ಕನ್ನಡ ಸುದ್ದಿ  /  Karnataka  /  Foundation Day Celebration: Svym Foundation Day; Organization Of Blood Donation Camp By Social Organization

Foundation day celebration: ಎಸ್‌ವಿವೈಎಮ್ ಸಂಸ್ಥಾಪನಾ ದಿನಾಚರಣೆ; ಸಮಾಜಮುಖಿ ಸಂಸ್ಥೆಯಿಂದ ರಕ್ತದಾನ ಶಿಬಿರ ಆಯೋಜನೆ

Foundation day celebration: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ 39ನೇ ‍ವರ್ಷದ ಸಂಸ್ಥಾಪನಾ ದಿನ ಗುರುವಾರ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವ ಏಡ್ಸ್‌ ದಿನ ನಿಮಿತ್ತ ಜಾಗೃತಿ ಮತ್ತು ರಕ್ತದಾನ ಶಿಬಿರವನ್ನೂ ಸಂಸ್ಥೆ ಆಯೋಜಿಸಿತ್ತು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ 39ನೇ ‍ವರ್ಷದ ಸಂಸ್ಥಾಪನಾ ದಿನ ಗುರುವಾರ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವ ಏಡ್ಸ್‌ ದಿನ ನಿಮಿತ್ತ ಜಾಗೃತಿ ಮತ್ತು ರಕ್ತದಾನ ಶಿಬಿರವನ್ನೂ ಸಂಸ್ಥೆ ಆಯೋಜಿಸಿತ್ತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ 39ನೇ ‍ವರ್ಷದ ಸಂಸ್ಥಾಪನಾ ದಿನ ಗುರುವಾರ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವ ಏಡ್ಸ್‌ ದಿನ ನಿಮಿತ್ತ ಜಾಗೃತಿ ಮತ್ತು ರಕ್ತದಾನ ಶಿಬಿರವನ್ನೂ ಸಂಸ್ಥೆ ಆಯೋಜಿಸಿತ್ತು.

ಧಾರವಾಡ: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಗೆ ಗುರುವಾರ 39ನೇ ವರ್ಷದ ಸಂಸ್ಥಾಪನಾ ದಿನ. ಡಿಸೆಂಬರ್‌ 1 ಆದ ಕಾರಣ ವಿಶ್ವ ಏಡ್ಸ್‌ ದಿನ ಕೂಡ. ಈ ಎರಡೂ ಆಚರಣೆಗಳನ್ನು ಒಗ್ಗೂಡಿಸಿದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌, ಹುಬ್ಬಳ್ಳಿಯ ಕಿಮ್ಸ್‌ ರಕ್ತ ನಿಧಿ, ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ರೋಟರಿ ಕ್ಲಬ್‌ ಆಫ್‌ ಧಾರವಾಡ ಪ್ರೈಮ್‌, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ಕರ್ನಾಟಕ ವಿವಿಯ ಎನ್‌ಎಸ್‌ಎಸ್‌ ಘಟಕ, ಧಾರವಾಡದ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ಘಟಕಗಳ ಸಹಯೋಗದಲ್ಲಿ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಪಿ.ಎಸ್ ಅಂಕಲಿ ಹಾಗೂ ಶ್ರೀ ರಾಮು ಕಲ್ಲೂರ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಡಾ.ಮಹೇಶ ದೇಸಾಯಿ, ನರ‍್ದೇಶಕರು ಡಿಮ್ಹಾನ್ಸ, ಧಾರವಾಡ ಇವರು ರಕ್ತದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಶೋಕ ಕೋರಿ, ಪ್ರಶಾಂತ ಪಾಟೀಲ ಹಾಗೂ ಬಸವರಾಜ ನಿಡಗುಂದಿ ಇವರು ಉಪಸ್ಥಿತರಿದ್ದರು.

ಧಾರವಾಡದ ಸಿವಿಲ್‌ ಹಾಸ್ಪಿಟಲ್‌ನ ಡಾ.ಪ್ರಭು, ರಕ್ತದಾನದ ಮಹತ್ವವನ್ನು ಮತ್ತು ರಕ್ತದಾನದ ಪ್ರಕ್ರಿಯೆಯನ್ನು ತಿಳಿಸಿದರು.

ಧಾರವಾಡದ ಕೆಎಂಎಫ್‌ ಅಧ್ಯಕ್ಷ ಶಂಕರ ಮುಗದ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುವ ಮೂಲಕ ರಕತದಾನ ಮಾಡುವಲ್ಲಿ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು. ‌

ರೋಟರಿ ಕ್ಲಬ್‌ ಆಫ್‌ ಧಾರವಾಡ ಪ್ರೈಮ್‌ನ ಡಾ.ಕವನ ದೇಶಪಾಂಡೆ, ನಿರಂತರ ರಕ್ತದಾನದಿಂದ ವೈಯಕ್ತಿಕವಾಗಿ ಆಗುವಂತಹ ಉಪಯುಕ್ತತೆಯನ್ನು ತನ್ಮೂಲಕ ಜೀವಗಳನ್ನು ಉಳಿಸುವ ಬಗ್ಗೆ ತಿಳಿಸಿದರು.

ಕ.ವಿ.ವಿ ಧಾರವಾಡದ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ ದಳಪತಿ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶಗಳನ್ನು ತಿಳಿಸಿದರು.

ಧಾರವಾಡ ಎಸ್‌ವಿವೈಮ್‌ನ ನಿರ್ವಹಣಾ ಸಮಿತಿ ಸದಸ್ಯ ಡಾ. ವಿ.ಎಮ್ ದೇಶಪಾಂಡೆ, ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ತಿಳಿಸುವುದರ ಜತೆಗೆ ಸಂಸ್ಥೆಯು 39ನೇ ಸಂವತ್ಸರಕ್ಕೆ ಕಾಲಿಟ್ಟಿದ್ದು ಸಂಸ್ಥೆಯ ಪ್ರಗತಿಯ ದಾರಿಯ ಪ್ರತೀಕ ಎಂದು ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಒಟ್ಟು 67 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಕಾರ್ಯಕ್ರಮದ ಶುರುವಿನಲ್ಲಿ ಕಾಶಿನಾಥ ಹಂದ್ರಾಳ ಪ್ರಾರ್ಥಿಸಿದರು.

ಗಮನಿಸಬಹುದಾದ ವಿಚಾರಗಳು

ವೈಚಾರಿಕತೆಗೆ ಇಂಬುಕೊಟ್ಟ ಶೈಕ್ಷಣಿಕ ಕ್ಷೇತ್ರ ಪ್ರವಾಸ; ಧಾರವಾಡ SDMCETಗೆ ವಿದ್ಯಾರ್ಥಿನಿಯರ ಭೇಟಿ

Field trip for high school students: ಶಾಲಾ ಶಿಕ್ಷಣ ಕಾರ್ಯಕ್ರಮದ ನಿಮಿತ್ತ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ತಂಡ ಕಲಘಟಗಿ ತಾಲೂಕು ಮತ್ತು ಧಾರವಾಡ ತಾಲೂಕುಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡಿಸಿತು. ಇದರ ಸಚಿತ್ರ ವರದಿಗೆ ಇಲ್ಲಿ ಕ್ಲಿಕ್ಕಿಸಿ

December Rashifal 2022: ಈ ತಿಂಗಳು ಯಾವ ರಾಶಿಯವರಿಗೆ ಹೆಚ್ಚು ಲಾಭ, ಯಾರಿಗೆ ಹೆಚ್ಚು ನಷ್ಟ

December Rashifal 2022: ಡಿಸೆಂಬರ್ ತಿಂಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ಸಾಬೀತುಪಡಿಸುತ್ತದೆ. ಈ ತಿಂಗಳು ಯಾವ ರಾಶಿಯವರಿಗೆ ಹೆಚ್ಚು ಲಾಭ, ಯಾರಿಗೆ ಹೆಚ್ಚು ನಷ್ಟ- ರಾಶಿಫಲ ಹೇಳುವುದೇನು? ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

December born characteristics: ಡಿಸೆಂಬರ್‌ನಲ್ಲಿ ಜನಿಸಿದವರು ಅದೃಷ್ಟವಂತರು! ಯಾಕೆ ಹೀಗಂತಾರೆ?

December born characteristics: ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳು ಡಿಸೆಂಬರ್‌. ಈ ತಿಂಗಳು ಜನಿಸಿದವರೇಕೆ ಅದೃಷ್ಟವಂತರು? ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಅವರ ಗುಣಲಕ್ಷಣಗಳೇನು? ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point