ಕನ್ನಡ ಸುದ್ದಿ / ಕರ್ನಾಟಕ /
Tiger Day 2024: ಹುಲಿ ಕಾಡಿನಲ್ಲಿ ಇದ್ದರೆ ಏನು ಉಪಯೋಗ, ಹುಲಿಯ ಹತ್ತು ವಿಶೇಷಗಳು
Tiger day special ಕರ್ನಾಟಕದ ಅರಣ್ಯದಲ್ಲಿ( Karnataka Forest) ತನ್ನ ಅಸ್ತಿತ್ವ ಕಾಪಾಡಿಕೊಂಡಿರುವ ಹುಲಿಗಳ( Tigers) ಉಳಿವು ಏಕೆ ಬೇಕು. 2024ರ ಜುಲೈ 29 ಹುಲಿ ದಿನದ ಸಂದರ್ಭದಲ್ಲಿ ಇಲ್ಲಿದೆ ಪ್ರಮುಖಾಂಶಗಳು.

ಹುಲಿ ಉಳಿವು ಬರೀ ಅರಣ್ಯ ಮಾತ್ರವಲ್ಲ. ಮಾನವನ ಉಳಿವು ಕೂಡ.
ಹುಲಿ( Tiger) ಎನ್ನುವ ಪದವೇ ಒಂದು ರೀತಿ ಅಭಿಮಾನದ ಸಂಕೇತ. ಅರಣ್ಯದ ಪರಿಸರದಲ್ಲಿ ಉನ್ನತ ಸ್ಥಾನ ಹೊಂದಿರುವ ಹುಲಿ ಅಳಿವು ಉಳಿವಿನ ಹಿಂದೆ ಅರಣ್ಯ ಮಾತ್ರವಲ್ಲದೇ ಮನುಷ್ಯನ ಅಳಿವು ಉಳಿವು ಕೂಡ ಅಡಗಿದೆ. ಹುಲಿ ಇದ್ದರೆ ಏನಾಗುತ್ತದೆ, ಇಲ್ಲದೇ ಇದ್ದರೆ ಏನಾಗಬಹುದು ಎನ್ನುವ ಪ್ರಶ್ನೆಗೆ ಉತ್ತರಗಳು ಇಲ್ಲಿವೆ. ಹುಲಿ ಏಕೆ ಬೇಕು, ಅದರ ಮಹತ್ವವೇನು, ಹುಲಿಯಿಂದ ನಮಗೇನೂ ಉಪಯೋಗ ಎನ್ನುವ ಹತ್ತು ಪ್ರಮುಖ ಅಂಶಗಳು ಇಲ್ಲಿವೆ.
- ಹುಲಿ ಕಾಡಿನ ರಾಜನಲ್ಲ. ಆದರೆ ಕಾಡಿನಲ್ಲಿನ ಅನಭಿಷಕ್ತ ದೊರೆ. ಸಿಂಹವನ್ನು ಕಾಡಿನ ರಾಜ ಎಂದು ಕರೆದರೂ ಕರ್ನಾಟಕದ ಕಾಡುಗಳಲ್ಲಿ ಸಿಂಹಗಳಿಲ್ಲ. ಆದರೆ ಐದು ನೂರಕ್ಕೂ ಅಧಿಕ ಹುಲಿಗಳು ಕರ್ನಾಟಕದಲ್ಲಿ ನೆಲೆ ಕಂಡು ಕಂಡುಕೊಂಡಿವೆ. ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಇತ್ತೀಚಿನ ಎರಡು ದಶಕಗಳಲ್ಲಿ ಕಂಡು ಬಂದಿದೆ. ಇದರಿಂದ ಹುಲಿ ಕರ್ನಾಟಕದ ಮಟ್ಟಿಗೆ ಕಾಡಿನ ರಾಜನೇ ಹೌದು.
ಇದನ್ನೂ ಓದಿರಿ: Bandipur: ಬಂಡೀಪುರಕ್ಕೆ ಹಸಿರು ಕಳೆ ತಂದ ನಿರಂತರ ಮಳೆ, ವನ್ಯಜೀವಿಗಳೂ ನಿರಾಳ photos
- ಹುಲಿಯ ಬದುಕಿನ ಕ್ರಮ, ಅದರ ಕೌಟುಂಬಿಕ ನೆಲೆ, ಆಹಾರ, ನಿತ್ಯ ಜೀವನವೂ ಕುತೂಹಲವೇ. ಅದನ್ನು ಮೃಗಾಲಯಕ್ಕಿಂತ ಅರಣ್ಯದಲ್ಲಿಯೇ ನೋಡಿ ತಿಳಿಯಬೇಕು. ಇದಕ್ಕಾಗಿ ಅರಣ್ಯದಲ್ಲಿ ಹುಲಿಗಳು ಇದ್ದರೆ ಹತ್ತಿರದಿಂದ ಹಾಗೂ ನಿಖರವಾಗಿ ಅರಿಯಲು ಸಹಕಾರಿಯಾಗಲಿದೆ.
- ದೇಶದಲ್ಲೇ ಅತಿ ಹೆಚ್ಚು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಈಗ ಎರಡನೇ ಸ್ಥಾನ. ಹಿಂದಿನ ಅವಧಿಯಲ್ಲೂ ಕರ್ನಾಟಕ ಅದೇ ಸ್ಥಾನದಲ್ಲಿತ್ತು. ಅದಕ್ಕಿಂತ ಮುಂಚೆ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು. ಈಗಲೂ ಅರಣ್ಯ ಪ್ರದೇಶ ಹಾಗೂ ಹುಲಿಗಳ ಸಾಂಧ್ರತೆ ಲೆಕ್ಕದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಸಂಖ್ಯೆಗಳ ಲೆಕ್ಕದಲ್ಲಿ ಮಾತ್ರ ಮುಂದಿದೆ. ಹೀಗಿದ್ದರೂ ಕರ್ನಾಟಕವು ಹುಲಿಗಳ ಹೆಮ್ಮಯ ತಾಣ ಎಂಬುವ ಗೌರವ ಹೊಂದಿದೆ.
- ಯಾವುದೇ ಕಾಡಿನಲ್ಲಿ ಹುಲಿಗಳು ಇವೆ ಎಂದರೆ ಅಲ್ಲಿ ಆಹಾರದ ಸರಪಳಿಯಾಗಿ ಇತರೆ ವನ್ಯಜೀವಿಗಳೂ ಇದ್ದೇ ಇರುತ್ತವೆ. ಅದರಂತೆ ಮಾಂಸಾಹಾರ ಪ್ರಾಣಿಗಳಲ್ಲಿ ಅಗ್ರಸ್ಥಾನದಲ್ಲಿರುವ ಹುಲಿಯೊಟ್ಟಿಗೆ ಸಸ್ಯಾಹಾರಿ ಪ್ರಾಣಿಗಳು ಇರುವುದರಿಂದ ಇಡೀ ಅರಣ್ಯ ಸಮತೋಲನದಲ್ಲಿದೆ ಎಂದೇ ಅರ್ಥ. ಈ ಕಾರಣದಿಂದಲೇ ಅರಣ್ಯದಲ್ಲಿ ಹುಲಿ ಇರುವಿಕೆಗೆ ತನ್ನದೇ ಆದ ಮಹತ್ವವಿದೆ.
ಇದನ್ನೂ ಓದಿರಿ: Forest Tales: ಖೆಡ್ಡಾ ಖ್ಯಾತಿಯ ಕರ್ನಾಟಕದ ಆನೆ ಶಿಬಿರಗಳಲ್ಲಿ ಮರಣ ಮೃದಂಗ, ಅರಣ್ಯ ಇಲಾಖೆ ಎಡವುತ್ತಿರುವುದು ಎಲ್ಲಿ - ಹುಲಿ ಇರುವ ಅರಣ್ಯಗಳು ಎಂದರೆ ಅದೊಂದು ರೀತಿ ಮಹತ್ವದ ಸ್ಥಾನ. ಹುಲಿ ಇದೆ ಎನ್ನುವುದು ಪ್ರೈಡ್ ಎನ್ನುವ ಭಾವನೆ ಅರಣ್ಯ ಇಲಾಖೆಯಲ್ಲಿದೆ. ಆ ಪ್ರೈಡ್(pride) ಭಾವನೆ ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಭದ್ರಾ, ಅಣಶಿ ದಾಂಡೇಲಿ ಹುಲಿಧಾಮಗಳಿವೆ. ಬೇರೆ ಅರಣ್ಯಗಳು ಕಡಿಮೆ ಅಂದೇನೂ ಅಲ್ಲ. ಹುಲಿ ಇರುವ ಕಾರಣದಿಂದ ಜನರಲ್ಲಿರುವ ಭಾವನೆ ಭಿನ್ನವಾಗಿರುತ್ತದೆ.
- ಪರಿಸರ ಸಮತೋಲನ, ಅರಣ್ಯ ಸಂರಕ್ಷಣೆಯಲ್ಲಿ ಹುಲಿಯ ಪಾತ್ರ ಅಧಿಕ. ಹುಲಿ ಇರುವ ಅರಣ್ಯವೆಂದರೆ ಕೊಂಚ ಭಯ ಇದ್ದೇ ಇರುತ್ತದೆ. ಅರಣ್ಯ ಇಲಾಖೆಯೂ ರಕ್ಷಣೆಗೆ ಇನ್ನಿಲ್ಲದ ಒತ್ತು ನೀಡುತ್ತದೆ. ಇದರಿಂದ ಅರಣ್ಯ ಗಟ್ಟಿಯಾಗಿಯೇ ಉಳಿಯುತ್ತದೆ. ಕಾಡಿದ್ದರೆ ನಾಡು ಎನ್ನುವ ಅರ್ಥವನ್ನು ಸಾರುವ ಪ್ರಯತ್ನಕ್ಕೆ ಹುಲಿಯೂ ದೊಡ್ಡ ಕೊಡುಗೆಯನ್ನೇ ನೀಡುತ್ತಾ ಬಂದಿದೆ.
- ಹುಲಿ ಯೋಜನೆ ಕಾರಣಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥೇಚ್ಚ ಅನುದಾನವನ್ನೂ ನೀಡಿವೆ. ಇದರಿಂದಾಗಿ ಅರಣ್ಯ ಪ್ರದೇಶದಲ್ಲಿ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳ ಪ್ರಗತಿಗೂ ಇದು ನಾಂದಿ ಹಾಡಿದೆ. ಇದರ ಹಿಂದೆ ಇರುವುದು ಹುಲಿಯ ಕೊಡುಗೆಯೇ.
ಇದನ್ನೂ ಓದಿರಿ: ಪರಿಸರದ ಮಹತ್ವ: ಹವಾಮಾನ ವೈಪರಿತ್ಯ, ಅರಣ್ಯ ಸಂರಕ್ಷಣೆ ಒಂದೇ ಪರಿಹಾರವೇ, ನಮ್ಮ ನಗರಗಳನ್ನು ಪರಿಸರ ಸ್ನೇಹಿಯಾಗಿಸುವುದು ಹೇಗೆ* - ಹುಲಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಭಯವಿದ್ದಷ್ಟೇ ಅದನ್ನು ಹತ್ತಿರದಿಂದ ಹಾಗೂ ಕಾಡಿನ ಪರಿಸರದಲ್ಲಿ ನೋಡಬೇಕು ಎನ್ನುವ ಆಸೆ ಎಂತವರಿಗೂ ಇದ್ದೇ ಇರುತ್ತದೆ. ಇಂತಹ ಅಭಿಮಾನವನ್ನು ಹುಟ್ಟುಹಾಕುವಲ್ಲಿ ಹುಲಿಯ ಪಾತ್ರವೂ ಹಿರಿದಾಗಿದೆ. ಹುಲಿಯನ್ನು ನೋಡುವ ಅಭೀಪ್ಸೆಯಿಂದಲೇ ಪರಿಸರ ಪ್ರಿಯರು ಮಾತ್ರವಲ್ಲದೇ ವಿದ್ಯಾರ್ಥಿಗಳು, ನಾನಾ ಕ್ಷೇತ್ರದವರು ಅರಣ್ಯ ಅರಸಿ ಬರುವುದುಂಟು.
- ಹುಲಿಯ ಕಾರಣದಿಂದ ಪರಿಸರ ಪ್ರವಾಸೋದ್ಯಮವು( Eco tourism) ಪ್ರಬಲವಾಗಿ ಬೆಳೆದಿದೆ. ದೇಶದ ಪ್ರವಾಸೋದ್ಯಮದ ಆರ್ಥಿಕ ಪ್ರಗತಿಯ ಹಿಂದೆ ವನ್ಯಜೀವಿಗಳು ಇವೆ. ಅದರಲ್ಲೂ ಹುಲಿ ಪ್ರಮುಖ ಸ್ಥಾನ ಪಡೆದಿರುವುದರಿಂದ ಹುಲಿ ನೋಡಲು ಬರುವವರ ಪ್ರಮಾಣವೂ ಹೆಚ್ಚು. ಇದು ಪ್ರವಾಸೋದ್ಯಮ ಬೆಳವಣಿಗೆಗೆ ನಾಂದಿ ಹಾಡಿದೆ. ಅದರಲ್ಲೂ ಪರಿಸರ ಪ್ರವಾಸೋದ್ಯಮವಂತೂ ಕರ್ನಾಟಕದಲ್ಲಿ ಗಣನೀಯವಾಗಿಯೇ ಬೆಳೆದಿದೆ. ಹಲವಾರು ಮಿತಿಗಳೊಂದಿಗೆ ಬೆಳೆಯುತ್ತಲೇ ಇದೆ.
- ಪ್ರವಾಸೋದ್ಯಮ ಬೆಳೆದು ಹುಲಿ ಯೋಜನೆಗಳು ಇರುವ ಭಾಗದಲ್ಲಿ ಹೋಂ ಸ್ಟೇಗಳು, ರೆಸಾರ್ಟ್‌ಗಳು, ಹೊಟೇಲ್‌ಗಳು, ಸ್ಥಳೀಯ ಉತ್ಪನ್ನಗಳ ಮಾರಾಟ, ಸಾರಿಗೆ ವ್ಯವಸ್ಥೆಯೂ ಬಲಗೊಂಡು ಆಯಾ ಭಾಗದವರಿಗೆ ನೇರ ಉದ್ಯೋಗ ಹಾಗೂ ಪರೋಕ್ಷ ಉದ್ಯೋಗವೂ ದೊರೆತಿದೆ. ಇದರಿಂದ ಆರ್ಥಿಕವಾಗಿಯೂ ಸ್ಥಳೀಯವಾಗಿ ಸಾಕಷ್ಟು ಉಪಯೋಗಗಳು ಆಗುತ್ತಲೇ ಇವೆ.
