ಅಕ್ಟೋಬರ್‌ 29 ಧನ ತ್ರಯೋದಶಿ: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು? ಚಿನ್ನಾಭರಣ ಖರೀದಿಸಲು ಶುಭ ಮುಹೂರ್ತ ತಿಳಿಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಕ್ಟೋಬರ್‌ 29 ಧನ ತ್ರಯೋದಶಿ: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು? ಚಿನ್ನಾಭರಣ ಖರೀದಿಸಲು ಶುಭ ಮುಹೂರ್ತ ತಿಳಿಯಿರಿ

ಅಕ್ಟೋಬರ್‌ 29 ಧನ ತ್ರಯೋದಶಿ: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು? ಚಿನ್ನಾಭರಣ ಖರೀದಿಸಲು ಶುಭ ಮುಹೂರ್ತ ತಿಳಿಯಿರಿ

ಧನ ತ್ರಯೋದಶಿ ಸಮಯದಲ್ಲಿ ಚಿನ್ನ, ಬೆಳ್ಳಿ, ವಜ್ರ ಅಥವಾ ಯಾವುದಾದರೂ ಆಭರಣ ಖರೀದಿಸೋಣ ಎಂದುಕೊಳ್ಳುತ್ತಿರಬಹುದು. ದೀಪಾವಳಿ ಹಬ್ಬದ ಈ ವಾರದಲ್ಲಿ ಚಿನ್ನದ ದರ ದುಬಾರಿಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,375 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 8,045 ರೂಪಾಯಿ ಇದೆ.

ಅಕ್ಟೋಬರ್‌ 29 ಧನ ತ್ರಯೋದಶಿ: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು ಎಂಬ ಮಾಹಿತಿ ಜತೆಗೆ ಇಂದಿನ ಚಿನ್ನಾಭರಣ ಖರೀದಿ ಮುಹೂರ್ತದ ವಿವರವೂ ಇಲ್ಲಿದೆ.
ಅಕ್ಟೋಬರ್‌ 29 ಧನ ತ್ರಯೋದಶಿ: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಿನ್ನದ ದರ ಎಷ್ಟು ಎಂಬ ಮಾಹಿತಿ ಜತೆಗೆ ಇಂದಿನ ಚಿನ್ನಾಭರಣ ಖರೀದಿ ಮುಹೂರ್ತದ ವಿವರವೂ ಇಲ್ಲಿದೆ. (AP)

ಬೆಂಗಳೂರು: ಧನ ತ್ರಯೋದಶಿ ಸಮಯದಲ್ಲಿ ಚಿನ್ನ, ಬೆಳ್ಳಿ, ವಜ್ರ ಅಥವಾ ಯಾವುದಾದರೂ ಆಭರಣ ಖರೀದಿಸೋಣ ಎಂದುಕೊಳ್ಳುತ್ತಿರಬಹುದು. ದೀಪಾವಳಿ ಹಬ್ಬದ ಈ ವಾರದಲ್ಲಿ ಚಿನ್ನದ ದರ ದುಬಾರಿಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,375 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 8,045 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ ದರ(gold rate today bangalore 22k): ಅಕ್ಟೋಬರ್‌ 20 ಧನ ತ್ರಯೋದಶಿ ದಿನದಂದು 1 ಗ್ರಾಂ, 8 ಗ್ರಾಂ, 10 ಗ್ರಾಂ, 100 ಗ್ರಾಂ ಚಿನ್ನದ ದರ ಎಷ್ಟಿದೆ ತಿಳಿಯೋಣ. 1 ಗ್ರಾಂ ಚಿನ್ನಕ್ಕೆ 7,375 ರೂಪಾಯಿ, 8 ಗ್ರಾಂ ಚಿನ್ನಕ್ಕೆ 59,000 ರೂಪಾಯಿ, 10 ಗ್ರಾಂ ಚಿನ್ನಕ್ಕೆ 73,750 ರೂಪಾಯಿ, 100 ಗ್ರಾಂ ಚಿನ್ನಕ್ಕೆ 7,37,500 ರೂಪಾಯಿ ಇದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ದರ (gold rate today bangalore 916): ಅಕ್ಟೋಬರ್‌ 20 ಧನ ತ್ರಯೋದಶಿ ದಿನದಂದು 1 ಗ್ರಾಂ, 8 ಗ್ರಾಂ, 10 ಗ್ರಾಂ, 100 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಎಷ್ಟಿದೆ ತಿಳಿಯೋಣ. 1 ಗ್ರಾಂ ಚಿನ್ನಕ್ಕೆ 8,045 ರೂಪಾಯಿ, 8 ಗ್ರಾಂ ಚಿನ್ನಕ್ಕೆ 64,360 ರೂಪಾಯಿ, 10 ಗ್ರಾಂ ಚಿನ್ನಕ್ಕೆ 80,450 ರೂಪಾಯಿ, 100 ಗ್ರಾಂ ಚಿನ್ನಕ್ಕೆ 8,04,500 ರೂಪಾಯಿ ಇದೆ.

ಧನತ್ರಯೋದಶಿಗೆ ಚಿನ್ನ ಮಾರಾಟ ಇಳಿಕೆ ನಿರೀಕ್ಷೆ

ಧನ ತ್ರಯೋದಶಿ ಸಮಯದಲ್ಲಿ ಚಿನ್ನ ಮತ್ತು ಇತರೆ ಅಮೂಲ್ಯ ಲೋಹಗಳ ಆಭರಣಗಳನ್ನು ಖರೀದಿಸುವುದು ಶುಭದಾಯಕ. ಆದರೆ, ಈ ವರ್ಷ ಚಿನ್ನದ ಬೇಡಿಕೆಯು ದರ ಹೆಚ್ಚಳದಿಂದಾಗಿ ಶೇಕಡ 15-16ರಷ್ಟು ಇಳಿಕೆ ಕಾಣುವ ನಿರೀಕ್ಷೆಯನ್ನು ಇಂಡಿಯ ಬುಲಿಯನ್‌ ಆಂಡ್‌ ಜುವೆಲ್ಲರ್ಸ್‌ ಅಸೋಸಿಯೇಷನ್‌ ನಿರೀಕ್ಷೆಯಿದೆ. "ಈ ವರ್ಷ 25-30 ಟನ್‌ಗಳಷ್ಟು ಚಿನ್ನ ಮಾರಾಟವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಇದು 30-35 ಟನ್‌ ಆಗಿತ್ತು" ಎಂದು ಐಬಿಜೆಎ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.

ಬೆಲೆ ಏರಿಕೆಯಿಂದಾಗಿ ಚಿನ್ನದ ಮಾರಾಟದ ಮೌಲ್ಯವು ಸುಮಾರು 20,000-23,500 ಕೋಟಿ ರೂಪಾಯಿಗಳಲ್ಲಿ ಸ್ಥಿರವಾಗಿ ಉಳಿಯುವ ಸಾಧ್ಯತೆಯಿದೆ. ಧನ ತ್ರಯೋದಶಿಯು ದೀಪಾವಳಿಯ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಅಮೂಲ್ಯವಾದ ಲೋಹಗಳು, ಪಾತ್ರೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಮಂಗಳಕರ ಸಮಯವೆಂದು ಪರಿಗಣಿಸಲಾಗಿದೆ. ಆಭರಣದಂಗಡಿಗಳಿಗೆ ಇಂದು ವಿಶೇಷ ದಿನವಾಗಿದೆ. ಈ ದಿನ ಮಧ್ಯರಾತ್ರಿಯವರೆಗೆ ಅಂಗಡಿ ತೆರೆದಿರುತ್ತಾರೆ.

ಧನತ್ರಯೋದಶಿ: ಇಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಸಮಯ ಯಾವುದು?

ಬಿಸ್ನೆಸ್‌ ಟುಡೇ ವರದಿ ಪ್ರಕಾರ ಇಂದು ವಿವಿಧ ನಗರಗಳಲ್ಲಿ ಚಿನ್ನಾಭರಣ ಖರೀದಿಸಲು ಶುಭ ಮುಹೂರ್ತ ಈ ಮುಂದಿನಂತೆ ಇದೆ.

  • ಪುಣೆ: ರಾತ್ರಿ 07:01 ಗಂಟೆಯಿಂದ 08:33 PM ಗಂಟೆಯವರೆಗೆ
  • ನವದೆಹಲಿ: ಸಂಜೆ 06:31 ಗಂಟೆಯಿಂದ ರಾತ್ರಿ 08:13 ಗಂಟೆಯವರೆಗೆ
  • ಚೆನ್ನೈ: ಸಂಜೆ 06:44 ರಾತ್ರಿ 08:11 PM ಗಂಟೆಯವರೆಗೆ
  • ಜೈಪುರ: ಸಂಜೆ 06:40 ಗಂಟೆಯಿಂದ 08:20 ಗಂಟೆಯವರೆಗೆ
  • ಹೈದರಾಬಾದ್‌: ಸಂಜೆ 06:45 ಗಂಟೆಯಿಂದ 08:15 ರವರೆಗೆ
  • ಗುರುಗ್ರಾಮ: ಸಂಜೆ 06:32 ಗಂಟೆಯಿಂದ 08:14 ಗಂಟೆಯವರೆಗೆ
  • ಮುಂಬೈ: ರಾತ್ರಿ 07:04 ಗಂಟೆಯಿಂದ 08:37 ಗಂಟೆಯವರೆಗೆ
  • ಬೆಂಗಳೂರು: ಸಂಜೆ 06:55 ಗಂಟೆಯಿಂದ ರಾತ್ರಿ 08:22 ಗಂಟೆಯವರೆಗೆ.

ಮಂಗಳೂರು, ಮೈಸೂರು, ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದಿನ ಚಿನ್ನದ ದರ ಬೆಂಗಳೂರಿನಷ್ಟೇ ಇರಲಿದೆ. ಚಿನ್ನಾಭರಣ ದರಗಳು ವಿವಿಧ ಶಾಪ್‌ಗಳಲ್ಲಿ ಬೇರೆಬೇರೆ ರೀತಿ ಇರಬಹುದು. ನಂಬಿಕಸ್ಥ ಚಿನ್ನದಂಗಡಿಗಳಲ್ಲಿ ಆಭರಣ ಖರೀದಿಸಲು ಆದ್ಯತೆ ನೀಡಿ.