ಕನ್ನಡ ಸುದ್ದಿ  /  ಕರ್ನಾಟಕ  /  Gulbarga Result: ಕಲಬುರಗಿಯಲ್ಲಿ ಮಾವನ ಸೋಲಿನ ಸೇಡು ತೀರಿಸಿಕೊಂಡ ಅಳಿಯ; ರಾಧಾಕೃಷ್ಣ ದೊಡ್ಡಮನಿಗೆ ಗೆಲುವು, ಬಿಜೆಪಿಯ ಉಮೇಶ ಜಾಧವ್‌ಗೆ ಸೋಲು

Gulbarga Result: ಕಲಬುರಗಿಯಲ್ಲಿ ಮಾವನ ಸೋಲಿನ ಸೇಡು ತೀರಿಸಿಕೊಂಡ ಅಳಿಯ; ರಾಧಾಕೃಷ್ಣ ದೊಡ್ಡಮನಿಗೆ ಗೆಲುವು, ಬಿಜೆಪಿಯ ಉಮೇಶ ಜಾಧವ್‌ಗೆ ಸೋಲು

ಕಲಬುರಗಿ ಲೋಕಸಭಾ ಚುನಾವಣಾ ಫಲಿತಾಂಶ 2024: ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನಾ ಖರ್ಗೆಯ ಅಳಿಯ ರಾಧಾಕೃಷ್ಣ ದೊಡ್ಡಮನಿ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ. ಬಿಜೆಪಿಯ ಉಮೇಶ್‌ ಜಿ ಜಾಧವ್‌ಗೆ ಸೋಲಾಗಿದೆ. Gulbarga Lok Sabha MP Election 2024 Result.

ಕಲಬುರಗಿ ಲೋಕಸಭಾ ಚುನಾವಣಾ ಫಲಿತಾಂಶ 2024
ಕಲಬುರಗಿ ಲೋಕಸಭಾ ಚುನಾವಣಾ ಫಲಿತಾಂಶ 2024

ಬೆಂಗಳೂರು: ಕೇಂದ್ರ ಸರಕಾರದ ಮುಂದಿನ ಪ್ರಧಾನಿ ಯಾರು ಎಂದು ನಿರ್ಧರಿಸುವ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆ 2024ರ ಮತಎಣಿಕೆ ಚುರುಕಾಗಿ ಸಾಗಿದೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Gulbarga Lok Sabha MP Election 2024 Result) ಕಲ್ಯಾಣ ಕರ್ನಾಟಕದ ಗುಲ್ಬರ್ಗಾ ಮೀಸಲು ಕ್ಷೇತ್ರದ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ವರ್ಷ ಡಾ. ಉಮೇಶ್‌ ಜಾಧವ್‌ (Umesh G Jadhav) ಇಲ್ಲಿ ಗೆಲುವಿನ ನಗೆ ಬೀರಿದ್ದರು, ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದ್ದರು. ಇದು ಮಲ್ಲಿಕಾರ್ಜುನಾ ಖರ್ಗೆಗೆ ದೊಡ್ಡ ಹಿನ್ನಡೆಯಾಗಿತ್ತು. ಈ ಬಾರಿ ಖರ್ಗೆ ತನ್ನ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna doddamani) ಅವರನ್ನು ಕಣಕ್ಕೆ ಇಳಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿರುವ ಕಾರಣ ಬಿಜೆಪಿ ಧೈರ್ಯದಿಂದ ಜಾಧವ್‌ ಅವರನ್ನು ಕಣಕ್ಕೆ ಇಳಿಸಿತ್ತು. ಖರ್ಗೆಗೆ ಇದು ಪ್ರತಿಷ್ಠೆಯ ವಿಷಯವಾಗಿರುವುದರಿಂದ ತನ್ನ ಅಳಿಯನನ್ನು ಕಣಕ್ಕೆ ಇಳಿಸಿ ಸಾಕಷ್ಟು ಪ್ರಚಾರ ನಡೆಸಿತ್ತು.

ಟ್ರೆಂಡಿಂಗ್​ ಸುದ್ದಿ

ಗುಲ್ಬರ್ಗಾ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಗುಲ್ಬರ್ಗಾ ಲೋಕಸಭಾ ಕ್ಷೇತ್ರ

ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್‌):  273291 ಮತಗಳು

ಡಾ. ಉಮೇಶ್‌ ಜಾಧವ್‌ (ಬಿಜೆಪಿ): 259677 ಮತಗಳು

ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದ ರಾಧಾಕೃಷ್ಣ ದೊಡ್ಡಮನಿ ಪರಿಚಯ

ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನಾ ಖರ್ಗೆ ಅಳಿಯ. 2024ರ ಲೋಕಸಭೆ ಚುನಾವಣೆಗೆ ಖರ್ಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರೂ ತಮ್ಮ ಅಳಿಯನನ್ನು ಖರ್ಗೆ ಕಣಕ್ಕೆ ಇಳಿಸಿದ್ದರು. ಖರ್ಗೆ 2009 ಮತ್ತು 2014ರಲ್ಲಿ ಗುಲ್ಬರ್ಗ (ಕಲಬುರಗಿ) ಕ್ಷೇತ್ರದಿಂದ ಗೆದ್ದಿದ್ದರು. ಆದರೆ, 2019ರಲ್ಲಿ ಅವರು ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ 95 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. 2024ರ ಲೋಕಸಭೆ ಚುನಾವಣೆಗೆ ಖರ್ಗೆ ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹಗಳ ನಡುವೆ ದೊಡ್ಡಮನಿ ಅವರ ನಾಮಪತ್ರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಅಧ್ಯಕ್ಷರು 2009 ಮತ್ತು 2014ರಲ್ಲಿ ಗುಲ್ಬರ್ಗ (ಕಲಬುರಗಿ) ಕ್ಷೇತ್ರದಿಂದ ಗೆದ್ದಿದ್ದರು. ಆದರೆ, 2019ರಲ್ಲಿ ಅವರು ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಹೆಚ್ಚು ಅಂತರದಿಂದ ಸೋತಿದ್ದರು. ರಾಧಾಕೃಷ್ಣ ದೊಡ್ಡಮನಿ ಶೈಕ್ಷಣಿಕ ಕ್ಷೇತ್ರದಿಂದ ಬಂದವರು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ವಿಟಾಸ್ ಇನ್ವೆಸ್ಟ್‌ಮೆಂಟ್ಸ್, ಗ್ರಾವಿಟಾಸ್ ಎಸ್ಟೇಟ್ಸ್, ಟ್ರಿಪಲ್-ಜೆಮ್ ಪಾಲಿಸಾಕ್ಸ್ ಮತ್ತು ಆರ್‌ಕೆ ಪಾಲಿಸಾಕ್ಸ್ ಸೇರಿದಂತೆ ಹಲವಾರು ಕಂಪನಿಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಸೋತ ಉಮೇಶ್‌ ಜಾಧವ್‌ ಪರಿಚಯ

ಡಾ . ಉಮೇಶ್ ಗೋಪಾಲದೇವ್ ಜಾಧವ್ ಮೂಲತಃ ಕಾಂಗ್ರೆಸಿಗರು. 2019ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಬಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯನ್ನು ಮಣಿಸಿ ಗೆಲುವು ಪಡೆದಿದ್ದರು. ಕಲಬುರಗಿ ಮೂಲದ ಇವರು ಡಾಕ್ಟರ್‌ ಆಗಿದ್ದರು. 1991ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಜನರಲ್ ಸರ್ಜರಿಯಲ್ಲಿ ತಮ್ಮ ಮಾಸ್ಟರ್ ಆಫ್ ಸರ್ಜರಿ ಶಿಕ್ಷಣ ಪಡೆದಿದ್ದಾರೆ. 2013-18ರವೆಗೆ ಚಿಂಚೋಳಿಯಿಂದ ವಿಧಾನಸಭಾ ಸದಸ್ಯರಾಗಿದ್ದರು. ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ, ವಿಧಾನಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಚುನಾವಣಾ ಕಣ:  ಗುಲ್ಬರ್ಗಾ ಲೋಕಸಭಾ ಕ್ಷೇತ್ರ

ಗುರ್ಲರ್ಗಾದ ಹೆಸರು ಕಲಬುರಗಿ ಎಂದು ಬದಲಾಗಿದ್ದರೂ ಲೋಕಸಭೆ ಕ್ಷೇತ್ರದ ಹೆಸರು ಇನ್ನೂ "ಗುಲ್ಬರ್ಗಾ ಲೋಕಸಭಾ ಚುನಾವಣಾ ಕ್ಷೇತ್ರ" ಎಂದೇ ಇದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಗುಲ್ಬರ್ಗಾ ಕ್ಷೇತ್ರದಲ್ಲಿ ಮೊದಲ ಲೋಕಸಭಾ ಚುನಾವಣೆ 1951ರಲ್ಲಿ ನಡೆದಿತ್ತು. ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಗುಲಬರ್ಗಾ ದಕ್ಷಿಣ, ಗುಲಬರ್ಗಾ ಉತ್ತರ, ಗುಲಬರ್ಗಾ ಗ್ರಾಮೀಣ, ಸೇಡಂ ಮತ್ತು ಯಾದಗಿರಿ ಜಿಲ್ಲೆಯ ಗುರುಮಠಕಲ್ ಮುಂತಾದ ವಿಧಾನಸಭಾ ಕ್ಷೇತ್ರಗಳು ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಲೋಕಸಭಾ ಚುನಾವಣೆಯ ಎಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024