ಕನ್ನಡ ಸುದ್ದಿ  /  Karnataka  /  Gateway Of Opportunity For Second Puc Science Students Through Cet Examination

CET Examination: ಸಿಇಟಿ-ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶದ ಹೆಬ್ಬಾಗಿಲು: ಗೆಲ್ಲು ಬಾ ನೀ ಮುಗಿಲು

ಸಿಇಟಿ ಎಂದರೆ ಕೇವಲ ಕರ್ನಾಟಕ ರಾಜ್ಯದ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಪಡೆಯಲು ಎದುರಿಸಬೇಕಿರುವ ಪರೀಕ್ಷೆ ಎಂದೇ ಬಿಂಬಿತವಾಗಿದೆ. ಸಿಇಟಿ ಹಲವು ಪದವಿ ಕೋರ್ಸುಗಳಿಗೆ ಅವಕಾಶ ಕಲ್ಪಿಸುವ ಏಕೈಕ ಸ್ಪರ್ಧಾತ್ಮಕ ಪರೀಕ್ಷೆ. ಈ ಕುರಿತು ತುಮಕೂರಿನ ಪ್ರಣವಸ್ಯ ಅಕಾಡೆಮಿಯ ಕಾರ್ಯನಿರ್ವಾಹಕ ಅಧಿಕಾರಿ ನಾಗೇಂದ್ರ ಟಿ.ಸಿ ಅವರು, ಅತ್ಯಂತ ಉಪಯುಕ್ತ ಮಾಹಿತಿ ಒದಗಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಯೂ ಜೆಇಇ(ಐಐಟಿ ಮತ್ತು ಎನ್‌ಇಟಿ) ಹಾಗೂ ನೀಟ್ ಬಗ್ಗೆ ಕನಸು ಕಾಣುವುದು ಸಹಜ. ಆದರೆ ಎಲ್ಲರೂ ಈ ಪರೀಕ್ಷೆಗಳನ್ನು ಪಾಸ್‌ ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಪ್ರೌಢಶಾಲಾ ಹಂತದಿಂದಲೇ ಅತ್ಯಂತ ಪರಿಶ್ರಮದಿಂದ ವ್ಯಾಸಂಗ ಮಾಡಿದ ಹಾಗೂ ಅದಕ್ಕೆ ಬೆಂಬಲ ನೀಡಿದ ದೂರದೃಷ್ಟಿಯುಳ್ಳ ಪೋಷಕರ ಮನೆಗಳಲ್ಲಿ ಮಾತ್ರ ನಾವು ಅಂತಹ ಫಲಿತಾಂಶ ಕಾಣುವುದು ಸಾಧ್ಯ.

ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅದರಲ್ಲೂ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಈ ಅವಕಾಶಗಳ ಬಗ್ಗೆ ಅತ್ಯಂತ ಕಡಿಮೆ ಮಾಹಿತಿಯಿರುತ್ತದೆ. ಇದರೊಂದಿಗೆ ಆರ್ಥಿಕ ಹಿಂಜರಿತವೂ ಒಂದು ಕೊರತೆಯಾಗಿ ಕಾಡುತ್ತದೆ. ಹೀಗಾಗಿ ನಮ್ಮ ಬಹುತೇಕ ವಿದ್ಯಾರ್ಥಿಗಳಿಗೆ ಉಳಿದಿರುವ ಅತ್ಯಂತ ಸಮಂಜಸ ಆಯ್ಕೆ ಸಿಇಟಿ.

ಈ ಪರೀಕ್ಷೆಯ ಬಗ್ಗೆಯೂ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅತ್ಯಂತ ಕಡಿಮೆ ಮಾಹಿತಿ ಇದೆ. ಸಿಇಟಿ ಎಂದರೆ ಕೇವಲ ಕರ್ನಾಟಕ ರಾಜ್ಯದ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಪಡೆಯಲು ಎದುರಿಸಬೇಕಿರುವ ಪರೀಕ್ಷೆ ಎಂದೇ ಬಿಂಬಿತವಾಗಿದೆ. ಸಿಇಟಿ ಹಲವು ಪದವಿ ಕೋರ್ಸುಗಳಿಗೆ ಅವಕಾಶ ಕಲ್ಪಿಸುವ ಏಕೈಕ ಸ್ಪರ್ಧಾತ್ಮಕ ಪರೀಕ್ಷೆ.

ಈ ಪರೀಕ್ಷೆಯಲ್ಲಿ ಪಡೆಯುವ ರ‍್ಯಾಂಕ್ ಮೂಲಕ ವಿದ್ಯಾರ್ಥಿಗಳು ಇಂಜಿಯರಿಂಗ್ ಮಾತ್ರವಲ್ಲದೇ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ(ವೈದ್ಯಕೀಯ ಶಾಸ್ತçದ ಮತ್ತೊಂದು ವಿಭಾಗ), ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನ ಪದವಿಗಳು (ವೆರ್ಟನರಿ, ಅಗ್ರಿಕಲ್ಚರ್, ಹಾರ್ಟಿಕಲ್ಚರ್, ಸೆರಿಕಲ್ಚರ್, ಫಾರೆಸ್ಟಿç, ಫಿಷರಿ, ಡೈರಿ ಟೆಕ್ನಾಲಜಿ, ಫುಡ್ ಟೆಕ್ನಾಲಜಿ, ಹೋಮ್ ಸೈನ್ಸ್ / ಕಮ್ಯನಿಟಿ ಸೈನ್ಸ್, ಅಗ್ರಿಕಲ್ಚರ್ ಬಿಟೆಕ್ ಹಾಗೂ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ), ಬಿ ಫಾರ್ಮಸಿ ಮತ್ತು ಆರ್ಕಿಟೆಕ್ಚರ್ ಪದವಿಗಳಿಗೆ ಅವಕಾಶ ಪಡೆಯಬಹುದು.

ಸಿಇಟಿ ರ‍್ಯಾಂಕ್ ಮೂಲಕ ಬಿಫಾರ್ಮಸಿ ಪದವಿಗೆ ಪ್ರವೇಶ ಬಯಸುವ ಮೂಲಕ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆ, ಫಾರ್ಮಾಸ್ಯುಟಿಕಲ್ಸ್, ಫಾರ್ಮಕಾಲಜಿ, ಫಾರ್ಮಸ್ಯುಟಿಕಲ್ ಕೆಮಿಸ್ಟಿ ವಿಭಾಗಳಲ್ಲಿ ಅಧ್ಯಯನ ಮಾಡುವ ಅವಕಾಶ ಪಡೆಯಬಹುದು. ಬಿ-ಆರ್ಕ್ ಪದವಿಗೆ ಪ್ರವೇಶ ಬಯಸುವವರು ಸಿಇಟಿ ಪರೀಕ್ಷೆಯ ಜೊತೆಗೆ ನಾಟಾ ಪರೀಕ್ಷೆಯನ್ನೂ ಸಹ ಎದುರಿಸಬೇಕಾಗುತ್ತದೆ.

ನೀಟ್ ಪರೀಕ್ಷೆಯಲ್ಲಿ ಯಶಸ್ಸು ಕಾಣದೆ ವೈದೈಕೀಯ ಪದವಿ ಅವಕಾಶದಿಂದ ವಂಚಿತರಾಗುವ ವಿದ್ಯಾರ್ಥಿಗಳು, ಸಿಇಟಿ ಮೂಲಕ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಪದವಿಗೆ ಅವಕಾಶ ಪಡೆದು ವೈದ್ಯಕೀಯ ಕ್ಷೇತ್ರ ಪ್ರವೇಶಿಸಬಹುದು. ಕರ್ನಾಟಕ ರಾಜ್ಯದ ಕೃಷಿ ಆಧಾರಿತ ಕುಟುಂಬ ಹಾಗೂ ಕೃಷಿ ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಿಇಟಿನಲ್ಲಿ ಮತ್ತೊಂದು ವಿಶೇಷ ಪರೀಕ್ಷೆಗೆ(ಸಿಇಟಿ ಪ್ರಾಯೋಗಿಕ) ಹಾಜರಾಗಬಹುದು. 50 ಪ್ರಶ್ನೆಗಳ 200 ಅಂಕಗಳ ಈ ಪರೀಕ್ಷೆಯ(ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾದರಿಗಳನ್ನು ಗುರುತಿಸುವ ಪರೀಕ್ಷೆ) ಬಗ್ಗೆ ಬಹುತೇಕ ಗ್ರಾಮಾಂತರ ಪ್ರದೇಶದ ಕೃಷಿ ಆಧಾರಿತ ಕುಟುಂಬದ ವಿದ್ಯಾರ್ಥಿಗಳಿಗೆ ಮಾಹಿತಿಯೇ ಇಲ್ಲದೆ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಸಿಇಟಿ ಪರೀಕ್ಷೆಗೆ ಹಾಜರಾಗಲು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಜಾರಿಯಾಗಿದ್ದು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಭರ್ತಿ ಮಾಡಬೇಕಿದೆ. ಕೃಷಿ ಕೋಟಾ ಅಡಿಯಲ್ಲಿ ಮೀಸಲಾತಿ ಪಡೆಯಲು ನೀವು ಅರ್ಹರಾಗಿದ್ದೀರಾ ಎಂಬಲ್ಲಿ ಹೌದು ಎಂದು ನಮೂದಿಸಬೇಕು. ಇನ್ನೂ ಅಪ್ಲಿಕೇಷನ್ ಭರ್ತಿ ಮಾಡದವವರಿಗೆ ಏಪ್ರಿಲ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅಪ್ಲಿಕೇಶನ್ ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಈ ಕೆಳಕಂಡ ಮಾಹಿತಿಗಳ ಅವಶ್ಯಕತೆಯಿರುತ್ತದೆ.

1. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರಿಜಿಸ್ಟ್ರೇಷನ್ ಸಂಖ್ಯೆ

2. ಜಾತಿ ಮತ್ತು ಇತರ ಮೀಸಲಾತಿ (ವರ್ಗ, ಆದಾಯ, ನಾನ್ ಕ್ರೀಮಿ ಲೇಯರ್, ಹೈದರಾಬಾದ್ ಕರ್ನಾಟಕ ಪ್ರಾದೇಶಿಕತೆ) ಸರ್ಟಿಫಿಕೇಟುಗಳ ಆರ್‌ಡಿ ಸಂಖ್ಯೆ

3. ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು

4. ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ

5. ಅಭ್ಯರ್ಥಿಯ ಸಹಿ

6. ಅಭ್ಯರ್ಥಿಯ ಎಡಗೈ ಹೆಬ್ಬೆಟ್ಟಿನ ಗುರುತು

ಈ ಪರೀಕ್ಷೆಯಲ್ಲಿ ಕ್ರೀಡಾ ಪಟುಗಳಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಾಧಕರಿಗೆ, ಸೇನೆಯಲ್ಲಿರುವ ಅಥವಾ ಮಾಜಿ ಸೈನಿಕರ ಮಕ್ಕಳಿಗೆ, ದೈಹಿಕ ಅಂಗವಿಕಲರಿಗೆ, ಕೇಂದ್ರ ಸಶಸ್ತ್ರ ಪೋಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ/ಮಾಜಿ ನೌಕರರ ಮಕ್ಕಳಿಗೆ ವಿಶೇಷ ಮೀಸಲಾತಿಯಿದೆ.

ಸಿಇಟಿ ಪರೀಕ್ಷೆ ಬೌತಶಾಸ್ರ್ರ ರಸಾಯನಶಾಸ್ತ್ರ ಗಣಿತ ಮತ್ತು ಜೀವಶಾಸ್ತ್ರದ ನಾಲ್ಕು ಪೇಪರ್‌ಗಳಿದ್ದು ತಲಾ 60 ಅಂಕಗಳಿಗೆ ಸೀಮಿತವಾಗಿರುತ್ತದೆ. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ. ಬಹುಆಯ್ಕೆ ಮಾದರಿಯ ಈ ಪರೀಕ್ಷೆಯಲ್ಲಿ ಪ್ರಶ್ನೆಗಳು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡೂ ಪಠ್ಯಕ್ರಮಗಳಿಂದ ಪರಿಗಣಿಸಲಾಗುತ್ತದೆ.

ಅತ್ಯಂತ ಉಪಯುಕ್ತವಾದ ಸಿಇಟಿ ಪರೀಕ್ಷೆಯನ್ನು ಕಡೆಗಣಿಸದೆ ಸೂಕ್ತ ಸಮಯದಲ್ಲಿ ಅರ್ಜಿ ಸಲ್ಲಿಸಿ ಉತ್ತಮ ಪದವಿ ಅವಕಾಶಗಳಿಸಲು ಪ್ರಶ್ನೆಗಳಿದ್ದಲ್ಲಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ.

ನಾಗೇದ್ರ ಟಿ.ಸಿ

ಕಾರ್ಯನಿರ್ವಾಹಕ ಅಧಿಕಾರಿ

ಪ್ರಣವಸ್ಯ ಅಕಾಡೆಮಿ. ತುಮಕೂರು

9483846333

ವರದಿ: ನಾಗೇಂದ್ರ ಟಿ.ಸಿ

IPL_Entry_Point

ವಿಭಾಗ