Gruha Lakshmi: ನಿಮ್ಮ ಖಾತೆಗೆ ಗೃಹಲಕ್ಷ್ಮಿ2 ತಿಂಗಳ ಹಣ ಬಂತೇ ಪರೀಕ್ಷಿಸಿಕೊಳ್ಳಿ, ಗ್ಯಾರಂಟಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಗೃಹಲಕ್ಷ್ಮಿಯರ ಎರಡು ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡಿದೆ.
ಬೆಂಗಳೂರು: ಚುನಾವಣೆ ಸೇರಿದಂತೆ ನಾನಾ ಕಾರಣಗಳಿಂದ ಕರ್ನಾಟಕದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ಬಿಡುಗಡೆ ಆಗಿರಲೇ ಇಲ್ಲ. ಅದೂ ಎರಡು ತಿಂಗಳಿನಿಂದ ಹಣ ಬಿಡುಗಡೆಯಾಗದೇ ಫಲಾನುಭವಿಗಳು ಇಂದು ಬಿಡುಗಡೆಯಾಗಬಹುದು ಇಲ್ಲವೇ ನಾಳೆ ಬರಬಹುದು ಎಂದುಕೊಂಡಿದ್ದರು. ಆದರೆ ನಾನಾ ಕಾರಣಗಳಿಂದ ಅದು ಮುಂದೆ ಹೋಗುತ್ತಲೇ ಇತ್ತು. ಈ ಯೋಜನೆ ನಿಂತೇ ಹೋಗುತ್ತದೆ ಎಂದು ಹಲವರು ಅಭಿಪ್ರಾಯಗಳನ್ನೂ ಹಂಚಿಕೊಂಡರು. ಲೋಕಸಭೆ ಚುನಾವಣೆ ಮುಗಿದಿದ್ದರಿಂದ ಗೃಹ ಲಕ್ಷ್ಮಿಯರ ಖಾತೆಗೆ ಹಣ ಬರುವುದಿಲ್ಲ ಎನ್ನುವ ಅಭಿಪ್ರಾಯಗಳೂ ಕೇಳಿ ಬಂದವು. ಆದರೆ ಸರ್ಕಾರ ಸದ್ಯವೇ ಗೃಹಲಕ್ಷ್ಮಿಗೆ ಮೀಸಲಿಟ್ಟ ಅನುದಾನ ಬಿಡುಗಡೆಯಾಗಲಿದೆ. ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ಈಗ ಆ ಹಣ ಬಿಡುಗಡೆ ದಿನ ಬಂದಿದೆ.
̧ಮಂಡ್ಯದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಇಂದೇ ಗೃಹಲಕ್ಷ್ಮಿ ಯೋಜನೆ ಹಣ. ಬಿಡುಗಡೆಯಾಗಲಿದ್ದು, ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಂದೇ ಜಮಾ ಮಾಡಲಾಗುವುದು. ಎರಡು ತಿಂಗಳ ಹಣ ಇಂದು ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಹಣ ಕಳೆದ ಎರಡು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮಾವಣೆ ಮಾಡಿರಲಿಲ್ಲ. ಈ ಕಾರಣದಿಂದಾಗಿ ಮನೆ ಯಜಮಾನಿಯರು ಸರ್ಕಾರದ ವಿರುದ್ಧ ಬೇಸರ ಕೂಡಗೊಂಡಿದ್ದರು. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಹೇಳಿಕೆ ಫಲಾನುಭವಿಗಳ ಮುಖದಲ್ಲಿ ಖುಷಿ ತರಿಸಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಇಂದಿನಿಂದ ಹಣ ಜಮಾವಣೆ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣದಿಂದ ಜೂನ್ ಮತ್ತು ಜುಲೈ ಎರಡು ತಿಂಗಳ ಹಣ ಜಮೆ ಆಗಿರಲಿಲ್ಲ. ಇವತ್ತಿನಿಂದ ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ. ಒಂದು ಕೋಟಿ ಗೂ. ಅಧಿಕ ಫಲಾನುಭವಿಗಳಿಗೆ ಎರಡು ತಿಂಗಳಂತೆ ತಲಾ ನಾಲ್ಕು ಸಾವಿರ ರೂ. ಖಾಎಗೆ ಜಮೆ ಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಲೆ ಪಾವತಿ ಮಾಡಲಾಗಿತ್ತು. ಆದರೆ, ತಾಂತ್ರಿಕ ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿ ಬಾಕಿ ಉಳಿದಿತ್ತು. ಈ ಹಣ ಇಂದು ಜಮಾವಣೆಯಾಗಲಿದೆ. ಗೃಹಲಕ್ಷ್ಮಿ ಹಣ ನೇರ ಲಾಭ ವರ್ಗಾವಣೆ (DBT) ಮೂಲಕ ಮನೆಯ ಯಜಮಾನಿ ಖಾತೆಗೆ ಸೇರಲಿದೆ. ಈಗಾಗಲೆ 10 ತಿಂಗಳ ಹಣ ನೀಡಲಾಗಿದೆ. ಒಟ್ಟು 20 ಸಾವಿರ ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ಎರಡು ತಿಂಗಳ ಹಣ ಅಂದರೆ ಒಟ್ಟು 4 ಸಾವಿರ ರೂ. ಅನ್ನು ಫಲಾನುಭವಿಗಳ ಖಾತೆಗೆ ಬರಲಿದೆ.
ಹೀಗೆ ಪರೀಕ್ಷಿಸಿಕೊಳ್ಳಿ
- ಪಾಸ್ ಬುಕ್ ಅನ್ನು ನಿಗದಿತ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ
- ನೀವು ನೀಡಿರುವ ಬ್ಯಾಂಕ್ ಖಾತೆ ಪರಿಶೀಲಿಸಿ
- ಅಲ್ಲಿ ಹಣ ಜಮೆಯಾಗಿರುವ ವಿವರ ಸಿಗಲಿದೆ
- ಎಸ್‌ಎಂಎಸ್ ಸೇವೆ ಬಳಸಿಕೊಂಡಿದ್ದರೆ ಅಲ್ಲಿಗೂ ಮಾಹಿತಿ ಬರಲಿದೆ
- ನಿಮ್ಮ ಬ್ಯಾಂಕ್ ಶಾಖೆಯಲ್ಲಿಯೇ ನಿಮಗೆ ಮಾಹಿತಿ ಸಿಗಲಿದೆ
*ಎರಡು ದಿನದ ನಂತರವೂ ಹಣ ಬಂದಿಲ್ಲ ಎಂದರೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಸಿ
ವಿಭಾಗ