ಕನ್ನಡ ಸುದ್ದಿ  /  ಕರ್ನಾಟಕ  /  Anger Effects: ಪದೇ ಪದೆ ಕೊಪಗೊಳ್ಳುತ್ತೀರಾ; ಈ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ

Anger Effects: ಪದೇ ಪದೆ ಕೊಪಗೊಳ್ಳುತ್ತೀರಾ; ಈ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ

ನೀವೇನಾದರೂ ಪದೇ ಪದೆ ಕೋಪಗೊಳ್ಳುತ್ತಿದ್ದರೆ ಖಿನ್ನತೆ, ಮನಸಿನ ಅಸ್ವಸ್ಥತೆ, ನಿದ್ರೆಯ ಕೊರತೆಯಂತಹ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಲು ಶುರು ಮಾಡುತ್ತವೆ. ನಿರಂತರ ಕೋಪಗೊಳ್ಳುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ, ಅದಕ್ಕೆ ಕಾರಣಗಳೇನು ಅನ್ನೋದರ ವಿವರ ಇಲ್ಲಿದೆ.

ಪದೇ ಪದೆ ಕೊಪಗೊಳ್ಳುತ್ತೀರಾ? ಈ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾವುವು ಆ ಆರೋಗ್ಯ ಸಮಸ್ಯೆಗಳು ಎಂಬುದನ್ನು ತಿಳಿಯಿರಿ.
ಪದೇ ಪದೆ ಕೊಪಗೊಳ್ಳುತ್ತೀರಾ? ಈ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾವುವು ಆ ಆರೋಗ್ಯ ಸಮಸ್ಯೆಗಳು ಎಂಬುದನ್ನು ತಿಳಿಯಿರಿ.

ಬೆಂಗಳೂರು: ಆರೋಗ್ಯವೇ (Health is Wealth) ಭಾಗ್ಯ. ಆರೋಗ್ಯವೊಂದು ಚೆನ್ನಾಗಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಆದರೂ ಬಹುತೇಕ ಜನರಲ್ಲಿನ ಕೆಲವೊಂದು ಅಭ್ಯಾಸಗಳು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಗೊತ್ತೇ ಇರುವುದಿಲ್ಲ. ಕೆಲವರಿಗೆ ಪದೇ ಪದೆ ಕೋಪಗೊಳ್ಳುವ ಅಭ್ಯಾಸ ಇರುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಕೋಪಿಸಿಕೊಳ್ಳುತ್ತಾರೆ. ತಮಗೆ ಇಷ್ಟವಾಗದವರನ್ನು ನೋಡಿದರೆ ಸಾಕು ಮುಖವನ್ನು ಸಿಂಡ್ರಿಸಿಕೊಳ್ಳುತ್ತಾರೆ. ಮನುಷ್ಯ ನಿರಂತರವಾಗಿ ಕೋಪ ಮಾಡಿಕೊಂಡರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಏನೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ವಿವರವಾಗಿ ಇಲ್ಲಿ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಕೋಪ ಆರೋಗ್ಯದ ಮೇಲೆ (Anger Effects on Health) ಹಲವಾರು ರೀತಿಯಲ್ಲಿ ಪರಿಣಾಮ ಬೀರರುತ್ತದೆ. ಶಾರೀರಿಕವಾಗಿ ಇದು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ರತ್ತದೊತ್ತಡ ಹಾಗೂ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಹೃದ್ರೋಗ ಹಾಗೂ ಪಾರ್ಶ್ವವಾಯುಗೂ ಕಾರಣವಾಗುತ್ತದೆ. ಕೋಪದಿಂದ ಹತಾಶೆಯ ಭಾವನೆಯನ್ನೂ ಉಂಟಾಗುತ್ತದೆ. ದೀರ್ಘಕಾಲದ ಕೋಪವು ದೇಹದಲ್ಲಿನ ರಕ್ಷಣಾ ವ್ಯವಸ್ಥೆಯನ್ನ ದುರ್ಬಲಗೊಳಿಸುತ್ತದೆ. ದೇಹದಲ್ಲಿನ ಸೋಂಕುಗಳು ಮತ್ತು ಕಾಯಿಲೆಗಳ ಹೆಚ್ಚಳಕ್ಕೂ ಒಂದು ರೀತಿಯಲ್ಲಿ ಕಾರಣವಾಗುತ್ತದೆ. ಆಸಿಡ್ ರಿಫ್ಲಕ್ಸ್ ಮತ್ತು ಕರುಳಿನ ಸಹಲಕ್ಷಣಗಳು (ಐಬಿಎಸ್) ನಂತಹ ಜೀರ್ವಕಾರಿ ಸಮಸ್ಯೆಗಳೂ ಕಾರಣವಾಗುವ ಬಹಳಷ್ಟು ಸಾಧ್ಯತೆಗಳು ಇರುತ್ತವೆ.

ಕೋಪದಿಂದ ಸಾಮಾಜಿಕ ಸಂಬಂಧಗಳು ಕೆಡುತ್ತವೆ. ಸಹೋದ್ಯೋಗಿಗಳು, ಸ್ನೇಹಿತರು, ಅಣ್ಣ ತಮ್ಮಂದಿರು, ಪ್ರೇಮಿಗಳು, ಗಂಡ ಹೆಂಡತಿ ಹಾಗೂ ಮಕ್ಕಳ ನಡುವಿನ ಸಂಬಂಧದ ಕೊರತೆಯನ್ನು ಕೋಪ ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲದೆ, ಕೋಪ ಇರುವ ವ್ಯಕ್ತಿಯನ್ನು ಪ್ರತ್ಯೇಕವಾಗಿಸುತ್ತದೆ. ಏಕಾಂಗಿಯಾಗಿ ಇರುವಂತೆ ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಮಾನಸಿಕ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಕೋಪವು ಏನೆಲ್ಲಾ ನ್ಯೂನತೆಗಳಿಗೆ ಕಾರಣವಾಗುತ್ತದೆ ಅನ್ನೋದನ್ನು ಇಲ್ಲಿ ತಿಳಿಯೋಣ.

ಪದೇ ಪೇದೆ ಕೋಪ ಬರಲು ಏನು ಕಾರಣ?

ಮೆಗ್ನೀಸಿಯಮ್ ಕೊರತೆ: ನರಗಳ ಕಾರ್ಯ ಮತ್ತು ಮೂಡ್ ನಿಯಂತ್ರಣಕ್ಕೆ ಮೇಗ್ನಿಸಿಯಮ್ ನಿರ್ಣಾಯಕವಾಗುತ್ತದೆ. ಇದರ ಕೊರತೆ ಹೆಚ್ಚಾದಾಗ ಕಿರಿಕಿರಿ, ಆತಂಕ ಹಾಗೂ ಒತ್ತಡದಂತ ಸಮಸ್ಯೆಗಳಿಗೆ ಕಾಣಬಹುದು.

ವಿಟಮಿನ್ ಡಿ ಕೊರತೆ: ಕಡಿಮೆ ಮಟ್ಟದ ವಿಟಮಿನ್ ಡಿ ಕೊರತೆಯಿಂದ ಖಿನ್ನತೆ ಹಾಗೂ ಆತಂಕ ಸೇರಿದಂತೆ ಮಾನಸಿಕ ನೆಮ್ಮದಿಯ ಕೊರತೆಯಾಗುತ್ತದೆ. ಭಾವನಾತ್ಮಕ ಸ್ಥಿತಿಸ್ಥಾಪಕತ್ವನ್ನು ಕಡಿಮೆ ಮಾಡಬಹುದು. ಮಾನಸಿಕ ಆರೋಗ್ಯಕ್ಕೆ ಪ್ರಮುಖವಾಗಿರುವ ರಂಜಕ ಸೇರಿದಂತೆ ವಿವಿಧ ಕಾರ್ಯಗಳಿಗೆ ವಿಟಮಿನ್ ಡಿ ಅತ್ಯಗತ್ಯವಾಗಿದೆ.

ಒಮೆಗಾ 3 ಕೊಬ್ಬಿನಾಮ್ಲ ಕೊರತೆ: ಮೀನಿನ ಎಣ್ಣೆ ಮತ್ತು ಅಗಸೆಬೀಜದಲ್ಲಿ ಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ. ಒಮೆಗಾ -3ಗಳ ಕೊರತೆಯು ಆಕ್ರಮಣಶೀಲತೆ ಹಾಗೂ ಕೋಪವನ್ನು ಒಳಗೊಂಡ ಮೂಡ್‌ಗೆ ಕಾರಣವಾಗುತ್ತವೆ. ಒಮೆಗಾ-3 ಮೆದುಳಿನ ಕಾರ್ಯವನ್ನು ಸುಧಾರಿಸುವ ಜೊತೆಗೆ ಉರಿಯೂತವನ್ನು ಕಡಿಮಮೆ ಮಾಡಿ ಸಕಾರಾತ್ಮಕ ಮನಸ್ಥಿತಿಯನ್ನ ಉತ್ತೇಜಿಸುತ್ತದೆ.

ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ: ಬಿ ಜೀವಸ್ತವಗಳು, ವಿಶೇಷವಾಗಿ ಬಿ6, ಬಿ12 ಹಾಗೂ ಫೋಲೇಟ್‌ ಮೆದುಳಿ ಕಾರ್ಯ ಮತ್ತು ನರಪ್ರೇಕ್ಷಕ ಉತ್ಪಾದನೆಯ ಪ್ರಮುಖ ಪಾತ್ರವಹಿಸುತ್ತವೆ. ಈ ವಿಟಮಿನ್‌ಗಳ ಕೊರತೆಯಿಂದಲೂ ಮನುಷ್ಯನಿಗೆ ಕಿರಿಕಿರಿ ಹಾಗೂ ಪದೇ ಪದೆ ಕೊಪಗೊಳ್ಳುತ್ತಾನೆ.

ಕಬ್ಬಿಣದ ಕೊರತೆ: ಮೆದುಳಿಗೆ ಆಮ್ಮಜನಕವನ್ನು ಪೂರೈಸುವ ಹಿಮೋಗ್ಲೋಬಿನ್ ಉತ್ಪಾದನೆಗೆ ಕಬ್ಬಿಣದ ಅವಶ್ಯಕತೆ ಇರುತ್ತದೆ. ಮನುಷ್ಯನ ದೇಹದಲ್ಲಿನ ಕಡಿಮೆ ಕಬ್ಬಿಣದ ಮಟ್ಟ ಆಯಾಸ, ಖಿನ್ನತೆ ಹಾಗೂ ಕೋಪದ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಸಸ್ಯಹಾರಿಗಳಿಗೆ ಕಬ್ಬಿಣದ ಅವಶ್ಯಕತೆ ಹೆಚ್ಚಿರುತ್ತದೆ.

ಸಿರೊಟೋನಿನ್ ಅಸಮತೋನ: ಸಿರೊಟೋನಿನ್ ಒಂದು ನರಪ್ರೇಕ್ಷಕವಾಗಿದ್ದು, ಇದು ಮನಸ್ಥಿತಿ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುತ್ತದೆ. ಕಡಿಮೆ ಮಟ್ಟದ ಸಿರೊಟೋನಿನ್ ಹೆಚ್ಚಾಗಿ ಆಕ್ರಣಮಶೀಲತನೆ ಮತ್ತು ಕೋಪಕ್ಕೆ ಕಾರಣವಾಗುತ್ತೆ. ಪೌಷ್ಟಿಕಾಂಶದ ಕೊರತೆ ಸಿರೊಟೋನಿನ್ ಮಟ್ಟದವನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.

ಹೈಪೊಗ್ಲಿಸಿಮಿಯಾ: ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳು ಮನಸ್ಥಿತಿ ಮತ್ತು ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ರಕ್ತದಲ್ಲಿನ ಕಡಿಮೆ ಸಕ್ಕರೆಯ ಅಂಶ ಕಿರಿಕಿರಿ, ಗೊಂದಲ, ಆಕ್ರಮಣಶೀಲತೆಗೆ ಕಾರಣವಾಗಬಹುದು. ಸಮತೋಲಿತ ಆಹಾರದ ಮೂಲಕ ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ಮನಸ್ಸು ಖುಷಿ ಖುಷಿಯಾಗಿರುವುದಕ್ಕೆ ಸಹಾಯ ಮಾಡುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024