Elephants Day 2024: ಆನೆಗಳಲ್ಲೂ ಉಂಟು ಎರಡು ಬಗೆ; ಆಫ್ರಿಕಾ ಆನೆಗೂ ಏಷಿಯಾದ ಆನೆಗಳಿಗೂ ಇರುವ ವ್ಯತ್ಯಾಸ ಏನು?-forest news world elephants day 2024 do you know the difference of asian elephants and african elephants ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Elephants Day 2024: ಆನೆಗಳಲ್ಲೂ ಉಂಟು ಎರಡು ಬಗೆ; ಆಫ್ರಿಕಾ ಆನೆಗೂ ಏಷಿಯಾದ ಆನೆಗಳಿಗೂ ಇರುವ ವ್ಯತ್ಯಾಸ ಏನು?

Elephants Day 2024: ಆನೆಗಳಲ್ಲೂ ಉಂಟು ಎರಡು ಬಗೆ; ಆಫ್ರಿಕಾ ಆನೆಗೂ ಏಷಿಯಾದ ಆನೆಗಳಿಗೂ ಇರುವ ವ್ಯತ್ಯಾಸ ಏನು?

Forest News ಆನೆಗಳನ್ನು ನೋಡಿದ್ದೇವೆ. ಅದರಲ್ಲೂ ಆಫ್ರಿಕಾ ಹಾಗೂ ಏಷಿಯಾದ ಆನೆಗಳ ಬಗ್ಗೆ ಗೊತ್ತೆ, ಈ ಆನೆಗಳ ವ್ಯತ್ಯಾಸ ಹೇಗೆ.. ಇಲ್ಲಿದೆ ವಿವರ.

ಆಫ್ರಿಕಾ ಹಾಗೂ ಏಷಿಯಾ ಆನೆಗಳು ವಿಭಿನ್ನವಾಗಿವೆ.
ಆಫ್ರಿಕಾ ಹಾಗೂ ಏಷಿಯಾ ಆನೆಗಳು ವಿಭಿನ್ನವಾಗಿವೆ.

ಆನೆ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಎತ್ತರದ ಪ್ರಾಣಿಗಳು, ಮೊರದಗಲದ ಕಿವಿ, ಸೊಂಡಿಲು ನೆನಪಾಗಿ ಬಿಡುತ್ತದೆ. ಆನೆ ಎಂದರೆ ಹೀಗೆ ಎನ್ನುವಷ್ಟರ ಮಟ್ಟಿಗೆ. ಆದರೆ ಆ ಆನೆಗಳಲ್ಲೂ ವಿಧಗಳಿವೆ. ಭಿನ್ನ ಆನೆಗಳ ಅರಣ್ಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿವೆ. ಅದರಲ್ಲಿ ಮುಖ್ಯವಾಗಿ ಏಷಿಯನ್‌ ಆನೆ. ಅದು ನಮ್ಮ ಊರುಗಳು ಇಲ್ಲವೇ ಅರಣ್ಯ, ಅರಣ್ಯದಂಚಿನಲ್ಲಿ ಕಾಣುವ ಕರಿಗಳು. ಇದು ಭಾರತ ಮಾತ್ರವಲ್ಲದೇ ಶ್ರೀಲಂಕಾ ಸಹಿತ ಏಷಿಯಾದ ಹಲವು ದೇಶಗಳಲ್ಲಿವೆ. ಇನ್ನೊಂದು ಆಫ್ರಿಕಾದ ಆನೆ. ಇದು ಆಫ್ರಿಕಾದ ಹಲವು ದೇಶಗಳ ಅರಣ್ಯ ವಾಸಿ. ನಮ್ಮಲ್ಲಿ ಈಗಲೂ ಆನೆ ಎಂದರೆ ಯಾವುದೇ ಫೋಟೋ/ ಬ್ಯಾನರ್‌ಗಳಲ್ಲಿ ಬಳಸುವುದು ಆಫ್ರಿಕಾ ಆನೆಯನ್ನೇ, ಕರ್ನಾಟಕ ಅರಣ್ಯ ಇಲಾಖೆಯೂ ಹೀಗೆಯೇ ಏಷಿಯನ್‌ ಆನೆ ಬಿಟ್ಟು ಆಫ್ರಿಕಾದ ಚಿತ್ರ ಹಾಕಿದ್ದೂ ಇದೆ. ಭಾರತದ ಅರಣ್ಯಗಳಲ್ಲಿ ಆಫ್ರಿಕಾ ಆನೆಗಳಿಲ್ಲ. ಆದರೆ ಕರ್ನಾಟಕದ ಮೈಸೂರು ಸಹಿತ ಹಲವು ಮೃಗಾಲಯಗಳಲ್ಲಿ ಮಾತ್ರ ಆಫ್ರಿಕಾ ಆನೆಗಳ ಪ್ರದರ್ಶನವಿದೆ.

ಆನೆಗಳ ಬಗೆ

ಆನೆಗಳಲ್ಲಿ ಕೇವಲ ಎರಡು ಜಾತಿಗಳಿವೆ ಎಂದು ಶಾಲಾ ದಿನಗಳಲ್ಲಿ ಹೇಳಿಕೊಟ್ಟ ನೆನಪು. ಅದು ಆಫ್ರಿಕನ್ ಆನೆ ಮತ್ತು ಏಷಿಯನ್‌ ಆನೆ. ಹಾಗೆದು ಎರಡೂ ಒಂದೇ ಅಲ್ಲ. ಎರಡೂ ಆನೆಗಳಲ್ಲೂ ಕೆಲವು ಸಾಮ್ಯತೆಗಳು ಇದ್ದರೂ ಭಿನ್ನತೆಗಳು ಹೆಚ್ಚಿವೆ.

ಎರಡೂವರೆ ದಶಕಗಳ ಹಿಂದೆ ವಿಜ್ಞಾನಿಗಳು ಆಫ್ರಿಕನ್ ಆನೆ ಜಾತಿಗಳನ್ನು ಎರಡು ವಿಭಿನ್ನ ಜಾತಿಗಳಾಗಿ ವಿಂಗಡಿಸಿದರು, ದೊಡ್ಡದು ಆಫ್ರಿಕನ್ ಬುಷ್ ಆನೆ (ಅಥವಾ ಆಫ್ರಿಕನ್ ಸವನ್ನಾ ಆನೆ) ಮತ್ತು ಚಿಕ್ಕದಾಗಿದೆ ಆಫ್ರಿಕನ್ ಅರಣ್ಯ ಆನೆ. ಅದೇ ರೀತಿ ಏಷಿಯನ್‌ ಆನೆಯಲ್ಲಿ ಇರುವುದು ಒಂದೇ ರೀತಿಯದ್ದು.

ಆನೆಗಳ ವ್ಯತ್ಯಾಸ ಹೀಗಿದೆ

ಆದರೆ ಏಷಿಯನ್‌ ಮತ್ತು ಆಫ್ರಿಕನ್ ಆನೆಗಳನ್ನು ಅವುಗಳ ಕಿವಿ, ತಲೆಯ ಆಕಾರ ಮತ್ತು ದಂತಗಳ ರೀತಿಯಿಂದಲೇ ಪ್ರತ್ಯೇಕಿಸಲಾಗುತ್ತದೆ. ಏಷ್ಯಾದ ಆನೆಗಳಿಂದ ಆಫ್ರಿಕನ್ ಆನೆಗಳನ್ನು ಪ್ರತ್ಯೇಕಿಸಲು ಸುಲಭವಾದ ಮಾರ್ಗವೆಂದರೆ ಕಿವಿಗಳ ವೀಕ್ಷಣೆ. ಆಫ್ರಿಕನ್ ಆನೆಗಳ ಕಿವಿಗಳು ದೊಡ್ಡದಾಗಿವೆ. ವಿಶಾಲವಾಗಿಯೂ ಇವೆ. ಆದರೆ ಏಷ್ಯಾದ ಆನೆಗಳ ಕಿವಿಗಳು ಚಿಕ್ಕದಾಗಿಯೂ ದುಂಡಗಿವೆ. ಇಲ್ಲಿಯೇ ಈ ಎರಡು ಆನೆಗಳು ಭಿನ್ನ ಎನ್ನುವುದು ಗೊತ್ತಾಗುತ್ತದೆ.

ಆಫ್ರಿಕನ್ ಆನೆಗಳು ಮತ್ತು ಏಷ್ಯನ್ ಆನೆಗಳ ತಲೆಯ ಆಕಾರದಲ್ಲಿ ಭಿನ್ನತೆಯಿದೆ. ಆಫ್ರಿಕನ್ ಆನೆಗಳ ತಲೆಗಳು ದುಂಡಾಕಾರ ಹೊಂದಿವೆ. ಅದೇ ಏಷ್ಯನ್ ಆನೆಗಳು ಅವಳಿ-ಗುಮ್ಮಟದ ತಲೆಯ ರೂಪ ಹೊಂದಿವೆ.

ಇನ್ನ ಎರಡು ಆನೆಗಳ ದಂತ ಶೈಲಿಯೂ ಭಿನ್ನವಾಗಿದೆ.. ಗಂಡು ಮತ್ತು ಹೆಣ್ಣು ಆಫ್ರಿಕನ್ ಆನೆಗಳೆರಡೂ ದಂತಗಳನ್ನು ಹೊಂದಿರುವುದು ಕಂಡು ಬರುತ್ತದೆ. ಅದೇ ಏಷಿಯಾ ಆನೆಗಳಲ್ಲಿ ಗಂಡು ಅಥವಾ ಸಲಗಗಳು ದಂತ ಹೊಂದಿರುತ್ತವೆ. ದಂತದಲ್ಲೂ ವ್ಯತ್ಯಾಸ ಇರುವುದನ್ನು ನೋಡಬಹುದು.

ಆಫ್ರಿಕ್‌ ಆನೆಯೇ ಬಲಭೀಮ

ಆನೆಗಳ ಭಾರ ಅಥವಾ ತೂಕವೂ ಭಿನ್ನವೇ. ಆಫ್ರಿಕನ್ ಸವನ್ನಾ ಆನೆಗಳು ಸುಮಾರು 8,000 ಕೆಜಿ (9 ಟನ್) ಮತ್ತು ಭುಜದ ಮೇಲೆ 3 ಮತ್ತು 4 ಮೀಟರ್ ಎತ್ತರ (10 ಮತ್ತು 13 ಅಡಿಗಳ ನಡುವೆ) ಇವೆ. ಆಫ್ರಿಕನ್ ಅರಣ್ಯದ ಆನೆಗಳು ತಮ್ಮ ಸವನ್ನಾ ಪ್ರತಿರೂಪಕ್ಕಿಂತ ಸ್ವಲ್ಪ ಚಿಕ್ಕದಾಗಿದೆ ಮತ್ತು ಏಷಿಯನ್‌ ಆನೆಗಳು 5,500 ಕೆಜಿ (ಸುಮಾರು 6 ಟನ್) ತೂಗುತ್ತವೆ ಮತ್ತು ಹೆಚ್ಚೆಂದರೆ, ಭುಜದ (11.5 ಅಡಿ) ಎತ್ತರದಲ್ಲಿ 3.5 ಮೀಟರ್ ಇರಬಹುದು.

ಚರ್ಮದ ರಚನೆ, ಕಾಲ್ಬೆರಳ ಉಗುರುಗಳ ಸಂಖ್ಯೆಯಲ್ಲೂ ಎರಡೂ ಆನೆಗಳಲ್ಲಿ ವ್ಯತ್ಯಾಸಗಳಿವೆ. ಏಷ್ಯಾದ ಆನೆಗಳ ಹೊರ ಚರ್ಮವು ನಯವಾದ ಮತ್ತು ಹೊಳಪುಳ್ಳದ್ದಾಗಿದೆ, ಅದೇ ಆಫ್ರಿಕನ್ ಆನೆಗಳು ಹೆಚ್ಚು ಸುಕ್ಕುಗಟ್ಟಿದಂತಿದ್ದು, ಬಿರುಕುಗಳಿಂದ ಕೂಡಿರುತ್ತವೆ.

ಸಾಮಾಜಿಕ ಭಾವನೆ ಮಾತ್ರ ಒಂದೇ

ಇಷ್ಟೆಲ್ಲಾ ದೈಹಿಕವಾಗಿ ವ್ಯತ್ಯಾಸವಿದ್ದರೂ ಸಾಮಾಜಿಕವಾಗಿ ಎರಡೂ ದೇಶದ ಆನೆಗಳು ಒಂದೇ ರೀತಿ. ಆನೆಗಳ ಹಿಂಡುಗಳು ಮಾತೃಪ್ರಧಾನವಾಗಿದ್ದು, ಅತ್ಯಂತ ಹಿರಿಯ ಹೆಣ್ಣು ಆನೆ ಗುಂಪನ್ನು ಮುನ್ನಡೆಸುತ್ತದೆ. ಈ ಗುಂಪಿನಲ್ಲಿ ಹೆಣ್ಣು, ಗಂಡು, ಹರೆಯದ, ಮರಿ ಆನೆಗಳು ಇರುತ್ತವೆ. ಕೆಲವೊಂದು ವಯಸ್ಸಾದ ಗಂಡಾನೆ ಅಥವಾ ಸಲಗಗಳು ಪ್ರತ್ಯೇಕವಾಗಿ ಇರುವುದೂ ಇದೆ.