ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು, ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು, ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು

ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು, ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು

ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು ಸಂಭವಿಸಿದೆ. ಇದರಲ್ಲಿ ಮೂರು ಪ್ರಕರಣ ನಿರ್ಜಲೀಕರಣದಿಂದ ಆಗಿರಬಹುದು ಎಂದು ವೈದ್ಯಾಧಿಕಾರಿಗಳು ಶಂಕಿಸಿದ್ದಾರೆ. ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು ಸಂಭವಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)
ಬಿಸಿಲ ಝಳಕ್ಕೆ ರಾಯಚೂರಲ್ಲಿ ಒಂದೇ ದಿನ 6 ಸಾವು ಸಂಭವಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉಡುಪಿಯಲ್ಲಿ ಸೆಖೆ ತಡೆಯದೇ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಆರು ಜನ ಸಾವನ್ನಪ್ಪಿದ್ದು, ಉಡುಪಿಯಲ್ಲಿ ಸೆಕೆ ಎಂದು ಟೆರೇಸ್‌ನಲ್ಲಿ ಮಲಗಿದ್ದ ಶಿಕ್ಷಕರೊಬ್ಬರು ಅಲ್ಲಿಂದ ಕೆಳಕ್ಕೆ ಬಿದ್ದು ಮೃತ ಪಟ್ಟ ಘಟನೆ ವರದಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಾಖದ ಅಲೆ, ಬಿಸಿಲ ಝಳ ಈ ಸಲ ಸ್ವಲ್ಪ ಹೆಚ್ಚೇ ಇತ್ತು. ಮಾರ್ಚ್ 1 ರಿಂದ ಏಪ್ರಿಲ್ 3 ರ ಅವಧಿಯಲ್ಲಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿತ್ತು. ರಾಜ್ಯದಲ್ಲಿ ಕಳೆದ ತಿಂಗಳು 500ಕ್ಕೂ ಹೆಚ್ಚು ಬಿಸಿಲಾಘಾತ (Heat Stroke) ಪ್ರಕರಣ ಸಂಭವಿಸಿದ್ದವು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ತಿಂಗಳ ಆರಂಭದಲ್ಲೇ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಒಂದೇ ದಿನ (ಮೇ 3) ಐವರು ಮೃತಪಟ್ಟಿದ್ದಾರೆ. ಇದಲ್ಲದೆ, ಮೊನ್ನೆ ಬಿಎಂಟಿಸಿ ನಿರ್ವಾಹಕರೊಬ್ಬರು ಮೃತಪಟ್ಟಿರುವ ವರದಿಯೂ ಬಂದಿದೆ. ಈ ನಡುವೆ, ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆಯೂ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಝಳ ತುಸು ಹೆಚ್ಚೇ ಇದೆ. ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿರುವುದು ಕೂಡ ಇದೇ ಜಿಲ್ಲೆಯಲ್ಲಿ.

ರಾಯಚೂರು ಜಿಲ್ಲೆಯಲ್ಲಿ ಒಂದೇ ದಿನ ಬಿಸಿಲ ಝಳಕ್ಕೆ 6 ಸಾವು

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಿಸಿಲಿನ ಝಳ ಮತ್ತು ನಿರ್ಜಲೀಕರಣದಿಂದಾಗಿ ನಾಲ್ವರು ಮೃತಪಟ್ಟಿದ್ಧಾರೆ. ಮೃತರನ್ನು ವೀರೇಶ ಹನುಮಂತಪ್ಪ ಮಡಿವಾಳ(50), ಗಂಗಮ್ಮ ದೇವದಾಸಿ(60) ಹಾಗೂ ಅಂಗವಿಕಲ ಪ್ರದೀಪ ತಿಮ್ಮಣ್ಣ ಪೂಜಾರಿ (15), ಹಸಮಕಲ್ ಮೂಲದ ಮಲ್ಲಯ್ಯ (45), ಜಾಲಿಬೆಂಚಿ ಗ್ರಾಮದ ಹನುಮಂತ (45) ಎಂದು ಗುರುತಿಸಲಾಗಿದೆ.

ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ವೀರೇಶ ಹನುಮಂತಪ್ಪ ಮಡಿವಾಳ ಸಂಜೆ ಅಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಗಂಗಮ್ಮ ದೇವದಾಸಿ ಮತ್ತು ಅಂಗವಿಕಲ ಪ್ರದೀಪ ತಿಮ್ಮಣ ಪೂಜಾರಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ರಾಯಚೂರು ತಾಲೂಕು ಜಾಲಿಬೆಂಚಿ ಗ್ರಾಮದ ಹನುಮಂತ ಅವರು ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಕುಸಿದು ಮೃತಪಟ್ಟಿದ್ದಾರೆ.

ಬಿಎಂಟಿಸಿ ಕಂಡಕ್ಟರ್ ಹಸಮಕಲ್ ಮೂಲದ ಮಲ್ಲಯ್ಯ ಮಸ್ಕಿ ಪಟ್ಟಣದಲ್ಲಿ ಮನೆಗೆ ಬೇಕಾದ ಕಿರಾಣಿ ಸಾಮಗ್ರಿ ತರಲು ಹೋಗಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಇವರಲ್ಲದೆ, ತುಮಕೂರಲ್ಲಿ ದುರ್ಗಮ್ಮ ಹನುಮಂತಪ್ಪ ಉಪ್ಪಾರ್ (60) ಕೂಡ ಬಿಸಿಲಿನ ಝಳಕ್ಕೆ ಕುಸಿದು ಮೃತಪಟ್ಟಿದ್ದಾರೆ.

ನಿರ್ಜಲೀಕರಣವೇ ಸಾವಿಗೆ ಕಾರಣವಾಗಿರುವ ಶಂಕೆ

ರಾಯಚೂರು ಜಿಲ್ಲೆಯ ಸಿಂಧನೂರು ಹಾಗೂ ರಾಯಚೂರು ತಾಲೂಕುಗಳಲ್ಲಿ ಬಿಸಿಲ ಝಳ ಮಾತ್ರವಲ್ಲದೆ, ಕೆಲವರು ಅನಾರೋಗ್ಯದಿಂದಲೂ ಮೃತಪಟ್ಟಿದ್ದಾರೆ. ಈಗ ಮೃತಪಟ್ಟವರ ಪೈಕಿ ಮೂವರು ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಈ ಕುರಿತು ವೈದ್ಯರ ತಂಡ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಶ ಬಾಬು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.

‘ರಾಯಚೂರು ಜಿಲ್ಲೆಯಲ್ಲಿ ಇನ್ನೊಂದು ವಾರ ಬಿಸಿಲ ಝಳ ಇರಲಿದೆ. ಇಂದು (ಮೇ 4) ಬಿಸಿಲಿನ ತಾಪ ಹೆಚ್ಚಳವಾಗಿದ್ದು, ತಾಪಮಾನ 45 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಮೇ 8 ರನತಕ ಬಿಸಲ ತಾಪ ಹೆಚ್ಚಿರಲಿದ್ದು, ರೈತರು, ಕೃಷಿಕರು ಹೊಲದ ಕೆಲಸಕ್ಕೆಂದು ಹೊರಗೆ ಹೋಗಬಾರದು. ಮನೆಯಲ್ಲಿ ಇದ್ದು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇನ್ನೊಂದೆಡೆ, ಉಡುಪಿ ಜಿಲ್ಲೆಯ ಅಜೆಕಾರು ಆಶ್ರಯನಗರ ನಿವಾಸಿ ಶಿಕ್ಷಕ ಸುಂದರ ನಾಯ್ಕ್ (55) ಸೆಖೆ ಇದೆ ಎಂದು ರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ರಾತ್ರಿ ಟೆರೇಸ್‌ನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

Whats_app_banner