ಕನ್ನಡ ಸುದ್ದಿ  /  Karnataka  /  Haveri Kannada Sahitya Sammelana 2023 From Tomorrow, Food Menu And Event Details

Kannada Sahitya Sammelana 2023: ನಾಳೆಯಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಸಾಹಿತ್ಯದ ರಸದೌತಣ, ಸಮೃದ್ಧ ಭೋಜನ

Kannada Sahitya Sammelana 2023: ನಾಳೆ ಬೆಳಗ್ಗೆಯಿಂದ ಜನವರಿ 8ರ ತನಕ ಸಾಹಿತ್ಯದ ರಸದೌತಣದ ಜತೆಗೆ ಉತ್ತರ ಕನ್ನಡ ಶೈಲಿಯ ಸಮೃದ್ಧ ಭೋಜನವೂ ಇರಲಿದೆ.

Kannada Sahitya Sammelana 2023: ನಾಳೆಯಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
Kannada Sahitya Sammelana 2023: ನಾಳೆಯಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ: ಏಲಕ್ಕಿ ನಾಡು ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ ಆರಂಭಗೊಳ್ಳಲಿದೆ. ಈಗಾಗಲೇ ರಾಜ್ಯದ ವಿವಿಧೆಡೆಯಿಂದ ಕನ್ನಡ ಸಾಹಿತ್ಯ ಪ್ರೇಮಿಗಳು ಹಾವೇರಿಯತ್ತ ಪ್ರಯಾಣ ಬೆಳೆಸಿದ್ದಾರೆ. ನಾಳೆ ಬೆಳಗ್ಗೆಯಿಂದ ಜನವರಿ 8ರ ತನಕ ಸಾಹಿತ್ಯದ ರಸದೌತಣದ ಜತೆಗೆ ಉತ್ತರ ಕನ್ನಡ ಶೈಲಿಯ ಸಮೃದ್ಧ ಭೋಜನವೂ ಇರಲಿದೆ.

ನಾಳೆ ಬೆಳಗ್ಗೆ ಏಳು ಗಂಟೆಯಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ. ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಪ್ರೊ. ದೊಡ್ಡರಂಗೇಗೌಡರನ್ನು ಭವ್ಯವಾದ ರಥದ ಮೂಲಕ ಮೆರವಣಿಗೆ ನಡೆಸಲಾಗುತ್ತದೆ. ಸುಮಾರು ಮೂರೂವರೆ ಕಿ.ಮೀ. ದೂರ ಮೆರವಣಿಗೆ ಮಾರ್ಗವಿರಲಿದ್ದು, ಕನ್ನಡ ಬಾವುಟಗಳಿಂದ ಮದುವಣಗಿತ್ತಿಯಿಂದ ಸಿಂಗಾರಗೊಂಡಿದೆ.

ಮೆರವಣಿಗೆ ಸಮಯದಲ್ಲಿ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ. ಜತೆಗೆ 90 ವಿವಿಧ ಕಲಾತಂಡಗಳ ಸಾವಿರಾರು ಜನರು ಈ ಮೆರವಣಿಗೆಗೆ ಹೊಸ ಮೆರುಗು ತರಲಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇಗುಲದಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಮಹಾತ್ಮಗಾಂಧಿ ರಸ್ತೆ, ನಗರಸಭೆ ಮೂಲಕ ಮುಖ್ಯರಸ್ತೆ ತಲುಪಿ ಬಳಿಕ ಸಮ್ಮೇಳನ ಸ್ಥಳದವರೆಗೂ ಈ ಮೆರವಣಿಗೆ ಸಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂತರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗಿನಿಂದ ವಿವಿಧ ಗೋಷ್ಠಿಗಳು ನಡೆಯಲಿದ್ದು, ಸಾಹಿತ್ಯ ಆಸಕ್ತರನ್ನು ತಣಿಸಲಿವೆ. ವಿವಿಧ ವೇದಿಕೆಗಳಲ್ಲಿ ಹಲವು ಗೋಷ್ಠಿಗಳು ನಡೆಯಲಿದ್ದು, ಆಸಕ್ತರು ಗೋಷ್ಠಿಗಳಲ್ಲಿ ಪಾಲ್ಗೊಳ್ಳಬಹುದು. ಪುಸ್ತಕ ಮಳಿಗೆಗಳು ಸೇರಿದಂತೆ ವಿವಿಧ ಮಳಿಗೆಗಳಿಗೂ ಭೇಟಿ ನೀಡಬಹುದು.

ಸಾಹಿತ್ಯ ಸಮ್ಮೇಳನದಲ್ಲಿ ಹೊಟ್ಟೆಗೂ ರಸದೌತಣ ಇರಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉತ್ತರ ಕರ್ನಾಟಕ ಶೈಲಿಯ ಅಡುಗೆ ಸುಮಾರು 4 ಸಾವಿರ ಬಾಣಸಿಗರಿಂದ ಸಿದ್ಧಪಡಿಸಲಾಗುತ್ತಿದೆ. ಮೂರು ದಿನದ ಸಾಹಿತ್ಯ ಸಮ್ಮೇಳನಕ್ಕೆ ನಾಲ್ಕರಿಂದ ಐದು ಲಕ್ಷ ಜನರು ಆಗಮಿಸುವ ನಿರೀಕ್ಷೆಗಳಿದ್ದು, ಆಹಾರ ಸಿದ್ಧವಾಗುತ್ತಿದೆ.

ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಸಿರಾ (ಕೇಸರಿಬಾತ್​) ಮತ್ತು ಬೆಲ್ಲದ ಟೀ . ಮಧ್ಯಾಹ್ನದ ಊಟಕ್ಕೆ ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಚಪಾತಿ, ವೈಟ್ ರೈಸ್, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ಮತ್ತು ಮೊಸರನ್ನ ಇರಲಿದೆ. ರಾತ್ರಿ ಊಟಕ್ಕೆ ಹೆಸರು ಬೇಳೆ ಪಾಯಸ, ಪುಳಿಯೋಗರೆ, ವೈಟ್ ರೈಸ್, ಸಾಂಬಾರ್ ಮತ್ತು ಉಪ್ಪಿನಕಾಯಿ ಇರಲಿದೆ. ಸಾಹಿತ್ಯಾಭಿಮಾನಿಗಳಿಗೆ ಮೂರು ದಿನವೂ ಬಗೆ ಬಗೆಯ ಊಟ ಉಪಚಾರ ದೊರಕಲಿದೆ.

ಪ್ರತಿ ದಿನ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸಮ್ಮೇಳನದ ಮೂರು ದಿನ ಕೂಡ ವಿವಿಧ ಬಗೆಯ ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಹೀಗಾಗಿ, ಸಾಹಿತ್ಯದ ಸವಿ ಜತೆಗೆ ಹೊಟ್ಟೆಗೂ ಸವಿ ಇರಲಿದೆ.

ನಾಳೆ 60 ಸಾವಿರ ಜನರಿಗೆ ಬೆಳಿಗ್ಗೆ ಉಪಹಾರ: ಉಪ್ಪಿಟ್ಟು, ಸೀರಾ, ಬೆಲ್ಲದ ಟೀ ಇರಲಿದೆ. ಮಧ್ಯಾಹ್ನ ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರು, ಉಪ್ಪಿನ ಕಾಯಿ, ಶೆಂಗಾ ಚಟ್ನಿ ಮತ್ತು ಮೊಸರು ಇರಲಿದೆ. ರಾತ್ರಿ ಊಟಕ್ಕೆ ಹೆಸರುಬೇಳೆ ಪಾಯಸ, ಪುಳಿಯೊಗರೆ, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿ ಇರಲಿದೆ.

ನಾಡಿದ್ದು, ಬೆಳಗ್ಗೆ ರವಾ ಉಂಡೆ, ವೆಜಿಟೆಬಲ್ ಪಲಾವ್, ಬೆಲ್ಲದ ಟೀ ಇರಲಿದೆ. ಮಧ್ಯಾಹ್ನ ಲಡಕಿಪಾಕ್, ಮಿಕ್ಸ್ ವೆಜಿಟೆಬಲ್, ಚಪಾತಿ, ವೈಟ್ ರೈಸ್, ಸಾಂಬಾರ್, ಬಿರಾಂಜಿ ರೈಸ್-ಮಂಡ್ಲಿ, ಉಪ್ಪಿನಕಾಯಿ, ಶೆಂಗಾ ಚಟ್ನಿ ಹಾಗೂ ಮೊಸರು ಇರಲಿದೆ. ರಾತ್ರಿ ಊಟಕ್ಕೆ ಶಾವಿಗೆ ಪಾಯಸಾ, ಬಿಸಿಬೆಲೆ ಭಾತ್, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿ ಇರಲಿದೆ.

ಜನವರಿ 8ರಂದು ಅಂದರೆ ಸಮ್ಮೇಳನದ ಕೊನೆಯ ದಿನ ಬೆಳಗ್ಗೆ ಮೈಸೂರ್ ಪಾಕ್, ವಾಂಗಿ ಭಾತ್, ಬೆಲ್ಲದ ಟೀ ಇರಲಿದೆ. ಮಧ್ಯಾಹ್ನ : ಮೋತಿ ಚೂರ್ ಲಾಡೂ, ಕಾಳ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರ, ಉಪ್ಪಿನಕಾಯಿ, ಶೆಂಗಾ ಚಟ್ನಿ ಮತ್ತು ಮೊಸರು ಇರಲಿದೆ. ರಾತ್ರಿ ಊಟಕ್ಕೆ ಗೋದಿ ಹುಗ್ಗಿ, ಚಿತ್ರಾನ್ನ, ವೈಟ್ ರೈಸ್, ಸಾಂಬಾರ್ ಮತ್ತು ಉಪ್ಪಿನಕಾಯಿ ಇರಲಿದೆ.

IPL_Entry_Point