Gadag Accident: ಗದಗ ಬಳಿ ಟಾಟಾ ಸೂಮೋ ಸಾರಿಗೆ ಬಸ್‌ ಡಿಕ್ಕಿ: ಮಠಕ್ಕೆ ಹೊರಟ ಎರಡು ಕುಟುಂಬದ ಆರು ಮಂದಿ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  Gadag Accident: ಗದಗ ಬಳಿ ಟಾಟಾ ಸೂಮೋ ಸಾರಿಗೆ ಬಸ್‌ ಡಿಕ್ಕಿ: ಮಠಕ್ಕೆ ಹೊರಟ ಎರಡು ಕುಟುಂಬದ ಆರು ಮಂದಿ ದುರ್ಮರಣ

Gadag Accident: ಗದಗ ಬಳಿ ಟಾಟಾ ಸೂಮೋ ಸಾರಿಗೆ ಬಸ್‌ ಡಿಕ್ಕಿ: ಮಠಕ್ಕೆ ಹೊರಟ ಎರಡು ಕುಟುಂಬದ ಆರು ಮಂದಿ ದುರ್ಮರಣ

Gadag Accident ಗದಗ ಜಿಲ್ಲೆ(Gadag) ಗಜೇಂದ್ರಗಡ ತಾಲ್ಲೂಕಿನ ನರೇಗಲ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ( Road accident) ಆರು ಮಂದಿ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆ ನರೇಗಲ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ನರೇಗಲ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಗದಗ: ಅವರು ದೂರದಿಂದ ತಮ್ಮ ಗುರುಗಳನ್ನು ನೋಡಲು ಬರುತ್ತಿದ್ದರು. ಇನ್ನೇನು ಮಠ ತಲುಪಬೇಕು ಎನ್ನುವ ಸಂತಸದಲ್ಲಿದ್ದರು. ಅದಕ್ಕೂ ಮೊದಲು ಸಂಭವಿಸಿದ ಭೀಕರ ಅಪಘಾತದಲ್ಲಿ ಎಲ್ಲರೂ ಪ್ರಾಣ ಕಳೆದುಕೊಂಡರು.

ಇದು ನಡೆದಿದ್ದು ಗದಗ ಜಿಲ್ಲೆಯ ನರೇಗಲ್‌ ಪಟ್ಟಣದಲ್ಲಿ. ಮೃತಪಟ್ಟವರು ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಪ್ರತಿಷ್ಠಿತ ಕಲಶೆಟ್ಟಿ ಕುಟುಂಬದವರು. ಅವರೊಂದಿಗೆ ಇನ್ನೊಂದು ಕುಟುಂಬವೂ ಜತೆಗಿತ್ತು. ಘಟನೆಯಲ್ಲಿ ಐದು ವರ್ಷದ ಬಾಲಕನೂ ಸೇರಿ ಆರು ಮಂದಿ ಮೃತಪಟ್ಟಿದ್ಧಾರೆ. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ.

ಅಫಜಲಪುರ ಪಟ್ಟಣದಿಂದ ಸೋಮವಾರ ಬೆಳಗಿನ ಜಾವ ಹೊರಟು ಅವರು ಮಧ್ಯಾಹ್ನದ ಹೊತ್ತಿಗೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿರುವ ಪುರಾತನ ದಿಂಗಾಲೇಶ್ವರ ಮಠಕ್ಕೆ ತೆರಳಬೇಕಿತ್ತು. ಮೊದಲಿನಿಂದಲೂ ಕಲಶೆಟ್ಟರ ಕುಟುಂಬಕ್ಕೆ ಮಠದ ಬಗ್ಗೆ ಭಾರೀ ಅಭಿಮಾನ ಇದ್ದುದರಿಂದ ಆಗಾಗ ಭೇಟಿ ಮಾಡುವುದು ನಡದೇ ಇತ್ತು. ಅದೇ ಕಾರಣದಿಂದ ಅವರ ಮಗನಿಗೂ ದಿಂಗಾಲೇಶ ಎಂದೇ ಹೆಸರಿಟ್ಟಿದ್ದರು. ಶಿವಕುಮಾರ್ ಕಲಶೆಟ್ಟಿ ಅವರೇ ಟಾಟಾ ಸೂಮೋ ಓಡಿಸಿಕೊಂಡು ಬರುತ್ತಿದ್ದರು ಬೆಳಗ್ಗೆ11ಕ್ಕೆ ಗದಗ ಜಿಲ್ಲೆ ನರೇಗಲ್‌ ಪಟ್ಟಣ ತಲುಪಿದಾಗ ಎದುರಿನಿಂದ ಬಂದ ಸಾರಿಗೆ ಬಸ್‌ಗೆ ಡಿಕ್ಕಿಯಾಗಿದ್ದು. ಈ ವೇಳೆ ಶಿವಕುಮಾರ್‌, ಅವರ ಪತ್ನಿ ಚಂದ್ರಕಲಾ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ದಿಂಗಾಲೇಶ ಕಲಶೆಟ್ಟಿ ಸೇರಿದಂತೆ ಮೂವರು ಮಕ್ಕಳನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ದಿಂಗಾಲೇಶ ಕೂಡ ಮೃತಪಟ್ಟಿದ್ದಾನೆ.

ಈ ಕುರಿತು ನರೇಗಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸ್‌ ಹಾಗೂ ಟಾಟಾಸುಮೋ ವಶಕ್ಕೆ ಪಡೆಯಲಾಗಿದೆ.

ಗದಗ ಎಸ್ಪಿ ಬಿ.ಎಸ್‌.ನೇಮಗೌಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ದಿಂಗಾಲೇಶ್ವರ ಮಠದ ಸ್ವಾಮೀಜಿಗಳೂ ಕೂಡ ಆಸ್ಪತ್ರಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.