Elephants death: ಒಂದು ದಿನದ ಅಂತರದಲ್ಲೇ 2 ಕಾಡಾನೆ ಸಾವು; ಯಲ್ಲಾಪುರ, ಯಳಂದೂರು ವಲಯದಲ್ಲಿ ಪ್ರಕರಣ-forest news two wild elephants died in span of one day at yallapura yalandur karnataka forest department book case kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Elephants Death: ಒಂದು ದಿನದ ಅಂತರದಲ್ಲೇ 2 ಕಾಡಾನೆ ಸಾವು; ಯಲ್ಲಾಪುರ, ಯಳಂದೂರು ವಲಯದಲ್ಲಿ ಪ್ರಕರಣ

Elephants death: ಒಂದು ದಿನದ ಅಂತರದಲ್ಲೇ 2 ಕಾಡಾನೆ ಸಾವು; ಯಲ್ಲಾಪುರ, ಯಳಂದೂರು ವಲಯದಲ್ಲಿ ಪ್ರಕರಣ

ಕರ್ನಾಟಕದ ಎರಡು ವಿಭಾಗಗಳಲ್ಲಿ ಕಾಡಾನೆಗಳು ಮೃತಪಟ್ಟ ಕುರಿತು ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದೇ ದಿನದ ಅಂತರದಲ್ಲಿ ಈ ಘಟನೆ ವರದಿಯಾಗಿವೆ.

ಒಂದು ದಿನದ ಅಂತರದಲ್ಲಿ ಎರಡು ಕಾಡಾನೆಗಳು ಕರ್ನಾಟಕದಲ್ಲಿ ಮೃತಪಟ್ಟಿವೆ.
ಒಂದು ದಿನದ ಅಂತರದಲ್ಲಿ ಎರಡು ಕಾಡಾನೆಗಳು ಕರ್ನಾಟಕದಲ್ಲಿ ಮೃತಪಟ್ಟಿವೆ.

ಯಲ್ಲಾಪುರ/ ಯಳಂದೂರು: ಒಂದು ದಿನದ ಅಂತರದಲ್ಲಿಯೇ ಎರಡು ಕಾಡಾನೆಗಳು ಮೃತಪಟ್ಟ ಪ್ರಕರಣಗಳು ಕರ್ನಾಟಕದ ಭಿನ್ನ ಭಾಗದಲ್ಲಿ ವರದಿಯಾಗಿವೆ. ಬಿಸಿಲ ಕಾರಣಕ್ಕೆ ನೀರು ಇಲ್ಲವೇ ಆಹಾರ ಹುಡುಕಿಕೊಂಡು ಬರುವ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಉಪವಿಭಾಗದಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಸ್ಪರ್ಶಿದಿಂದ ಜೀವ ಕಳೆದುಕೊಂಡಿದ್ದರೆ, ಮತ್ತೊಂದು ಕಡ ಚಾಮರಾಜನಗರ ಜಿಲ್ಲೆ ಬಿಳಿರಂಗಿನಬೆಟ್ಟ ಹುಲಿಧಾಮ ವ್ಯಾಪ್ತಿಯಲ್ಲಿ ಹೆಣ್ಣು ಆನೆ ಕೆರೆಯ ಬಳಿ ಕುಸಿದು ಬಿದ್ದು ಮೃತಪಟ್ಟಿದ. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಲಗ ದುರ್ಮರಣ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಭಾರೀ ಗಾತ್ರದ ಕಾಡಾನೆಯೊಂದು ಮೃತಪಟ್ಟಿದೆ. ತೋಟಕ್ಕೆ ನುಗ್ಗಿದ ಆನೆ ಕುಸಿದು ಬಿದ್ದಿದ್ದು ವಿದ್ಯುತ್‌ ಸ್ಪರ್ಶಿಸಿ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದಾರೆ.

ಯಲ್ಲಾಪುರ ಆಲ್ಲೂಕಿನ ದೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟಿಗೆ ಗ್ರಾಮದ ಹಿಡ್ಕೆಮನೆ ಸಮೀಪದಲ್ಲಿ ಈ ಘಟನೆ ನಡೆದಿದೆ. ಸಲಗ ಗುರುವಾರ ರಾತ್ರಿ ಹಿಡ್ಕೆಮನೆಯ ಪರಮೇಶ್ವರ ರಾಮಚಂದ್ರ ಕುಣಬಿ ಎಂಬುವವರ ತೋಟಕ್ಕೆ ನುಗ್ಗಿದೆ. ಈ ವೇಳೆ ತಂತಿ ಬೇಲಿ ಸ್ಪರ್ಶಿಸಿ ಆನೆ ಕುಸಿದು ಬಿದ್ದಿದೆ. ಬೆಳಿಗ್ಗೆ ನೋಡಿದಾಗ ಭಾರೀ ಗಾತ್ರದ ಆನೆ ಮೃತಪಟ್ಟಿರುವುದು ಕಂಡು ಬಂದಿದೆ.

ಇಡಕೆಮನೆ ಭಾಗದಲ್ಲಿ ಎಲ್‌ಟಿ ವಿದ್ಯುತ್‌ ಲೈನ್‌ ಕೆಳಗಿನಿಂದ ಹಾದು ಹೋಗಿದೆ. ಇದೇ ಮಾರ್ಗದಲ್ಲಿ ಆನೆ ಬಂದಿರುವುದರಿಂದ ತಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ಡಿಸಿಎಫ್‌ ಹರ್ಷಭಾನು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಆನೆ ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆ ಮೊಕದ್ದಮೆಯನ್ನು ದಾಖಲಿಸಿದೆ. ಉತ್ತರ ಕನ್ನಡ ಭಾಗದಲ್ಲೂ ಆನೆಗಳು ಇದ್ದರೂ ಅವುಗಳು ಕಾಣುವುದು ಕಡಿಮೆ. ಕೆಲವೊಮ್ಮೆ ಹೀಗೆ ಕಾಡಿನಿಂದ ಹೊರಕ್ಕೆ ಬಂದು ಜೀವ ಬಿಡುತ್ತಿವೆ. ಕೆಲ ವರ್ಷದ ಹಿಂದೆ ಯಲ್ಲಾಪುರ ವಿಭಾಗದಲ್ಲಿಯೇ ಆನೆಯೊಂದು ಮೃತಪಟ್ಟ ಘಟನೆ ವರದಿಯಾಗಿತ್ತು.

ಹೆಣ್ಣಾನೆ ಸಾವು

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಕೆಂಕೆರೆ ಕೆರೆ ಸಮೀಪದಲ್ಲಿಯೇ ಕಾಡಾನೆ ಮೃತಪಟ್ಟಿದೆ. ಕೆರೆ ಬಳಿಯೇ ಆನೆಯ ಶವ ಪತ್ತೆಯಾಗಿದ್ದು, ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ಧಾರೆ.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಬಾಳೆ ಬಗೆ ಗಸ್ತಿನ ವ್ಯಾಪ್ತಿಯಲ್ಲಿ ಕಾಡಾನೆ ಸಾವನ್ನಪ್ಪಿದೆ. ಸ್ಥಳಕ್ಕೆ ಬಿಆರ್‌ಟಿ ನಿರ್ದೇಶಕಿ ದೀಪ್‌ ಜೆ. ಕಂಟ್ರಾಕ್ಟರ್‌, ಎಸಿಎಫ್ ನಂದಗೋಪಾಲ್‌ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಯಳಂದೂರು ಎಸಿಎಫ್‌ ನಂದಗೋಪಾಲ್‌ ತಿಳಿಸಿದ್ದಾರೆ.

ಬೇಸಿಗೆ ಕಾರಣಕ್ಕೆ ನೀರು ಹಾಗೂ ಆಹಾರ ಅರಸಿ ಕಾಡಾನೆಗಳು ತೋಟ ಇಲ್ಲವೇ ಕೆರೆಗಳತ್ತ ಧಾವಿಸುತ್ತಿವೆ. ನೀರಿನ ಕೊರತೆ, ಬಿಸಿಲಿನ ಕಾರಣಕ್ಕೂ ಇವುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಇಲ್ಲದೇ ಇದ್ದರೆ ದುರಂತಕ್ಕೆ ಬಲಿಯಾಗುತ್ತಿವೆ ಎನ್ನುವುದು ವನ್ಯಜೀವಿ ತಜ್ಞರ ಅಭಿಪ್ರಾಯ.