ಕನ್ನಡ ಸುದ್ದಿ  /  Karnataka  /  Grama Panchayat Recruitment: Dakshina Kannada Rdpr Jobs Sslc Puc Education Apply Before Nov 3

Grama panchayat recruitment: ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಾವಕಾಶ, ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದ್ರೆ ಅರ್ಜಿ ಸಲ್ಲಿಸಿ

Grama panchayat recruitment 2022 Karnataka: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳನ್ವಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಒಂಬತ್ತು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಹುದ್ದೆಗಳ ವಿವರ, ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ನೇಮಕ ನಡೆಯಲಿರುವ ಗ್ರಾಮ ಪಂಚಾಯಿತಿಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Grama panchayat recruitment 2022: ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಾವಕಾಶ
Grama panchayat recruitment 2022: ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಾವಕಾಶ

Grama panchayat recruitment 2022 Karnataka: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳನ್ವಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಒಂಬತ್ತು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಹುದ್ದೆಗಳ ವಿವರ, ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ನೇಮಕ ನಡೆಯಲಿರುವ ಗ್ರಾಮ ಪಂಚಾಯಿತಿಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಸೆಪ್ಟೆಂಬರ್‌ 21, 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್‌ 3, 2022

ಹುದ್ದೆಗಳ ವಿವರ

ಕರವಸೂಲಿಗಾರ (ಬಿಲ್‌ ಕಲೆಕ್ಟರ್‌)-1, ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌- 2, ವಾಟರ್‌ ಅಪರೇಟರ್‌ (ಪಂಪು ಚಾಲಕ)- 33, ಅಟೆಂಡೆಂಟ್‌ (ಜವಾನ)- 21, ಕ್ಲೀನರ್‌ (ಸ್ವಚ್ಚತಾಗಾರ)- 56 ಸೇರಿದಂತೆ ಒಟ್ಟು 113 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳು 300 ರೂ. ಮತ್ತು ಎಸ್‌ಸಿ/ಎಸ್‌ಟಿ/ಪ್ರವರ್ಗ-೧ ಅಭ್ಯರ್ಥಿಗಳು 200 ರೂ. ಮತ್ತು ಅಂಗವಿಕಲ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಲಿಂಕ್‌: zpdk.karnataka.gov.in

ಅರ್ಜಿ ಶುಲ್ಕ ಪಾವತಿಸುವುದು ಹೇಗೆ?

ಆನ್‌ಲೈನ್‌ ಅರ್ಜಿ ನಮೂನೆಯಲ್ಲಿಯೇ ಅರ್ಜಿ ಶುಲ್ಕ ಪಾವತಿಸುವ ಲಿಂಕ್‌ ನೀಡಲಾಗಿರುತ್ತದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಶುಲ್ಕ ಪಾವತಿಸಲು ಅವಕಾಶವಿಲ್ಲ. ಶುಲ್ಕ ಪಾವತಿ ಲಿಂಕ್‌ನಲ್ಲಿ ಮಾಹಿತಿ ನಮೂದಿಸಿ ಚಲನ್‌ ಪ್ರಿಂಟೌಟ್‌ ತೆಗೆದುಕೊಂಡು ಅದನ್ನು ಆನ್‌ಲೈನ್‌ ಅರ್ಜಿಯಲ್ಲಿ ಅಪ್ಲೋಡ್‌ ಮಾಡಬೇಕು. ಬ್ಯಾಂಕ್‌ ಶುಲ್ಕವನ್ನು ಪಾವತಿಸದೇ ಹಾಗೂ ದಾಖಲೆಗಳನ್ನು/ಭಾವಚಿತ್ರ/ ಸಹಿಯನ್ನು ಅಪ್ಲೋಡ್‌ ಮಾಡದೆ ಇರುವ/ ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಒಮ್ಮೆ ಶುಲ್ಕ ಪಾವತಿಸಿದ ಬಳಿಕ ಶುಲ್ಕವನ್ನು ಹಿಂದಿರಿಗಿಸಲಾಗುವುದಿಲ್ಲ.

ವಿದ್ಯಾರ್ಹತೆ ಏನು?

ಕರವಸೂಲಿಗಾರ/ ಬಿಲ್‌ ಕಲೆಕ್ಟರ್‌ ಹುದ್ದೆಗೆ ಕನ್ನಡವನ್ನು ಒಂದು ಭಾಷೆಯಾಗಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್‌ ತರಬೇತಿ ಕೋರ್ಸ್‌ ಅನ್ನು ಕೇಂದ್ರ/ರಾಜ್ಯದ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು. ಕನಿಷ್ಠ ಮೂರು ತಿಂಗಳು ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.

ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ ಕನ್ನಡವನ್ನು ಒಂದು ಭಾಷೆಯಾಗಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್‌ ತರಬೇತಿ ಕೋರ್ಸ್‌ ಅನ್ನು ಕೇಂದ್ರ/ರಾಜ್ಯದ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು. ಕನಿಷ್ಠ ಮೂರು ತಿಂಗಳು ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.

ವಾಟರ್‌ ಆಪರೇಟರ್‌ (ಪಂಪ್‌ ಚಾಲಕ) ಹುದ್ದೆಗೆ ಕನ್ನಡವನ್ನು ಒಂದು ಭಾಷೆಯಾಗಿ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು. ಜವಾನ, ಸ್ವಚ್ಚತಾಗಾರರು ಹುದ್ದೆಗೂ ಇದೇ ವಿದ್ಯಾರ್ಹತೆ ಬಯಸಲಾಗಿದೆ.

ಆಯ್ಕೆ ವಿಧಾನ ಹೇಗೆ?

ಅಭ್ಯರ್ಥಿಗಳು ನಿಗದಿತಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳು/ ಮೆರಿಟ್‌ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಹತೆಗಳನ್ನು ಅಧಿಸೂಚನೆ ಹೊರಡಿಸಿದ ಮುಂಚಿತವಾಗಿಯೇ ಪಡೆಯಬೇಕು. ಅಧಿಸೂಚನೆ ನೋಡಿಕೊಂಡು ಕಂಪ್ಯೂಟರ್‌ ಕೋರ್ಸ್‌ಗೆ ಸೇರುವಂತೆ ಇಲ್ಲ. ಈ ಹುದ್ದೆಗಳಿಗೆ ವೃತ್ತಿಪರ ಕೋರ್ಸ್‌ ಅಥವಾ ಇತರೆ ತತ್ಸಮಾನ ವಿದ್ಯಾರ್ಹತೆಯನ್ನು ಪರಗಣಿಸಲಾಗುವುದಿಲ್ಲ. ಜೆಒಸಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಗಳನ್ನೂ ಪರಿಗಣಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು ಮತ್ತು ಗರಿದಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯೃಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹತ್ತು ವರ್ಷ, ವಿಧವೆಯರಿಗೆ ಹತ್ತು ವರ್ಷ ಸಡಿಲಿಕೆ ನೀಡಲಾಗುತ್ತದೆ.

ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ

IPL_Entry_Point