ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬುಧವಾರ ಭಾರತಕ್ಕೆ ವಾಪಾಸಾಗುವ ನಿರೀಕ್ಷೆಯಿದೆ.

ಪ್ರಜ್ವಲ್‌ ರೇವಣ್ಣಗಾಗಿ ಕಾದಿರುವ ಪೊಲೀಸರು
ಪ್ರಜ್ವಲ್‌ ರೇವಣ್ಣಗಾಗಿ ಕಾದಿರುವ ಪೊಲೀಸರು

ಬೆಂಗಳೂರು: ಹಾಸನದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಪ್ರಕರಣ ದಾಖಲಾಗುವ ಮುನ್ನದೇ ದೇಶ ಬಿಟ್ಟು ಪರಾರಿಯಾಗಿದ್ದು, ಬುಧವಾರ ವಾಪಾಸಾಗುವ ಸಾಧ್ಯತೆಗಳು ದಟ್ಟವಾಗಿವೆ. ಹದಿನೇಳು ದಿನಗಳ ಹಿಂದೆಯೇ ಹೊರ ದೇಶಕ್ಕೆ ಹೋಗಿದ್ದ ರೇವಣ್ಣ ವಿರುದ್ದ ಪ್ರಕರಣ ದಾಖಲಾಗಿದ್ದವು. ಅವರ ವಿಚಾರಣೆಗೆ ಎಸ್‌ಐಟಿ ನೊಟೀಸ್‌ ಕೂಡ ಜಾರಿಗೊಳಿಸಿತ್ತು. ಆದರೂ ಸಮಯ ಕೇಳಿಕೊಂಡ ಪ್ರಜ್ವಲ್‌ ವಿಚಾರಣೆಗೆ ಬಂದಿರಲಿಲ್ಲ. ಆನಂತರ ಅವರ ವಿರುದ್ದ ಬ್ಲೂಕಾರ್ನರ್‌ ನೊಟೀಸ್‌ ಕೂಡ ಜಾರಿಯಾಗಿತ್ತು. ಈಗಾಗಲೇ ಇದೇ ಪ್ರಕರಣದಲ್ಲಿ ಅಪಹರಣ ಆರೋಪದಡಿ ಪ್ರಜ್ವಲ್‌ ತಂದೆ ರೇವಣ್ಣ ಬಂಧನವಾಗಿತ್ತು. ಅವರಿಗೆ ಜಾಮೀನು ನೀಡಿ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಆಗಮಿಸಬಹುದು ಎನ್ನುವ ಚರ್ಚೆಗಳು ನಡೆದಿದ್ದು, ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಬೆಂಗಳೂರಿನ ವಿಮಾನ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಪ್ರಜ್ವಲ್‌ ರೇವಣ್ಣ ಅವರಿಗಾಗಿ ಕಾದಿದ್ದಾರೆ. ಬುಧವಾರ ಪ್ರಜ್ವಲ್‌ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಬಹುದು ಎನ್ನುವ ಮಾಹಿತಿ ಇರುವುದರಿಂದ ಅಲ್ಲಿಯೇ ವಶಕ್ಕೆ ಪಡೆಯಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿದೇಶಕ್ಕೆ ಹಾರಿದ್ದ ಪ್ರಜ್ವಲ್‌

ಕಳೆದ ತಿಂಗಳು 26ರಂದು ಲೋಕಸಭೆ ಚುನಾವಣೆ ದಕ್ಷಿಣ ಕರ್ನಾಟಕ ಭಾಗದಲ್ಲಿ ನಡೆಯಿತು. ಇದರಲ್ಲಿ ಹಾಸನ ಕ್ಷೇತ್ರವೂ ಸೇರಿತ್ತು. ಈ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಜ್ವಲ್‌ ಕಣದಲ್ಲಿದ್ದರು.ಮರು ದಿನವೇ ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಯ ಫ್ರಾಂಕಫರ್ಟ್‌ಗೆ ಪ್ರಜ್ವಲ್‌ ಹೋಗಿದ್ದಾರೆ ಎನ್ನುವ ಮಾಹಿತಿ ದೊರೆಯಿತು. ಇದಾದ ಮರು ದಿನವೇ ಪ್ರಜ್ವಲ್‌ ಹಾಗೂ ರೇವಣ್ಣ ವಿರುದ್ದ ಹೊಳೆ ನರಸೀಪುರದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಯಿತು. ಅಲ್ಲದೇ ಪ್ರಜ್ವಲ್‌ ವಿರುದ್ದ ಅತ್ಯಾಚಾರದ ಪ್ರಕರಣಗಳು ದಾಖಲಾದವು.

ಪ್ರಕರಣದ ಗಂಭೀರತೆ ಅರಿತ ಸರ್ಕಾರ ಇದಕ್ಕಾಗಿ ಎಸ್‌ಐಟಿ ತಂಡ ರಚಿಸಿತು. ಎಸ್‌ಐಟಿ ತಂಡ ತನಿಖೆಗೆ ಇಳಿಯುತ್ತದ್ದಂತೆ ಸಂತ್ರಸ್ತ ಮಹಿಳೆ ಅಪಹರಣಕ್ಕೆ ಯತ್ನಿಸಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಬಂಧಿಸಲಾಯಿತು.

ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನು ಸಿಗದೇ ಬಂಧನಕ್ಕೆ ಒಳಗಾಗಿದ್ದರು. ಅವರನ್ನು ಮಂಗಳವಾರವಷ್ಟೆ ಬಿಡುಗಡೆ ಮಾಡಲಾಗಿದೆ.

ಎಸ್‌ಐಟಿ ನೊಟೀಸ್‌

ಈ ನಡುವೆ ಪ್ರಜ್ವಲ್‌ಗೂ ಎಸ್‌ಐಟಿ ನೊಟೀಸ್‌ ಅನ್ನು ಏ. 30ಕ್ಕೆ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಒಂದು ವಾರದ ಸಮಯವನ್ನು ಅವರು ಕೋರಿಕೊಂಡಿದ್ದರು. ಆದರೆ ಪ್ರಜ್ವಲ್‌ ಬಂಧನಕ್ಕೂ ಒತ್ತಡ ತೀವ್ರಗೊಂಡಿತ್ತು. ಹೀಗಿದ್ದರೂ ಪ್ರಜ್ವಲ್‌ ದೇಶಗಳನ್ನು ಬದಲಿಸಿದರು ಎನ್ನುವ ಆರೋಪ ಕೇಳಿ ಬಂದರೂ ಅವರು ಹಿಂದುರಿಗಿರಲಿಲ್ಲ.

ಇದೇ ವೇಳೆ ಪ್ರಜ್ವಲ್‌ಗೂ ಎಸ್‌ಐಟಿ ನೊಟೀಸ್‌ ಅನ್ನು ಏ. 30ಕ್ಕೆ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಒಂದು ವಾರದ ಸಮಯವನ್ನು ಅವರು ಕೋರಿಕೊಂಡಿದ್ದರು. ಆದರೆ ಪ್ರಜ್ವಲ್‌ ಬಂಧನಕ್ಕೂ ಒತ್ತಡ ತೀವ್ರಗೊಂಡಿತ್ತು. ಹೀಗಿದ್ದರೂ ಪ್ರಜ್ವಲ್‌ ದೇಶಗಳನ್ನು ಬದಲಿಸಿದರು ಎನ್ನುವ ಆರೋಪ ಕೇಳಿ ಬಂದರೂ ಅವರು ಹಿಂದುರಿಗಿರಲಿಲ್ಲ.

ತಂದೆ ಬಿಡುಗಡೆ ನಂತರ

ಈ ನಡುವೆ ತಂದೆಯ ಬಂಧನ, ಪ್ರಕರಣದ ವಿಚಾರಣೆ, ಜಾಮೀನು ಅರ್ಜಿ ಬಾಕಿ ಇರುವಾಗಲೇ ಭಾರತಕ್ಕೆ ಬಂದರೆ ತೊಂದರೆಯಾಗಬಹುದು. ಕುಟುಂಬದವರಿಗೂ ಕಿರಿಕಿರಿಯಾಗಬಹುದು ಎಂದು ಕಾನೂನು ತಜ್ಞರ ಸಲಹೆ ಮೇರೆಗೆ ಪ್ರಜ್ವಲ್‌ ಹೊರ ದೇಶದಲ್ಲೇ ಉಳಿದರು. ಅವರ ತಂದೆಯ ಜಾಮೀನು ಅರ್ಜಿ ಪರಿಸ್ಥಿತಿ ನೋಡಿಕೊಂಡು ಮುಂದುವರೆಯುವ ತೀರ್ಮಾನ ಮಾಡಿದ್ದರು.

ಈಗ ರೇವಣ್ಣ ಅವರ ಬಿಡುಗಡೆಯಾಗಿ ಕೊಂಚ ನಿರಾಳತೆ ಸಿಕ್ಕಿದೆ. ಇದರಿಂದ ಈಗ ವಾಪಾಸಾಗಿ ತಾವೂ ಶರಣಾಗುವ ನಿರ್ಧಾರಕ್ಕೆ ಪ್ರಜ್ವಲ್‌ ಕಾನೂನು ತಜ್ಞರ ಸಲಹೆ ಮೇರೆಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಏನಿದೆ ಪ್ರಜ್ವಲ್‌ ಯೋಜನೆ

ರೇವಣ್ಣ ವಿರುದ್ದ ಮೊದಲ ಪ್ರಕರಣದಲ್ಲಿ ಪ್ರಬಲ ಆರೋಪ ಇರಲಿಲ್ಲ. ಆದರೆ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮೊಕದ್ದಮೆ ದಾಖಲಾಗಿದ್ದರಿಂದ ಬಂಧಿಸಲಾಗಿತ್ತು. ಆದರೆ ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣ, ಪೆನ್‌ಡ್ರೈವ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಅವರ ವಿರುದ್ದ ಗಂಭೀರ ಪ್ರಕರಣಗಳೇ ದಾಖಲಾಗಿವೆ. ಕಾನೂನು ಅಡೆತಡೆಗಳನ್ನು ಅವರು ಎದುರಿಸಬೇಕಾಗಿರುವುದರಿಂದ ಎಸ್‌ಐಟಿ ಮುಂದೆ ಹಾಜರಾಗುವ ತೀರ್ಮಾನಕ್ಕೆ ಬಂದಿದ್ದಾರೆ.

ತಂದೆಯವರ ಪ್ರಕರಣ ವಿಳಂಬವಾಗಿದ್ದರೆ ಮತ ಎಣಿಕೆವರೆಗೂ ಪ್ರಜ್ವಲ್‌ ತಲೆ ಮರೆಸಿಕೊಳ್ಳುವ ಯೋಚನೆ ಇತ್ತು. ಈಗ ವಿಳಂಬ ಮಾಡುವ ಬದಲು ಮುಂದಿನ ಎರಡು ವಾರ ವಿಚಾರಣೆ ಎದುರಿಸಿ ಜಾಮೀನಿಗೆ ಬೇಕಾದ ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ ಪ್ರಜ್ವಲ್‌ ಆಪ್ತ ಮೂಲಗಳು ಖಚಿತಪಡಿಸಿವೆ.

IPL_Entry_Point