Bengaluru: ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru: ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ

Bengaluru: ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ

Ganesha Chaturthi 2024: ಪಿಒಪಿ ಹಾಗೂ ರಾಸಾಯನಿಕ ವಸ್ತುಗಳಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದ ಬೆಂಗಳೂರಿನ ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿಗೊಳಿಸಲಾಗಿದೆ.

ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ
ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ

ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಹೀಗಾಗಿ ಎಲ್ಲೆಡೆ ಗಣೇಶನ ಮೂರ್ತಿಗಳ ತಯಾರಿಕೆ ಜೋರಾಗಿದೆ. ಕರ್ನಾಟಕದಲ್ಲಿ ಮಣ್ಣಿನ ಮೂರ್ತಿಗಳನ್ನು ಮಾತ್ರವೇ ತಯಾರಿಸಲು ಮತ್ತು ಬಳಸಲು ಅವಕಾಶವಿದೆ. ಹೀಗಾಗಿ ಪಿಒಪಿ ಗಣೇಶನ ಮೂರ್ತಿಗಳ ತಯಾರಿ, ಮಾರಾಟ ಮತ್ತು ನಿಮಜ್ಜನಕ್ಕೆ ರಾಜ್ಯದಲ್ಲಿ ಅವಕಾಶವಿಲ್ಲ. ಈ ಕುರಿತು ರಾಜ್ಯಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಡುವೆಯೂ, ಸರ್ಕಾರದ ಆದೇಶ ಮೀರಿ ರಾಜಧಾನಿ ಬೆಂಗಳೂರಿನಲ್ಲಿ ಗಣೇಶನ ವಿಗ್ರ ತಯಾರಿಸುತ್ತಿದ್ದ ಗೋಡೌನ್‌ಗೆ ಬೀಗ ಜಡಿದು ನೋಟಿಸ್‌ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ ಪಿಓಪಿ (Plaster of Paris) ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ತಯಾರಿಸುತ್ತಿರುವುದು ತಿಳಿದು ಬಂದಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಗೋಡೌನ್‌ಗೆ ಬೀಗಮುದ್ರೆ ಹಾಕಿ ನೋಟೀಸ್ ಜಾರಿ ಮಾಡಿದ್ದಾರೆ.

ರಾಜರಾಜೇಶ್ವರಿನಗರ ವಲಯದ ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ಪಿಓಪಿ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಈ ಕುರಿತು ಬಿಬಿಎಂಪಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ನೀಡಿತ್ತು. ಹೀಗಾಗಿ ಹೆಮ್ಮಿಗೆಪುರ ವ್ಯಾಪ್ತಿಯ ಚೆಟ್ಟುಪಾಳ್ಯ ಹಾಗೂ ಕೋಡಿಪಾಳ್ಯ ಪ್ರದೇಶಗಳಿಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ನಿಷೇಧೀಸಿರುವ ಪಿಒಪಿ ಹಾಗೂ ಕೆಮಿಕಲ್‌ ಬಳಸಿ ಮೂರ್ತಿ ತಯಾರಿಸುತ್ತಿದ್ದ ಗೋಡೌನ್‌ಗಳಿಗೆ ದಿಢೀರ್ ದಾಳಿ ನಡೆಸಿ ಬೀಗ ಜಡಿದಿದ್ದಾರೆ. ಅಲ್ಲದೆ ನೋಟೀಸ್ ಜಾರಿ ಮಾಡಲಾಗಿದೆ.

ಸರ್ಕಾರದ ನಿಯಮ ಪಾಲಿಸಬೇಕು

ಕರ್ನಾಟಕದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಗುತ್ತದೆ. ಹೀಗಾಗಿ ಸರ್ಕಾರವು ಕೆಲವೊಂದು ಆದೇಶಗಳನ್ನು ಜಾರಿ ಮಾಡಿದೆ. ಗಣೇಶೋತ್ಸವದ ಮೇಲೇ ನಿಗಾ ಇರಿಸಲು ಸರ್ಕಾರವು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ. ಹೀಗಾಗಿ ಈ ಬಾರಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವವರು ಸರ್ಕಾರದ ನಿಯಮಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು.

ಗಣೇಶ ವಿಗ್ರಹ ಪರಿಸರ ಸ್ನೇಹಿಯಾಗಿರಬೇಕು ಎನ್ನುವುದು ಸರ್ಕಾರದ ನಿಯಮ. ಮಣ್ಣಿನ ಗಣೇಶನ ವಿಗ್ರಹ ಬಳಸಿ ಎನ್ನುವ ಸೂಚನೆಯನ್ನು ನೀಡಲಾಗಿದೆ. ಪರಿಸರಕ್ಕೆ ಹಾನಿಯಾಗುವ ಪಿಒಪಿ ಅಥವಾ ವಿವಿಧ ಅನಿಕಾರಕ ಕೆಮಿಕಲ್‌ ಬಳಸಿ ತಯಾರಿಸುವ ಗಣೇಶನನ್ನು ಬಳಸಲೇಬೇಡಿ. ಪರಿಸರ ಇಲಾಖೆಯವರು ದಾಳಿ ಮಾಡಿ ಗಣೇಶನನ್ನು ಜಪ್ತಿ ಮಾಡುವರು. ಗಣಪನನ್ನು ಕೂರಿಸುವ ಮುನ್ನ ವಿವಿಧ ಇಲಾಖೆಗಳ ಅನುಮತಿ ಕಡ್ಡಾಯ. ಸ್ಥಳೀಯಾಡಳಿತ ಇಲ್ಲವೇ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆದುಕೊಳ್ಳಬಹುದು.

ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ

ಗಣೇಶ ವಿಗ್ರಹಗಳ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ. ವಿದ್ಯುತ್ ಅಲಂಕಾರಕ್ಕೆ ಸಂಬಂಧಿಸಿ ಬೆಸ್ಕಾಂನಿಂದ ಅನುಮತಿ ಪಡೆಯಬೇಕು. ಅಗ್ನಿಶಾಮಕ ದಳ ಮತ್ತು ಸಂಚಾರಿ ಪೊಲೀಸರಿಂದ ಎನ್​ಒಸಿ ಪಡೆಯಬೇಕು. ಸ್ಥಳದಲ್ಲಿ 24 ಗಂಟೆಯೂ ಬೆಳಕು ಇರಬೇಕು. ಹೈಕೋರ್ಟ್ ಆದೇಶದಂತೆ ಫ್ಲೆಕ್ಸ್ ಮತ್ತು ಬೋರ್ಡ್​​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ಸಂಬಂಧಿಸಿ ಬಿಬಿಎಂಪಿ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Whats_app_banner