Gruha Jyoti: ನೀವು ಮನೆ ಬದಲಿಸಿದ್ದೀರಾ, ಗೃಹಜ್ಯೋತಿ ಹಳೆ ಖಾತೆ ಸಂಖ್ಯೆ ಡಿ ಲಿಂಕ್‌ ಮಾಡಬಹುದು, ಇದಕ್ಕೆ ಹೀಗೆ ಮಾಡಿ-gruha jyoti karnataka power department gives option to d link house changed customers in gruha jyoti scheme ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Gruha Jyoti: ನೀವು ಮನೆ ಬದಲಿಸಿದ್ದೀರಾ, ಗೃಹಜ್ಯೋತಿ ಹಳೆ ಖಾತೆ ಸಂಖ್ಯೆ ಡಿ ಲಿಂಕ್‌ ಮಾಡಬಹುದು, ಇದಕ್ಕೆ ಹೀಗೆ ಮಾಡಿ

Gruha Jyoti: ನೀವು ಮನೆ ಬದಲಿಸಿದ್ದೀರಾ, ಗೃಹಜ್ಯೋತಿ ಹಳೆ ಖಾತೆ ಸಂಖ್ಯೆ ಡಿ ಲಿಂಕ್‌ ಮಾಡಬಹುದು, ಇದಕ್ಕೆ ಹೀಗೆ ಮಾಡಿ

ಕರ್ನಾಟಕದಲ್ಲಿ ಆರಂಭಿಸಲಾಗಿರುವ ಗೃಹ ಜ್ಯೋತಿ ಯೋಜನೆ( Gruha jyoti) ಗೆ ಒಂದು ವರ್ಷ ತುಂಬಿದೆ. ಈಗ ಮನೆ ಬದಲಾಯಿಸಿದವರು ಡಿ ಲಿಂಕ್‌ ಮಾಡಲು ಅವಕಾಶ ಕೊಡಲಾಗಿದೆ.

ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಒಂದು ವರ್ಷ ಪೂರೈಸಿದೆ.
ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆ ಒಂದು ವರ್ಷ ಪೂರೈಸಿದೆ.

ಬೆಂಗಳೂರು: ನೀವು ಮನೆ ಬದಲಾವಣೆ ಮಾಡಿದ್ದರೂ ಹೊಸ ಮನೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಪಯೋಗ ಸಿಗುತ್ತಿಲ್ಲವೇ. ಹಳೆಯ ಮನೆಯಲ್ಲಿದ್ದಾಗ ಪಡೆದಿದ್ದಾ ಗೃಹಜ್ಯೋತಿ ಯೋಜನೆಯ ಅಲ್ಲಿನ ಖಾತೆಯನ್ನು ಡಿ ಲಿಂಕ್‌ ಮಾಡಬೇಕೇ. ಇದಕ್ಕಾಗಿ ಕರ್ನಾಟಕ ಇಂಧನ ಇಲಾಖೆಯೂ ಅವಕಾಶವನ್ನು ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿದ್ದ ಗೃಹಜ್ಯೋತಿ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಇದೇ ಸಮಯದಲ್ಲಿ ಹಲವಾರು ಸುಧಾರಣೆಗಳನ್ನು ಇಂಧನ ಇಲಾಖೆ ಗೃಹಜ್ಯೋತಿ ಯೋಜನೆಯಡಿ ಮಾಡಿದೆ. ಅದರಲ್ಲಿ ಹಳೆಯ ಮನೆಗಳ ಖಾತೆಗಳ ಡಿ ಲಿಂಕ್‌ ಕೂಡ ಒಂದು.

ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.

ಗೃಹ ಜ್ಯೋತಿಗೆ ಒಂದು ವರ್ಷ ಸಂದ ಸಂದರ್ಭದಲ್ಲಿ ಇಂಧನ ಇಲಾಖೆ ಈ ಪ್ರಕಟಣೆ ಹೊರಡಿಸಿದ್ದು. ಇದರಲ್ಲಿ ಪ್ರಮುಖವಾಗಿ ಡಿ ಲಿಂಕ್‌ ಕುರಿತು ಉಲ್ಲೇಖಿಸಲಾಗಿದೆ.

ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು ಸೇವಾ ಸಿಂಧು ಪೋರ್ಟಲ್‌ ಮೂಲಕ ಬದಲಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೋಂದಣಿ ಮಾಡಿಸಕೊಂಡಿರುವ ಗ್ರಾಹಕರ https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.

ನೀವು ಅದೇ ಊರಿನಲ್ಲಿ ಮನೆ ಬದಲಿಸಿದ್ದರೆ, ಅಥವಾ ಊರನ್ನೇ ಬದಲಿಸಿದ್ದರೆ ಆಧಾರ್‌ ನಂಬರ್‌ ಜತೆ ಲಿಂಕ್‌ ಆಗಿರುವ ಆರ್‌.ಆರ್‌. ನಂಬರ್‌ ವಿವರ ಪರಿಶೀಲಿಸಿ ಡಿ-ಲಿಂಕ್‌ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್‌ ಜತೆ ಲಿಂಕ್‌ ಆಗಿರದ ಆರ್‌ .ಆರ್‌. ನಂಬರ್‌ಗೆ ಲಿಂಕ್‌ ಮಾಡಲು ಅವಕಾಶವಿದೆ. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್‌ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎನ್ನುವುದು ಅಧಿಕಾರಿಗಳು ನೀಡಿರುವ ವಿವರಣೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆ ಡಿ-ಲಿಂಕ್‌ಗೆ ಅವಕಾಶ ಕಲ್ಪಿಸಿಕೊಡುವಂತೆ ಗ್ರಾಹಕ ಬೇಡಿಕೆಯಿತ್ತು. ಈಗ ವೆಬ್‌ಸೈಟ್‌ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವ ಡಿ-ಲಿಂಕ್‌ಗೆ ಇದ್ದ ತಾಂತ್ರಿಕ ತೊಂದರೆಯು ನಿವಾರಣೆಯಾಗಿದ್ದು, , ಅದಕ್ಕೆ ಸ್ಪಂದಿಸಿ ಈ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಡಲಿದೆ. ಗೊಂದಲ ಇದ್ದವರು ಸಮೀಪದ ಬೆಸ್ಕಾಂ ಕಚೇರಿಗಳಿಗೆ ಭೇಟಿ ನೀಡಿದರೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದ 1.56 ಕೋಟಿ ಗ್ರಾಹಕರಿಗೆ ಗೃಹ ಜ್ಯೋತಿ ಯೋಜನೆಯ ಲಾಭ ದೊರೆತಿದೆ. ಇದರಲ್ಲಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ವಿದ್ಯುತ್‌ ಬಿಲ್‌ಗೆಂದು ಪಾವತಿಸಬೇಕಾಗಿದ್ದ ಹಣವನ್ನು ಮಕ್ಕಳ ಶಿಕ್ಷಣ, ಹಿರಿಯರ ಔಷಧೋಪಚಾರ, ಮನೆಯ ಇತರೆ ಖರ್ಚುಗಳಿಗೆ ಬಳಸಿರುವುದಾಗಿ ಹೇಳಿದ್ದು, ಅವರ ಬದುಕಿಗೆ ಗೃಹಜ್ಯೋತಿ ಯೋಜನೆ ಆಸರೆಯಾಗಿದ್ದು ಖುಷಿಯ ವಿಚಾರ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ನುಡಿದಂತೆ ನಡೆದಿದ್ದೇವೆ ಎನ್ನುವ ಸಾರ್ಥಕ ಭಾವ ನಮಗಂತೂ ಇದೆ. ಗೃಹಲಕ್ಷ್ಮಿ ಯೋಜನೆಯಡಿ, ಡಿಲಿಂಕ್‌ ಸೌಲಭ್ಯ ಬೇಕೆಂದು ಜನರ ಕೋರಿಕೆ ಒಂದು ವರ್ಷದಿಂದೂ ಇತ್ತು. ಈಗ ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಿ, ಜನತೆ ಈ ಸೌಲಭ್ಯ ಒದಗಿಸಲಾಗಿದ್ದು. ಇದನ್ನು ಬಳಸಿಕೊಳ್ಳಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

2024ರ ಜೂನ್‌ವರೆಗೆ ಗೃಹ ಜ್ಯೋತಿ ಯೋಜನೆಡಿ 1.67 ಕೋಟಿ ಒಟ್ಟು ನೋಂದಣಿ ಮಾಡಿಸಿಕೊಂಡಿದ್ದು, ಇದರಲ್ಲಿ ಫಲಾನುಭವಿಗಳ ಪ್ರಮಾಣವೇ 1.56 ಕೋಟಿ ಯಷ್ಟಿದೆ.

ಗೃಹ ಜ್ಯೋತಿ ಯೋಜನೆಯಡಿ 2023 ಆಗಸ್ಟ್ ರಿಂದ 2024 ಜೂನ್‌ವರೆಗೆ ಕರ್ನಾಟಕ ಸರ್ಕಾರ ಒಟ್ಟು ಸಬ್ಸಿಡಿ-8239 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವರು ವಿವರಿಸಿದ್ದಾರೆ.

*ಡಿ-ಲಿಂಕ್‌ ಹೀಗೆ ಮಾಡಿ

  • ಮೊದಲು ಸೇವಾ ಸಿಂಧು ಪೋರ್ಟಲ್‌ ಪ್ರವೇಶಿಸಿ
  • ಅಲ್ಲಿ ಗೃಹಜ್ಯೋತಿ ಯೋಜನೆ ಕ್ಲಿಕ್‌ ಮಾಡಿ
  • ನಿಮ್ಮ ಹಳೆಯ ಆರ್‌ಆರ್‌ ಸಂಖ್ಯೆಯನ್ನು ನಮೂದಿಸಿ
  • ಆನಂತರ ಅಲ್ಲಿ ಡಿ ಲಿಂಕ್‌ ಆಪ್ಶನ್‌ ಒತ್ತಿ
  • ಹೊಸ ಮನೆಯ ಆರ್‌ಆರ್‌ ನಂಬರ್‌ ನೀಡಿ
  • ಗೃಹ ಜ್ಯೋತಿಯ ನಿಮ್ಮ ಖಾತೆ ಅಪ್ಡೇಟ್‌ ಆಗಲಿದೆ