ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ; ಶ್ರಮಶಕ್ತಿ ಯೋಜನೆ ಕುರಿತು ನಿಮಗೆಷ್ಟು ಗೊತ್ತು?-government scheme karnataka govt shrama shakthi scheme loan for religious minority community entrepreneurs jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ; ಶ್ರಮಶಕ್ತಿ ಯೋಜನೆ ಕುರಿತು ನಿಮಗೆಷ್ಟು ಗೊತ್ತು?

ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ; ಶ್ರಮಶಕ್ತಿ ಯೋಜನೆ ಕುರಿತು ನಿಮಗೆಷ್ಟು ಗೊತ್ತು?

ಕುಲಕಸುಬನ್ನೇ ನೆಚ್ಚಿಕೊಂಡು ಬದುಕುವ ಕುಟುಂಬಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಆಧುನಿಕ ಜೀವನಶೈಲಿಗೆ ತಕ್ಕಂತೆ ಕೆಲವೊಂದು ಕುಲಕಸುಬುಗಳಿಗೆ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿಗಳ ಅಗತ್ಯವಿದೆ. ಸರ್ಕಾರದ ಯೋಜನೆಯ ಮೂಲಕ ಅದನ್ನು ಪಡೆಯಬಹುದು. ಅಲ್ಲದೆ ಸಾಲಸೌಲಭ್ಯವನ್ನೂ ನೀಡಲಾಗುತ್ತದೆ.

ಶ್ರಮಶಕ್ತಿ ಯೋಜನೆ: ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ
ಶ್ರಮಶಕ್ತಿ ಯೋಜನೆ: ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ (Pixabay)

ಭಾರತದ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ವಿವಿಧ ವರ್ಗಗಳ ಜನರಿಗಾಗಿ ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಇದರಲ್ಲಿ ಕೆಲವೊಂದು ಯೋಜನೆಗಳನ್ನು ಜನರು ಸದ್ಭಳಕೆ ಮಾಡಿಕೊಂಡರೆ, ಇನ್ನೂ ಕೆಲವೊಂದು ಯೋಜನೆಗಳ ಕುರಿತಾಗಿ ಜನರಿಗೆ ಮಾಹಿತಿ ಕೊರತೆ ಇದೆ. ಇಂದು ಕರ್ನಾಟಕ ಸರ್ಕಾರದ ‘ಶ್ರಮ ಶಕ್ತಿ ಯೋಜನೆ’ ಕುರಿತಾಗಿ ತಿಳಿಯೋಣ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಈ ಯೋಜನೆಗೆ ಸಂಬಂಧಿಸಿದಂತೆ ಅರ್ಹರಿಗೆ ಹಣಕಾಸು ನೆರವು ನೀಡುತ್ತದೆ.

ಈ ಯೋಜನೆಯಡಿಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ಕುಲಕಸುಬುದಾರರು ತಮ್ಮ ಕುಲಕಸುಬನ್ನು ಮುಂದುವರೆಸಿಕೊಂಡು ಹೋಗಲು ನೆರವು ನೀಡಲಾಗುತ್ತದೆ. ಅವರಿಗೆ ಬೇಕಾದ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯಗಳ ತರಬೇತಿ ನೀಡಿ, ಕೌಶಲ್ಯ ವೃದ್ಧಿಸಿಕೊಂಡು ಕುಲಕಸುಬನ್ನು ಮುಂದುವರೆಸಲು ಪ್ರೋತ್ಸಾಹ ನೀಡಲಾಗುತ್ತದೆ. ಆ ಮೂಲಕ ಸಣ್ಣ ವ್ಯಾಪಾರವನ್ನು ಕೂಡಾ ಆರಂಭಿಸಬಹುದು. ಇದರ ಸಲುವಾಗಿ ನಿಗಮದಿಂದ ಕಡಿಮೆ (4 ಶೇ.) ಬಡ್ಡಿದರದಲ್ಲಿ 50,000 ರೂಪಾಯಿ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ.50ರಷ್ಟು ಸಾಲವನ್ನು 36 ತಿಂಗಳಿನ ಒಳಗೆ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನು ‘ಬ್ಯಾಕ್‍ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ.

ಒಂದು ವೇಳೆ ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳ ಒಳಗೆ ಮರುಪಾವತಿದಲು ವಿಫಲವಾದರೆ, ಶೇ.50ರಷ್ಟು ಬ್ಯಾಕ್‍ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ಅರ್ಜಿದಾರರ ಅರ್ಹತೆಗಳು

  • ಅರ್ಜಿದಾರರು ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
  • ವಯೋಮಿತಿ 18 ರಿಂದ 55 ವರ್ಷಗಳು ಆಗಿರಬೇಕು
  • ಎಲ್ಲಾ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ರೂ.6.00 ಲಕ್ಷದ ಒಳಗಿರಬೇಕು
  • ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/ಸಾರ್ವಜನಿಕ ವಲಯದಲ್ಲಿ ಸರ್ಕಾರದ ಉದ್ಯೋಗಿಯಾಗಿರಬಾರದು
  • ಕೆಎಂಡಿಸಿಯಲ್ಲಿ ಸಾಲ ಡೀಫಾಲ್ಟರ್ ಆಗಿರಬಾರದು.

ಬೇಕಾದ ದಾಖಲೆಗಳು

  • ಆನ್‍ಲೈನ್ ಅರ್ಜಿ
  • ಫಲಾನುಭವಿಯ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಜಾತಿ, ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ ಪ್ರತಿ
  • ಕುಲಕಸುಬಿನ ಯೋಜನಾ ವರದಿ
  • ಬ್ಯಾಂಕ್ ಪಾಸ್ ಬುಕ್‌ನ ಮೊದಲ ಪುಟದ ಪ್ರತಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಹಂತ 01: ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಹಂತ 02: ಅರ್ಜಿ ನಮೂನೆಯನ್ನು ಪ್ರಿಂಟ್ ಮಾಡಿ.
  • ಹಂತ 03: ಈ ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ನಿಮ್ಮ ಜಿಲ್ಲೆಯ ಆಯ್ಕೆ ಸಮಿತಿಗೆ ಸಲ್ಲಿಸಿ.
  • ಹಂತ 04: ಆಯ್ಕೆ ಸಮಿತಿಯ ಅನುಮೋದನೆಯ ನಂತರ, ಸಬ್ಸಿಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ | ಪಡಿತರ ಕಾರ್ಡ್‌ದಾರರಿಗೆ ಸೂಚನೆ: ನಿಮ್ಮ ಪಡಿತರ ಕಾರ್ಡ್‌ ಕೆವೈಸಿ ಮಾಡಿಸಿಲ್ಲವೇ, ಆಗಸ್ಟ್‌ 31 ರೊಳಗೆ ಮಾಡಿಸದೇ ಇದ್ದರೆ ಕಾರ್ಡ್‌ ರದ್ದು

ಆಯ್ಕೆ ಸಮಿತಿಯಲ್ಲಿ ಯಾರೆಲ್ಲಾ ಇರುತ್ತಾರೆ?

  • ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರು -ಅಧ್ಯಕ್ಷರು
  • ತಾಲೂಕಿನಲ್ಲಿ ಕಾಯಂ ಆಗಿ ವಾಸಿಸುತ್ತಿರುವ ವಿಧಾನ ಪರಿಷತ್ತಿನ ಸದಸ್ಯರು -ಸಹ ಅಧ್ಯಕ್ಷರು
  • ತಾಲೂಕು ತಹಶೀಲ್ದಾರ -ಸದಸ್ಯರು
  • ಕಾರ್ಯನಿರ್ವಾಹಣಾಧಿಕಾರಿ ತಾಲ್ಲೂಕು ಪಂಚಾಯತ್ -ಸದಸ್ಯರು
  • ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ -ಸದಸ್ಯರು
  • ಜಿಲ್ಲಾ ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ -ಸದಸ್ಯರು
  • ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ -ಸದಸ್ಯರು
  • ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ- ಸದಸ್ಯ ಕಾರ್ಯದರ್ಶಿ

ಇನ್ನಷ್ಟು ಸರ್ಕಾರಿ ಯೋಜನೆ ಕುರಿತು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಯುವಕರಿಗಲ್ಲ, ಹಿರಿಯ ನಾಗರಿಕರಿಗೆ ಉದ್ಯೋಗಾವಕಾಶ; 60ರ ಹರೆಯದಲ್ಲಿ ಕೆಲಸ ಮಾಡುವ ಮನಸಿದ್ದರೆ ನಿಮಗಾಗಿ ಉದ್ಯೋಗ ಮೇಳ