ಏರುತ್ತಲೇ ಇದೆ ಬಂಗಾರದ ಬೆಲೆ; ಲಕ್ಷ ರೂಪಾಯಿಯತ್ತ ಲಗ್ಗೆಯಿಡುತ್ತಿರುವ ಸ್ವರ್ಣದ ದರ
ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್ಗೆ 3,318 ಯುಎಸ್ಡಿ ((ಯುನೈಟೆಡ್ ಸ್ಟೇಟ್ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ. ಅಮೆರಿಕ - ಚೀನಾ ನಡುವಿನ ಸುಂಕ ಸಮರ ಉತ್ತುಂಗಕ್ಕೇರಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್ಗೆ 3,318 ಯುಎಸ್ಡಿ (ಯುನೈಟೆಡ್ ಸ್ಟೇಟ್ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ. ಅಮೆರಿಕ - ಚೀನಾ ನಡುವಿನ ಸುಂಕ ಸಮರ ಉತ್ತುಂಗಕ್ಕೇರಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ.245 ರಷ್ಟು ಸುಂಕ ವಿಧಿಸುತ್ತಿರುವುದಾಗಿ ಘೋಷಿಸಿದೆ. ಇತ್ತ ಚೀನಾ ಕೂಡ ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ್ದು, ಅಮೆರಿಕದ ಬೋಯಿಂಗ್ ವಿಮಾನಗಳು ಮತ್ತು ಬಿಡಿಭಾಗಗಳ ಖರೀದಿಯನ್ನು ನಿಲ್ಲಿಸಿದೆ. ಹೀಗೆ ಚೀನಾ- ಅಮೆರಿಕ ನಡುವಿನ ಬಿಕ್ಕಟ್ಟು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.
ಇದರಿಂದ ಹೂಡಿಕೆದಾರರು ಚಿನ್ನದ ಮೇಲೆ ತಮ್ಮ ಗಮನಹರಿಸಿದ್ದಾರೆ. ಇದೇ ಕಾರಣಕ್ಕೆ ಚಿನ್ನದ ದರ ಏರಿಕೆಯಾಗುತ್ತಿದೆ. ಕಳೆದ ಎರಡೇ ದಿನದಲ್ಲಿ ಆಭರಣ ಚಿನ್ನದ ಬೆಲೆ 2000ರೂ ಏರಿಕೆಯಾಗಿ ಹೊಸ ದಾಖಲೆ ಬರೆದಿದೆ. ಎಂಟು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಶೇ. 11 ರಷ್ಟು ಏರಿಕೆಯಾಗಿದೆ. ನಾಮಮಾತ್ರಕ್ಕೆ ಇಳಿಕೆ ಕಾಣುವ ಚಿನ್ನದ ದರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನೂ ಹೆಚ್ಚು ಏರಿಕೆಯಾಗುವ ಸೂಚನೆ ಇದೆ.
ಚಿನ್ನದ ದರ ಏರಿಕೆ, ಇಲ್ಲಿದೆ ವಿವರ
ಕಳೆದ ಎರಡೇ ದಿನದಲ್ಲಿ ಆಭರಣ ಚಿನ್ನದ ಬೆಲೆ 22 ಕ್ಯಾರೆಟ್ಗೆ 2000ರೂ ಏರಿಕೆಯಾಗಿದೆ. ನಿನ್ನೆ ಬುಧವಾರ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 950ರೂ ಇಳಿಕೆಯಾಗಿತ್ತು. ಇಂದು ಗುರುವಾರ ಕೂಡ 1050ರೂ ಏರಿಕೆಯಾಗಿದ್ದು, 89,200ರೂಪಾಯಿ ದರದಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ 1140ರೂ ಏರಿಕೆಯಾಗಿದ್ದು 97,310ರೂಪಾಯಿಗೆ ತಲುಪಿದೆ.
ಬೆಳ್ಳಿ ದರದ ವಿವರ
ಬೆಳ್ಳಿ ದರ ಕಳೆದ ಎರಡು ದಿನಗಳಿಂದ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ಇಂದು ಗುರುವಾರ ಏಪ್ರಿಲ್ 17ರಂದು ಬೆಳ್ಳಿ ದರ ಸ್ಥಿರವಾಗಿದೆ. ಬೆಂಗಳೂರಲ್ಲಿ ಪ್ರತಿ ಕೆಜಿ ಬೆಳ್ಳಿಗೆ 1 ಲಕ್ಷದಂತೆ ವಹಿವಾಟು ನಡೆಯುತ್ತಿದೆ. ಹೈದರಾಬಾದ್ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 1.10 ಲಕ್ಷ ತಲುಪಿದೆ.
ಭಾರತ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ, “ವ್ಯಕ್ತಿಗಳು ಹೆಚ್ಚಿನ ಬೆಲೆಗಳನ್ನು ಬಂಡವಾಳ ಮಾಡಿಕೊಳ್ಳಲು ಅಥವಾ ಇತರ ಹೂಡಿಕೆಗಳಿಂದ ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಮಾರಾಟದಲ್ಲಿ ಅಸಾಮಾನ್ಯ ಏರಿಳಿತ ಕಂಡುಬರುತ್ತಿದೆ” ಎಂದು ಹೇಳಿದ್ದಾರೆಂದು ಬ್ಯುಸಿನೆಸ್ ವರ್ಲ್ಡ್ ಜಾಲತಾಣ ವರದಿ ಮಾಡಿದೆ.
ವಿಭಾಗ