Coffee Board News: ಕಾಫಿ ಬೆಳಗಾರರಿಗೆ ಕೃಷಿ ಚಟುವಟಿಕೆ ಸಹಾಯಧನ ಪಡೆಯಲು ಅನುದಾನ ಬಿಡುಗಡೆ , ಏನೇನು ದಾಖಲೆ ಸಲ್ಲಿಸಬೇಕು ?
Coffee Growers ಭಾರತೀಯ ಕಾಫಿ ಮಂಡಳಿ( Coffee Board of India) 2024-25ನೇ ಸಾಲಿನ ಕಾಫಿ ಬೆಳೆಗಾರರ ಸಹಾಯಧನವನ್ನು ಪ್ರಕಟಿಸಿದೆ.
ಹಾಸನ: ಕರ್ನಾಟಕದ ಕಾಫಿ ಬೆಳೆಗಾರರು( Coffee Growers) 2024-25 ನೇ ಸಾಲಿಗೆ ಭಾರತೀಯ ಕಾಫಿ ಮಂಡಳಿ( Coffee Board) ವತಿಯಿಂದ ಕಾಫಿ ತೋಟದ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹಲವಾರು ಕಾರ್ಯಚಟುವಟಿಗಳನ್ನು ವಿಸ್ತರಣೆ ಮಾಡಲು ಸಹಾಯಧನದ ಅನುಮೋದನೆ ನೀಡಲಾಗಿದೆ. ಕಾಫಿ ಬೆಳೆಗಾರರ ತೋಟ, ಅವರು ಬೆಳೆಯುವ ಪರಿಮಾಣ,ಅರ್ಜಿ ಸಲ್ಲಿಸಿರುವ ವಿವರಗಳನ್ನು ಆಧರಿಸಿ ಸಹಾಯಧನವನ್ನು ಹಂತ ಹಂತವಾಗಿ ಕಾಫಿ ಮಂಡಳಿಯು ಬಿಡುಗಡೆ ಮಾಡಲಿದೆ. ಪ್ರತಿ ವರ್ಷ ಸಹಾಯಧನವನ್ನು ಮಂಡಳಿ ನೀಡಲಿದ್ದು, ಈ ಸಾಲಿನ ಸಹಾಯಧನದ ವಿವರವನ್ನು ಘೋಷಣೆ ಮಾಡಿದೆ. ಇದಕ್ಕಾಗಿ ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಸಹಿತ ವಿವಿಧ ಭಾಗಗಳ ಕಾಫೊ ಬೆಳಗಾರರು ನಿಗದಿತ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ 2024ರ ಸೆಪ್ಟೆಂಬರ್ 30 ಕಡೆಯ ದಿನವಾಗಿದೆ.
ಕಾಫಿ ಬೆಳಗಾರರು ಈ ಚಟುವಟಿಕೆಗಳಿಗೆ ಅನುದಾನ ಪಡೆಯಲು ಅರ್ಹರು.
1. ಕಾಫಿ ಮರುನಾಟಿ (Replantation)
2. ನೀರಾವರಿ ಯೋಜನೆಯಡಿ - ಕೆರೆ/ತೆರೆದಬಾವಿ/ರಿಂಗ್ ಬಾವಿ/ಸ್ಪ್ರಿಂಕ್ಲರ್ ಇರ್ರಿಗೇಷನ್ / ಹನಿ ನೀರಾವರಿ
3. ಕಾಫಿಗೋಡೌನ್ / ಕಾಫಿ ಕಣ /ಪಲ್ಪರ್ ಯುನಿಟ್ /Eco-pulper ಮೆಕಾನಿಕಲ್ ಡ್ರೈಯರ್/ಸೋಲಾರ್ ಟನೆಲ್ ಡ್ರೈಯರ್
4. ಬಿಳಿಕೊಂಡ ಕೊರಕದ ಹತೋಟಿ ಗಾಗಿ- Non-woven Fabric wraping material
5. ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಇತ್ಯಾದಿಗೆ ಅನುದಾನ ಪಡೆಯಬಹುದು ಕಾಫಿ ಮಂಡಳಿ ತಿಳಿಸಿದೆ.
ಇದನ್ನೂ ಓದಿರಿ: Coffee News: ಒಂದು ಕಾಲದ ಕಾಫಿ, ಕಾಳುಮೆಣಸಿನ ಬಳ್ಳಿ ಬೆಳೆ ಸಂಗಾತಿ ಸಿಲ್ವರ್ ಈಗ ಕಾಫಿ ತೋಟಗಳಿಂದ ಕಣ್ಮರೆ
ಈ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ದಿ ಪಡಿಸಲಿಚ್ಚಿಸುವ ಆರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ . ನಿಗದಿತ ದಿನದೊಳಗೆ ನೇರವಾಗಿಇಲ್ಲವೇ ಆನ್‌ಲೈನ್ ಮುಖಾಮತರ ಅರ್ಜಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ಅನುದಾನ ಯಾರೆಲ್ಲಾ ಪಡೆಯಬಹುದು
ಆರ್ಹತೆ : 25 ಹೆಕ್ಟೋರ್ (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಹರು. ಇವರೆಲ್ಲಾ ಅರ್ಜಿ ಸಲ್ಲಿಸಲು ಅವಕಾಶವಿದೆ
ಏನೆಲ್ಲಾ ದಾಖಲೆ ಬೇಕು
1. ಅರ್ಜಿದಾರರ ಫೋಟೋ
2. ಆಧಾರ್ ಕಾರ್ಡ್
3. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
4. 2024-25 ನೇ ಸಾಲಿನ ಪಹಣಿಗಳು
5. ಖಾತಾ ನಕಲು (katha extract)
6. ತೋಟದ ಅಂದಾಜು ನಕ್ಷೆ (Estate boundary sketch)
7. ಕ್ವೇಟೇಷನ್/ ಪ್ಲಾನ್ & ಎಸ್ಟಿಮೇಷನ್.
8. ಜಾತಿ ಪ್ರಮಾಣ ಪತ್ರ (SC/ST ಕಾಫಿ ಬೆಳೆಗಾರರಿಗೆ )
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಗೋಣಿಕೊಪ್ಪಲು ಕಾಫಿ ಮಂಡಳಿ ಸಂಪರ್ಕ ಅಧಿಕಾರಿಗಳುಮುಖಾರೀಬ್ ಡಿ. ಎಸ್ (ಮೊಬೈಲ್ ಸಂಖ್ಯೆ9449063057) ತಿಳಿಸಿದ್ದಾರೆ.