ಕನ್ನಡ ಸುದ್ದಿ  /  Karnataka  /  Govt News In Brief: Invitation Of Applications For Appointment Of Members Of Police Complaints Authority; Departmental Exam Pass Certificate Available On Website

Govt News in Brief: ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ; ವೆಬ್‍ಸೈಟಲ್ಲಿ ಇಲಾಖಾ ಪರೀಕ್ಷೆ ಉತ್ತೀರ್ಣ ಪ್ರಮಾಣಪತ್ರ

Govt News in Brief: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅದೇ ರೀತಿ, ಇಲಾಖಾ ಪರೀಕ್ಷೆಯ ಉತ್ತೀರ್ಣತಾ ಪ್ರಮಾಣ ಪತ್ರಗಳು ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯ ಇದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಧಾನಸೌಧ (ಸಾಂಕೇತಿಕ ಚಿತ್ರ)
ವಿಧಾನಸೌಧ (ಸಾಂಕೇತಿಕ ಚಿತ್ರ)

ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಅಪರ ಪೊಲೀಸ್ ಅಧೀಕ್ಷಕರು, ಪೊಲೀಸ್ ಅಧೀಕ್ಷಕರು ಮತ್ತು ಮೇಲಿನ ಹಂತದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ. ಸದರಿ ಪ್ರಾಧಿಕಾರಕ್ಕೆ ಇತರೆ ಸದಸ್ಯರನ್ನೊಳಗೊಂಡಂತೆ ನಾಗರಿಕ ಸಮಾಜದಿಂದ ಒಬ್ಬ ಸದ್ಯರನ್ನು ಆಯ್ಕೆ ಮಾಡಲಾಗುವುದು ಎಂದು ಒಳಾಡಳಿತ ಇಲಾಖೆ ತಿಳಿಸಿದೆ.

ನಾಗರಿಕ ಸಮಾಜದಿಂದ ಸದಸ್ಯರ ಹುದ್ದೆಗೆ ಅರ್ಜಿ ಸಲ್ಲಿಸುವ ಸದಸ್ಯರು ಶೈಕ್ಷಣಿಕ, ಆರೋಗ್ಯ ಮತ್ತು ಬಡತನ ನಿರ್ಮೂಲನೆಯಂತಹ ಜನೋಪಕಾರಿ ಸಾಮಾಜಿಕ ಸೇವೆಗಳನ್ನು ಸಲ್ಲಿಸಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಸೈದ್ಧಾಂತಿಕ ಗುಂಪಿನೊಂದಿಗೆ ಗುರುತಿಸಿಕೊಂಡಿರಬಾರದು.

ಆಸಕ್ತರು ಪ್ರಕಟಣೆ ದಿನಾಂಕದಿಂದ 15 ದಿನಗಳೊಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಕೊಠಡಿ ಸಂಖ್ಯೆ: 222, 2ನೇ ಮಹಡಿ, ವಿಧಾನಸೌಧ, ಬೆಂಗಳೂರು ಇಲ್ಲಿಗೆ ವೈಯಕ್ತಿಕ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು http://www.karnataka.gov.in.spca ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ ಎಂದು ಒಳಾಡಳಿತ ಇಲಾಖೆಯ (ಪೊಲೀಸ್ ಸೇವೆಗಳು-ಬಿ) ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ತಿಳಿಸಿದ್ದಾರೆ.

ಇಲಾಖಾ ಪರೀಕ್ಷೆಯ ಉತ್ತೀರ್ಣತಾ ಪ್ರಮಾಣ ಪತ್ರಗಳು ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯ

ರಾಜ್ಯದಲ್ಲಿ 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ (ವಿಷಯ ಸಂಕೇತ-47 ಮತ್ತು 73ರನ್ನು ಹೊರತುಪಡಿಸಿ) ಅಭ್ಯರ್ಥಿಗಳು ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು ಆಯೋಗದ ಅಧಿಕೃತ ವೆಬ್‍ಸೈಟ್ http://kpsc.kar.nic.in ನ "Departmental Examination 2021- I session" ಲಿಂಕ್ ಮುಖಾಂತರ ಪಡೆಯಬಹುದಾಗಿದೆ. ಇದಕ್ಕಾಗಿ ಡಿಜಿಲಾಕರ್, ಅಕೌಂಟ್ ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿ ನಂತರ ಅಭ್ಯರ್ಥಿಯ ನೋಂದಣಿ ಸಂಖ್ಯೆ (7 ಅಂಕಿಗಳು) ಯನ್ನು Username ಆಗಿ ಮತ್ತು ಪಾನ್ ಕಾರ್ಡ್ ನಂಬರನ್ನು ಪಾಸ್‍ವರ್ಡ್ ಆಗಿ ಉಪಯೋಗಿಸಬೇಕು. ಲಾಗಿನ್ ಆದ 3 ರಿಂದ 4 ಗಂಟೆಗಳ ಒಳಗಾಗಿ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ.

ಪ್ರಮಾಣ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವ ಹಂತದಲ್ಲಿ ಯಾವುದಾದರೂ ತಾಂತ್ರಿಕ ದೋಷ ಉಂಟಾದಲ್ಲಿ ಸೇವಾಸಿಂಧು ಸಹಾಯವಾಣಿ ಸಂಖ್ಯೆಗಳು 080-22279954, 8088304855 ಮತ್ತು 6361799796 ಅನ್ನು ಸಂಪರ್ಕಿಸಬಹುದು. ಅಭ್ಯರ್ಥಿಗಳು ಜನವರಿ 27 ರಿಂದ ಮೇಲಿನ ವಿಧಾನವನ್ನು ಅನುಸರಿಸಿ ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಉಪಕಾರ್ಯದರ್ಶಿ (ಇಲಾಖಾ ಪರೀಕ್ಷೆ) ತಿಳಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ಯ ಸ್ಕೂಲ್‌ ಆಫ್‌ ಜರ್ನಲಿಸಂ ಆಂಡ್‌ ಮೀಡಿಯಾ ಸ್ಟಡೀಸ್‌ ಈಗ ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸ್‌ ಆರಂಭಿಸಿದೆ. ಇದು ಆನ್‌ಲೈನ್‌ ಮಾದರಿಯಲ್ಲಿದ್ದು, ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಇಗ್ನೋದ ಅಧಿಕೃತ ವೆಬ್‌ ತಾಣ ignouiop.samarth.edu.in ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಅವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಪುಸ್ತಕೋದ್ಯಮದ ಎಲ್ಲ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯ ಇದೆ. ಆದ್ದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಹೇಳಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point