Gold Price: 10 ಗ್ರಾಂ ಚಿನ್ನಕ್ಕೆ 82357 ರೂ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ತಿಳಿಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  Gold Price: 10 ಗ್ರಾಂ ಚಿನ್ನಕ್ಕೆ 82357 ರೂ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ತಿಳಿಯಿರಿ

Gold Price: 10 ಗ್ರಾಂ ಚಿನ್ನಕ್ಕೆ 82357 ರೂ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ತಿಳಿಯಿರಿ

Gold Price Today: ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿರುವುದರಿದ ಶುಕ್ರವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 10 ಗ್ರಾಂ ಚಿನ್ನದ ದರ 82,357 ರೂ.ಗೆ ತಲುಪಿದೆ. ಜಾಗತಿಕ ವಿದ್ಯಮಾನಗಳು, ಸುಂಕ ಹೆಚ್ಚುವ ಭೀತಿ ಇತ್ಯಾದಿಗಳಿಂದ ಜನರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

Gold Price: 10 ಗ್ರಾಂ ಚಿನ್ನಕ್ಕೆ 82,357 ರೂಪಾಯಿ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ
Gold Price: 10 ಗ್ರಾಂ ಚಿನ್ನಕ್ಕೆ 82,357 ರೂಪಾಯಿ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ (REUTERS)

Gold Price Today: ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿರುವುದರಿದ ಶುಕ್ರವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 10 ಗ್ರಾಂ ಚಿನ್ನದ ದರ 82,357 ರೂ.ಗೆ ತಲುಪಿದೆ. ಜಾಗತಿಕ ವಿದ್ಯಮಾನಗಳು, ಸುಂಕ ಹೆಚ್ಚುವ ಭೀತಿ ಇತ್ಯಾದಿಗಳಿಂದ ಜನರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಬೆಳ್ಳಿ ಕೂಡ ದರ ಹೆಚ್ಚಿಸಿಕೊಂಡಿದೆ. 1 ಕೆಜಿ ಬೆಳ್ಳಿ ದರ ಶೇಕಡ 0.26 ಅಥವಾ 240 ರೂಪಾಯಿ ಏರಿಕೆಯಾಗಿ 93,686 ರೂಪಾಯಿಗೆ ತಲುಪಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಸಕಾರಾತ್ಮಕವಾಗಿತ್ತು.

ಅಮೆರಿಕದಲ್ಲಿ ಮಾರಾಟವಾಗದೆ ಉಳಿದಿರುವ ಮನೆಗಳ ಕುರಿತಾದ ಕಳವಳ, ಜಿಡಿಪಿ ಅಂಕಿಅಂಶಗಳು ಹೂಡಿಕೆದಾರರಿಗೆ ನಿರಾಶೆ ಉಂಟು ಮಾಡಿವೆ. ಇದೇ ಕಾರಣಕ್ಕೆ ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿಯತ್ತ ಹೂಡಿಕೆದಾರರು ಮುಖ ಮಾಡಿದ್ದಾರೆ. ಇದೇ ಕಾರಣದಿಂದ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರಿವೆ. ಶುಕ್ರವಾರ ಇನ್ನಷ್ಟು ಏರಿಕೆ ಕಂಡಿದೆ.

ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು?

ಬೆಂಗಳೂರಿನಲ್ಲಿ ಶುಕ್ರವಾರ 22 ಕೆ ಚಿನ್ನದ ದರ ಗ್ರಾಂಗೆ 7,730 ರೂಪಾಯಿ ಇದೆ. 24ಕೆ ಚಿನ್ನ ಗ್ರಾಂಗೆ 8,433 ರೂಪಾಯಿ ಇದೆ. 18 ಕೆ ಚಿನ್ನದ ದರ 6,325 ರೂಪಾಯಿ ಇದೆ. ಕರ್ನಾಟಕದ ಇತರೆ ನಗರಗಳಲ್ಲಿಯೂ ಸಾಮಾನ್ಯವಾಗಿ ಇದೇ ದರ ಇರುತ್ತದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 7,730 ರೂಪಾಯಿ ಇದೆ. ನಿನ್ನೆ 7,610 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ 120 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 61,840 ರೂಪಾಯಿ ಇದೆ. ನಿನ್ನೆ 60,830 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ 960 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು 77,300 ರೂಪಾಯಿ ಇದೆ. ನಿನ್ನೆ 76,100 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 1,200 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 7,73,000 ರೂಪಾಯಿ ಇದೆ.ನಿನ್ನೆ 7,61,000 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 12000 ರೂಪಾಯಿ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ದರ

ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 8,433 ರೂಪಾಯಿ ಇದೆ. ನಿನ್ನೆ 8,302 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ 131 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು 67,464 ರೂಪಾಯಿ ಇದೆ. ನಿನ್ನೆ 66,416 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ 1,048 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು 84,330 ರೂಪಾಯಿ ಇದೆ. ನಿನ್ನೆ 83,020 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 1,310 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 8,43,300 ರೂಪಾಯಿ ಇದೆ. ನಿನ್ನೆ 8,30,200 ರೂಪಾಯಿ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 13,100 ರೂಪಾಯಿ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ

ಕರ್ನಾಟಕದಲ್ಲಿ ಇಂದು ಬೆಳ್ಳಿ ದರ ಗ್ರಾಂಗೆ 99.50 ರೂಪಾಯಿ ಇದೆ. ಒಂದು ಕೆ.ಜಿ. ಬೆಳ್ಳಿ ದರ 99,500 ರೂಪಾಯಿ ಇದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಈ ದರ ಇರುತ್ತದೆ. ಮಂಗಳೂರು, ಮೈಸೂರು, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಬೆಂಗಳೂರಿನ ದರದಷ್ಟೇ ಇರುತ್ತದೆ. ವೇಸ್ಟೇಜ್‌, ಕುಶಲಕರ್ಮಿಯ ಮಜೂರಿ ಇತ್ಯಾದಿ ಕಾರಣಗಳಿಂದ ಆಭರಣದಂಗಡಿಯಿಂದ ಆಭರಣದಂಗಡಿಗೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ತುಸು ವ್ಯತ್ಯಾಸ ಇರಬಹುದು. ಆದಷ್ಟು ನಂಬಿಕಸ್ಥವೆನಿಸುವ ಚಿನ್ನಾಭರಣಗಳ ಅಂಗಡಿಗಳಿಂದ ಖರೀದಿಸಿ.

ಗಮನಿಸಿ: ಲಭ್ಯವಿರುವ ಮಾಹಿತಿ ಆಧರಿಸಿ ಚಿನ್ನ ಮತ್ತು ಬೆಳ್ಳಿ ದರ ವಿವರ ನೀಡಲಾಗಿದೆ. ಚಿನ್ನ ಮತ್ತು ಬೆಳ್ಳಿ ದರದ ಕುರಿತು ನಿಖರ ಮಾಹಿತಿಗೆ ಆಭರಣದ ಅಂಗಡಿಗಳಿಗೆ ಭೇಟಿ ನೀಡಿ.

Whats_app_banner