Kannada News  /  Karnataka  /  Hassan News Man Dies By Alcohol Drinking Challenge In Holenarasipura Hasana Crime News In Kannada Mgb

ಅರ್ಧ ಗಂಟೆಯಲ್ಲಿ 10 ಪ್ಯಾಕೆಟ್ ನೈಂಟಿ ಕುಡಿಯೋ ಚಾಲೆಂಜ್​; ಎಣ್ಣೆ ಏಟಿಗೆ ಹಾಸನದ ವ್ಯಕ್ತಿ ಸಾವು

ಮದ್ಯ ಸೇವಿಸುವ ಚಾಲೆಂಜ್​​ಗೆ ವ್ಯಕ್ತಿ ಬಲಿ (ಸಾಂದರ್ಭಿಕ ಚಿತ್ರ)
ಮದ್ಯ ಸೇವಿಸುವ ಚಾಲೆಂಜ್​​ಗೆ ವ್ಯಕ್ತಿ ಬಲಿ (ಸಾಂದರ್ಭಿಕ ಚಿತ್ರ)

Hassan News: ಕೃಷ್ಣೇಗೌಡ ಎಂಬವರು ಇಬ್ಬರಿಗೂ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದರು. ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ತಿಮ್ಮೇಗೌಡ ಬಿದ್ದಿದ್ದಾರೆ. ತಿಮ್ಮೇಗೌಡ ವಾಂತಿ ಮಾಡುತ್ತಿದ್ದಂತೆಯೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಹಾಸನ : ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮದ್ಯ ಸೇವಿಸುವ ಚಾಲೆಂಜ್​​ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಮೃತ ವ್ಯಕ್ತಿಯನ್ನು ತಿಮ್ಮೇಗೌಡ (60) ಎಂದು ಗುರುತಿಸಲಾಗಿದೆ. ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ನಡೆದಿದೆ.

ಕೃಷ್ಣೇಗೌಡ ಎಂಬವರು ಇಬ್ಬರಿಗೂ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದರು. ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ತಿಮ್ಮೇಗೌಡ ಬಿದ್ದಿದ್ದಾರೆ. ತಿಮ್ಮೇಗೌಡ ವಾಂತಿ ಮಾಡುತ್ತಿದ್ದಂತೆಯೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಬಳಿಕ ತಿಮ್ಮೇಗೌಡನನ್ನು ಎತ್ತಿಕೊಂಡು ಬಂದು ಗ್ರಾಮಸ್ಥರು ಮನೆಯಲ್ಲಿ ಮಲಗಿಸಿದ್ದರು. ಆದರೆ ತಿಮ್ಮೇಗೌಡ ಸಾವನ್ನಪ್ಪಿದ್ದಾರೆ. ತಿಮ್ಮೇಗೌಡನ ಪುತ್ರಿ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.

ಘಟನೆ ಸಂಬಂಧ ತಿಮ್ಮೇಗೌಡ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೊಳೆನರಸೀಪುರ ನಗರ ಠಾಣೆ ಪೊಲೀಸರು ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.