗೂ ಅಪರಾಧಗಳಿಗೂ ನಂಟು ಹೆಚ್ಚು. ಏಕೆಂದರೆ ವನ್ಯಬೇಟೆಯಂತಹ ಗುರುತರ ಅಪರಾಧದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಪ್ರಾಣಿಗಳ ಬೇಟೆ, ಪ್ರಾಣಿಗಳ ಅಂಗಾಂಗಗಳ ಮಾರಾಟ, ಅಕ್ರಮ ಅರಣ್ಯ ಪ್ರವೇಶ ಸೇರಿದಂತೆ ಹಲವು ಪ್ರಕರಣಗಳು ಕರ್ನಾಟಕದ ಅರಣ್ಯ ಪ್ರದೇಶ ಹಾಗೂ ಅರಣ್ಯದಂಚಿನಲ್ಲಿ ನಡೆಯುತ್ತಿರುತ್ತಲೇ ಇವೆ. ಆದರೆ ಅಪರಾಧ ಮಾಡಿದವರು ಶಿಕ್ಷೆಗೆ ಗುರಿಯಾಗುವ ಪ್ರಮಾಣವೂ ಕಡಿಮೆಯಾಗಿ ತಪ್ಪಿಸಿಕೊಳ್ಳುವ ಸನ್ನಿವೇಶವೂ ಎದುರಾಗುತ್ತಿದೆ. ಏಕೆಂದರೆ ಕೆಳಹಂತದ ಸಿಬ್ಬಂದಿ ಪ್ರಕರಣದ ದಾಖಲಿಸುತ್ತಿರುವುದು, ಅದರಲ್ಲಿ ಸೂಕ್ತ ಕಾನೂನಿನ ಅಂಶ ಬಳಕೆಯಾಗದೇ ಇರುವುದು ಇದಕ್ಕೆ ಕಾರಣ ಎನ್ನುವ ಮಾತುಗಳು ಅರಣ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಹೀಗೆ ದಾಖಲಾದ ಪ್ರಕರಣಗಳನ್ನು ಕರ್ನಾಟಕದ ಉಚ್ಚ ನ್ಯಾಯಾಲಯವೂ ತಾಂತ್ರಿಕ ಕಾರಣ ನೀಡಿ ವಜಾಗೊಳಿಸುತ್ತಿದೆ. ಅಲ್ಲದೇ ಕರ್ನಾಟಕ ಅರಣ್ಯ ಕಾಯಿದೆ ಸೆಕ್ಷನ್‌ 62ಎ ಪ್ರಕಾರ ವಲಯ ಅರಣ್ಯಾಧಿಕಾರಿಗಿಂಥ ಕೆಳ ದರ್ಜೆಯ ಅಧಿಕಾರಿ ಯಾವುದೇ ಕಾರಣಕ್ಕೂ ಅಪರಾಧ ಪ್ರಕರಣಗಳನ್ನು ದಾಖಲಿಸುವಂತಿಲ್ಲ. ವಲಯ ಅರಣ್ಯಾಧಿಕಾರಿ ಇಲ್ಲವೇ ಮೇಲ್ದರ್ಜೆಯ ಅಧಿಕಾರಿಗಳು ಮಾತ್ರ ಅಪರಾಧ ನಡೆದ ವ್ಯಾಪ್ತಿಯ ಸಂಬಂಧಿತ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಬೇಕು ಎನ್ನುವ ಅಂಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ಕಾರಣದಿಂದ ಅರಣ್ಯ ಇಲಾಖೆ ತುರ್ತಾಗಿ ಗಮನ ಹರಿಸಬೇಕು ಎನ್ನುವ ಸಲಹೆಯನ್ನೂ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಹೂಡಲಾಗಿರುವ ಹಲವು ಅರಣ್ಯ ಪ್ರಕರಣಗಳು ತಾಂತ್ರಿಕ ಕಾರಣದಿಂದ ವಜಾ ಆಗುತ್ತಿರುವುದನ್ನು ಇಲಾಖೆ ಗಮನಿಸಿದೆ. ಇದಕ್ಕೆ ಕೂಡಲೇ ಪರಿಹಾರೋಪಾಯಗಳನ್ನು ಕಂಡುಕೊಂಡು ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಜವಾಬ್ದಾರಿಯನ್ನು ವಲಯ ಅರಣ್ಯಾಧಿಕಾರಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಹಂಚಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಈ ಬಗ್ಗೆ ಸೂಚನೆ ನೀಡಿರುವ ಕರ್ನಾಟಕ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ವಲಯ ಅರಣ್ಯಾಧಿಕಾರಿ ದರ್ಜೆಗಿಂತ ಕೆಳಗಿನ ಹುದ್ದೆಯವರು ದಾಖಲಿಸಿರುವ ಪ್ರಕರಣಗಳು ವಜಾ ಆಗಿವೆ. ಇದು ಇಲಾಖೆಯು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಕೈಗೊಂಡ ನಿರರ್ಥಕ ಪ್ರಯತ್ನ. ಈ ಹಿನ್ನೆಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ವಲಯ ಅರಣ್ಯಾಧಿಕಾರಿ ಹಾಗೂ ಮೇಲ್ಪಟ್ಟ ಅಧಿಕಾರಿಗಳೇ ಮೊಕದ್ದಮೆಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಸಿಆರ್‌ಪಿಸಿ ಅಡಿ ಸೂಕ್ತ ಪೂರ್ವಾನುಮತಿಯೊಂದಿಗೆ ಅರಣ್ಯ ಅಪರಾಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಕಾರ್ಯಪಡೆಯ ಮುಖ್ಯಸ್ಥರಾದ ಬಿ.ಕೆ.ದೀಕ್ಷಿತ್‌ ಅವರಿಗೆ ಸೂಚಿಸಿದ್ದಾರೆ.

ಈಗಾಗಲೇ ವಲಯ ಅರಣ್ಯಾಧಿಕಾರಿ ದರ್ಜೆಗಿಂತ ಕೆಳಗಿನ ಅಧಿಕಾರಿ ದಾಖಲಿಸಿರುವ ಮತ್ತು ನ್ಯಾಯಾಲಗಳಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಕಾನೂನು ಸಲಹೆಯನ್ನು ಪಡೆಯಲಾಗುತ್ತಿದೆ. ಇದಕ್ಕೆ ಸದ್ಯದಲ್ಲೇ ಸಭೆಯನ್ನೂ ಕರೆಯಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024