ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಕರ್ನಾಟಕದ ಗ್ರಾಮೀಣ ಜನರಿಗೆ ಒಂದು ಶುಭ ಸುದ್ದಿ. ನಿಮಗೆ ಸ್ವಂತ ಮನೆ, ನಿವೇಶನ ಏನೂ ಇಲ್ವ. ಸರ್ಕಾರ ಉಚಿತವಾಗಿ ಮನೆ ಕೊಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೆ- ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಹೇಗೆ ಎಂಬ ವಿವರ ಇಲ್ಲಿದೆ.

ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಕ್ಕೆ ಇಲ್ಲಿದೆ ಅವಕಾಶ. (ಸಾಂಕೇತಿಕ ಚಿತ್ರ)
ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಕ್ಕೆ ಇಲ್ಲಿದೆ ಅವಕಾಶ. (ಸಾಂಕೇತಿಕ ಚಿತ್ರ) (RGRHCL)

ಬೆಂಗಳೂರು: ಗ್ರಾಮೀಣವಾಸಿಗಳಿಗೆ ಒಂದು ಶುಭ ಸುದ್ದಿ. ನಿಮ್ಮ ಹೆಸರಲ್ಲಿ ಸ್ವಂತ ಮನೆ, ನಿವೇಶನ ಏನೂ ಇಲ್ವಾ, ಹಾಗಾದರೆ ಸರ್ಕಾರದಿಂದ ವಸತಿ ಪಡೆಯಲು ನಿಮಗೆ ಇಲ್ಲೊಂದು ಸುವರ್ಣಾವಕಾಶ ಇದೆ. ನೀವು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರೇ, ವಸತಿ ರಹಿತರೇ, ನಿವೇಶನ ರಹಿತರೇ, ಹಾಗಾದರೆ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಮನೆ ಪಡೆಯುವುದಕ್ಕೆ ನಿಮಗೆ ಇದೀಗ ಸುವರ್ಣಾವಕಾಶ ಬಂದಿದೆ.

ಹೌದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಇರುವ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕರ್ನಾಟಕದಲ್ಲಿ ಶುರುವಾಗಿದೆ. ಸರ್ವರಿಗೂ ಸೂರು ಒದಗಿಸಬೇಕು ಎಂಬ ಸದುದ್ದೇಶ ಹೊಂದಿರುವ ಈ ಸಮೀಕ್ಷೆಯಲ್ಲಿ ವಸತಿ ರಹಿತರು ಹಾಗೂ ನಿವೇಶನ ರಹಿತರು ನೇರವಾಗಿ ಪಾಲ್ಗೊಳ್ಳಬಹುದಾಗಿದೆ.

ಉಚಿತ ವಸತಿ ಪಡೆಯುವುದಕ್ಕೆ ಯಾರು ಅರ್ಹರು

  • ವಸತಿ ರಹಿತರು ಹಾಗೂ ನಿವೇಶನ ರಹಿತರು
  • ಕಚ್ಚಾ ಮನೆ ಹೊಂದಿರುವವರು
  • ಕುಟುಂಬದ ವಾರ್ಷಿಕ ಆದಾಯ 1.8 ಲಕ್ಷ ರೂಪಾಯಿ ಮೀರದವರು

ಉಚಿತ ವಸತಿ ಪಡೆಯುವುದಕ್ಕೆ ಯಾವ ದಾಖಲೆಗಳನ್ನು ಒದಗಿಸಬೇಕು

  • ಆಧಾರ್ ಕಾರ್ಡ್‌, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ನರೇಗಾ ಜಾಬ್ ಕಾರ್ಡ್‌ ಇದ್ದರೆ ಸಾಕು. ಅದನ್ನು ದಾಖಲೆಯಾಗಿ ಬಳಸಿಕೊಳ್ಳಬಹುದು.

ಉಚಿತ ವಸತಿ ಪಡೆಯುವುದಕ್ಕೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಹೇಗೆ

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಓರ್ವ ಸರ್ವೇಕ್ಷಕರನ್ನು (ಸರ್ವೇಯರ್‌) ಇದಕ್ಕಾಗಿ ನಿಯೋಜಿಸಲಾಗಿದೆ.

ಆ ಸರ್ವೇಕ್ಷಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ಸಹಕರಿಸಲಿದ್ದಾರೆ.

ಉಚಿತ ವಸತಿ ಪಡೆಯುವುದಕ್ಕೆ ಸಮೀಕ್ಷೆಯ ವಿವರದ ಮಾಹಿತಿ ಪತ್ರ
ಉಚಿತ ವಸತಿ ಪಡೆಯುವುದಕ್ಕೆ ಸಮೀಕ್ಷೆಯ ವಿವರದ ಮಾಹಿತಿ ಪತ್ರ

ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಹೇಗೆ

ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಆವಾಸ್‌ಪ್ಲಸ್ 2024 ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ

https://play.google.com/store/apps/details?id=r.rural.awaasplus_2_0&pcampaignid=web_share

ಹೆಚ್ಚಿನ ವಿವರಗಳಿಗೆ, https://pmayg.nicin/netiayHome ಅಥವಾ ಕರ್ನಾಟಕದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ashraya.karnataka.gov.in ತಾಣವನ್ನು ಗಮನಿಸಬಹುದು. ಅಥವಾ ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಭೇಟಿ ನೀಡಬಹುದು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner