Breaking News: ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದ ಮಂಟಪ, ತಪ್ಪಿದ ಭಾರೀ ಅನಾಹುತ-hassan news ettinahole drinking water project inauguration stage collapsed before function kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದ ಮಂಟಪ, ತಪ್ಪಿದ ಭಾರೀ ಅನಾಹುತ

Breaking News: ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದ ಮಂಟಪ, ತಪ್ಪಿದ ಭಾರೀ ಅನಾಹುತ

Hassan News ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆಯಲ್ಲಿಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಂಟಪವೇ ಕುಸಿದು ಬಿದ್ದಿದೆ.

ಎತ್ತಿನ ಹೊಳೆಯಲ್ಲಿ ಕುಸಿದ ಬಿದ್ದ ಮಂಟಪ
ಎತ್ತಿನ ಹೊಳೆಯಲ್ಲಿ ಕುಸಿದ ಬಿದ್ದ ಮಂಟಪ

ಹಾಸನ: ದಶಕಗಳ ಕನಸಾಗಿ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಒಂದು ಕಡೆ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದು ಕಡೆ ಯೋಜನಾ ಸ್ಥಳದಲ್ಲಿ ಉದ್ಘಾಟನೆಗೆ ಸಿದ್ದಪಡಿಸಿದ್ದ ಮಂಟಪವೇ ಕುಸಿದು ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಗಣ್ಯರು ಉದ್ಘಾಟಿಸಬೇಕಾಗಿದ್ದ ಯೋಜನಾ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಮಂಟಪವನ್ನು ಕಾರ್ಯಕ್ರಮ ನಡೆಯುವ ಒಂದು ಗಂಟೆ ಮೊದಲೇ ಕುಸಿದು ಬಿದ್ದಿದೆ. ಕಾರ್ಯಕ್ರಮದ ವೇಳೆ ಇದು ನಡೆದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡುವ ಕಾರ್ಯಕ್ರಮವಿತ್ತು. ಅದಕ್ಕೆ ಭಾರೀ ಅಲಂಕಾರದೊಂದಿಗೆ ಉದ್ಘಾಟನಾ ಮಂಟಪ ಅಣಿಗೊಳಿಸಲಾಗಿತ್ತು. ಆದರೆ ಅಲ್ಲಿ ಗಟ್ಟಿ ನೆಲವಿಲ್ಲದೇ ವೇದಿಕೆ ಗಟ್ಟಿಯಾಗಿ ನಿಂತಿರಲಿಲ್ಲ.ಗಾಳಿಯೂ ಇದ್ದುದರಿಂದ ಏಕಾಏಕಿ ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಕೂಡಲೇ ಅಲ್ಲಿದ್ದ ವೇದಿಕೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿ ಇರುವ ಜಾಗದಲ್ಲೇ ವೇದಿಕೆ ಅಣಿಗೊಳಿಸಿದರು. ಆನಂತರ ಅಲ್ಲಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದರು.

ಕೋಲಾರ, ಚಿಕಗಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ದೊರೆಯಿತು.

ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ಇದಕ್ಕೂ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪೂಜಾ ವಿಧಿಗಳನ್ನು ಪೂರೈಸಿದರು.