Ballari Power Cut: ಬಳ್ಳಾರಿ ಜಿಲ್ಲೆಯ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್‌ ನಿಲುಗಡೆ; ಕರೆಂಟ್‌ ಎಲ್ಲೆಲ್ಲಿ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Ballari Power Cut: ಬಳ್ಳಾರಿ ಜಿಲ್ಲೆಯ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್‌ ನಿಲುಗಡೆ; ಕರೆಂಟ್‌ ಎಲ್ಲೆಲ್ಲಿ ಇರೋಲ್ಲ

Ballari Power Cut: ಬಳ್ಳಾರಿ ಜಿಲ್ಲೆಯ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್‌ ನಿಲುಗಡೆ; ಕರೆಂಟ್‌ ಎಲ್ಲೆಲ್ಲಿ ಇರೋಲ್ಲ

ಬಳ್ಳಾರಿ ನಗರ, ಗ್ರಾಮೀಣ ಪ್ರದೇಶದ ಜತೆಗೆ ಕುರಗೋಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಬಳ್ಳಾರಿ ನಗರ, ಗ್ರಾಮಾಂತರ ಭಾಗ ಹಾಗೂ ಕುರುಗೋಡು ತಾಲ್ಲೂಕಿನಲ್ಲಿ ಶುಕ್ರವಾರ ವಿದ್ಯುತ್‌ ವ್ಯತ್ಯಯವಾಗಲಿದೆ.
ಬಳ್ಳಾರಿ ನಗರ, ಗ್ರಾಮಾಂತರ ಭಾಗ ಹಾಗೂ ಕುರುಗೋಡು ತಾಲ್ಲೂಕಿನಲ್ಲಿ ಶುಕ್ರವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

ಬಳ್ಳಾರಿ: ಬಳ್ಳಾರಿ ನಗರ, ಗ್ರಾಮಾಂತರ ಪ್ರದೇಶಗಳು, ಕುರಗೋಡು ತಾಲ್ಲೂಕಿನ ಹಲವು ಭಾಗಗಳಲ್ಲಿ2025 ರ ಜನವರಿ 03 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯ ವರೆಗೆ ವಿದ್ಯುತ್‌ ನಿಲುಗಡೆಯಾಗಲಿದೆ ಎಂದು ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪೆನಿ ತಿಳಿಸಿದೆ. ಬಳ್ಳಾರಿ-ರೂಪನಗುಡಿ (ಧನಲಕ್ಷ್ಮಿ ಕ್ಯಾಂಪ್ ಹತ್ತಿರವರೆಗೂ) ರಸ್ತೆ ಆಗಲೀಕರಣ ಕಾಮಗಾರಿ ಪ್ರಾರಂಭವಾಗಿರುವುದರಿಂದ ರಸ್ತೆಯಲ್ಲಿ ಬರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶುಕ್ರವಾರ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ವಿದ್ಯುತ್‌ವಾಗುವ ಪ್ರದೇಶಗಳು

ಎಫ್-52 ಶಂಕರಬಂಡೆ ಐಪಿ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನ ಬೂದಿಹಾಳ್, ಬೆಂಚಿ ಕೊಟ್ಟಾಲ್, ಕಮ್ಮರಚೇಡು ಕೃಷಿ ಪ್ರದೇಶಗಳು. ಎಫ್-53 ಶಂಕರಬಂಡೆ ಎನ್.ಜೆ.ವೈ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್ ಮಿಂಚೇರಿ, ಬರ‍್ರನಾಯಕನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುರುಗೋಡು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಕುರುಗೋಡು ಜೆಸ್ಕಾಂ ವ್ಯಾಪ್ತಿಯ ಬಾದನಹಟ್ಟಿ ಶಾಲೆಯ ಮೇಲೆ ಹಾದು ಹೋಗುವ ಅಪಾಯಕಾರಿ 110ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ 110/33/11 ಕೆವಿ ಕುರುಗೊಡು ಉಪ-ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ವಿವಿಧ 11ಕೆ.ವಿ ಮಾರ್ಗಗಳಲ್ಲಿ ಜ.03 ರಂದು ಬೆಳಿಗ್ಗೆ 07 ಗಂಟೆಯಿAದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಎಫ್-1 ಕುರುಗೋಡು ಅರ್ಬನ್ ಮಾರ್ಗದ ಉಜ್ಜಲ್‌ಪೇಟೆ, ನೀಲಮ್ಮನ ಮಠ, ಸುಣ್ಣದ ಬಟ್ಟಿ, ಇಂದಿರಾನಗರ, ಬಳ್ಳಾರಿ ರಸ್ತೆ, ಸೂರ್ಯ ನಾರಾಯಣ ರೆಡ್ಡಿ ಕಾಲೋನಿ, ಬಾದನಹಟ್ಟಿ ರಸ್ತೆ, ಹರಿಕೃಪಾ ಕಾಲೋನಿ, ಸದಾಶಿವ ನಗರ, ಗೌಡರ ಓಣಿ. ಎಫ್-2 ಗೆಣಿಕೆಹಾಳ್ ಐಪಿ ಫೀಡರ್ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಬಸವಪುರ, ಅನ್ನಪೂರ್ಣೇಶ್ವರಿ ಕ್ಯಾಂಪ್, ವದ್ದಟ್ಟಿ ಕ್ರಾಸ್ ಗ್ರಾಮಗಳು.

ಎಫ್-3 ಕಲ್ಲುಕಂಬ ಐಪಿ ಫೀಡರ್ ಮಾರ್ಗದ ಯಲ್ಲಾಪುರ ಕ್ರಾಸ್, ಮಾರುತಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಲಕ್ಷಿö್ಮÃಪುರ, ಕಲ್ಲುಕಂಭ, ಕೆರೆಕೆರೆ, ಮುಷ್ಟಗಟ್ಟ ಗ್ರಾಮಗಳು. ಎಫ್-4 ಹೆಚ್.ವೀರಾಪುರ ಎನ್.ಜೆ.ವೈ ಮಾರ್ಗದ ಹೆಚ್.ವೀರಾಪುರ, ಸೋಮಲಾಪುರ ಕ್ರಾಸ್, ಮಾರುತಿ ಕ್ಯಾಂಪ್, ಹೊಸ ಯಲ್ಲಾಪುರ, ಹಳೇ ಯಲ್ಲಾಪುರ, ಶ್ರೀನಿವಾಸ್ ಕ್ಯಾಂಪ್, ಲಕ್ಷಿö್ಮÃಪುರ, ಕಲ್ಲುಕಂಬ, ಚಿಟಿಗಿನಹಾಳ್, ಅರ್ಜುನ್ ಕ್ಯಾಂಪ್, ಮಠದ ಕ್ಯಾಂಪ್, ಕೆರೆಕೆರೆ ಗ್ರಾಮಗಳು.

ಎಫ್-5 ಸಿಂಧಿಗೇರಿ ಕೃಷಿ ಮಾರ್ಗದ ಬೈಲೂರು, ಮಲ್ಲೇಶ್ವರ ಕ್ಯಾಂಪ್, ಗೋಪಾಲಪುರ ಕ್ಯಾಂಪ್, ಗೂಳೆಪ್ಪ ಮಠ. ಎಫ್-6 ಪಟ್ಟಣ ಸೆರಗು ಐಪಿ ಫೀಡರ್ ಮಾರ್ಗದ ಮಾರುತಿ ಕ್ಯಾಂಪ್, ಕುರುಗೋಡು, ಯಲ್ಲಾಪುರ ಕ್ರಾಸ್, ಪಟ್ಟಣ ಸೆರಗು, ಗುತ್ತಿಗನೂರು, ರ‍್ವಾಯಿ. ಎಫ್-7 ಬಾದನಹಟ್ಟಿ ಕೃಷಿ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ರ‍್ರಂಗಳಿ, ಸಿಂಧಿಗೇರಿ, ರ‍್ರಿಂಗಳಿ, ಮಾರುತಿ ಕ್ಯಾಂಪ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್.

ಎಫ್-8 ಎಲ್.ಐ.ಎಸ್ ಎನ್.ಜೆ.ವೈ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ, ಕ್ಯಾದಿಗೆ ಹಾಳ್ ಕ್ರಾಸ್, ಗುಳೆಪ್ಪ ಮಠ. ಎಫ್-9 ಬಾದನಹಟ್ಟಿ ಎನ್.ಜೆ.ವೈ ಮಾರ್ಗದ ಬಾದನಹಟ್ಟಿ, ವದ್ದಟ್ಟಿ ಕ್ರಾಸ್, ಗಂಗಾಭವಾನಿ ಕ್ಯಾಂಪ್, ಸಪ್ತಗಿರಿ ಕ್ಯಾಂಪ್, ರ‍್ರಂಗಳಿ, ಕೃಷ್ಣನಗರ ಕ್ಯಾಂಪ್, ರಾಮಬಾಬು ಕ್ಯಾಂಪ್, ಅನ್ನಪೂರ್ಣೇಶ್ವರಿ ಕ್ಯಾಂಪ್, ರ‍್ರಿಂಗಳಿ, ಮಾರುತಿ ಕ್ಯಾಂಪ್.

ಎಫ್-11 ಚಿಟಿಗಿನಹಾಳ್ ಕೃಷಿ ಮಾರ್ಗದ ಕುರುಗೋಡು, ಶ್ರೀನಿವಾಸ ಕ್ಯಾಂಪ್, ಕಲ್ಲುಕಂಭ, ಕೆರಿಕೆರೆ, ಸೋಮಲಾಪುರ, ಲಕ್ಷಿö್ಮÃಪುರ, ಚಿಟಿಗಿನಹಾಳ್ ಗ್ರಾಮ. ಎಫ್-12 ಮುಷ್ಟಗಟ್ಟ ಕೃಷಿ ಮಾರ್ಗದ ಮುಷ್ಟಗಟ್ಟ, ಕೆರಿಕೆರೆ ಗ್ರಾಮ. ಎಫ್-13 ಕ್ಯಾದಿಗೆಹಾಳ್ ಕೃಷಿ ಮಾರ್ಗದ ಕ್ಯಾದಿಗೆಹಾಳ್, ಗೆಣಿಕೆಹಾಳ್ ಗ್ರಾಮ. ಎಫ್-14 ಗೆಣಿಕೆಹಾಳ್ ಕೃಷಿ ಮಾರ್ಗದ ಗೆಣಿಕಹಾಳ್, ಕುರುಗೋಡು, ವದ್ದಟ್ಟಿ ಕ್ರಾಸ್ ಮತ್ತು ಎಫ್-15 ಸೋಲಾರ್ ಫೀಡರ್ ಮಾರ್ಗ ಮತ್ತು ಎಫ್-4 ಮುದ್ದಾಪುರ ಐಪಿ ಫೀಡರ್ ಮಾರ್ಗದ ಬಾಳಾಪುರ ಮತ್ತು ಮುದ್ದಾಪುರ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಕುರುಗೋಡು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Whats_app_banner