Rain Alert: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ಆದರೆ ಕರಾವಳಿ ಭಾಗದಲ್ಲಿ…-heavy rain thunderstorms expected in north karnataka and also coastal karnataka districts today weather update prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Rain Alert: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ಆದರೆ ಕರಾವಳಿ ಭಾಗದಲ್ಲಿ…

Rain Alert: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ಆದರೆ ಕರಾವಳಿ ಭಾಗದಲ್ಲಿ…

Weather Update: ಇಂದು (ಆಗಸ್ಟ್​ 24 ರ ಶನಿವಾರ) ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ? ಬೆಂಗಳೂರಿನಲ್ಲೂ ಮಳೆ ಸುರಿಯುತ್ತಾ? ಹೇಗಿದೆ ಹವಾಮಾನ ಮುನ್ಸೂಚನೆ? ಇಲ್ಲಿದೆ ವಿವರ.

ಮಳೆಯಿಂದ ರಕ್ಷಿಸಿಕೊಂಡು ರಸ್ತೆ ದಾಟುತ್ತಿರುವುದು
ಮಳೆಯಿಂದ ರಕ್ಷಿಸಿಕೊಂಡು ರಸ್ತೆ ದಾಟುತ್ತಿರುವುದು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಕಳೆದ ಎರಡು ದಿನಗಳಿಂದ ಮಳೆ ಬಾರದಿದ್ದರೂ, ಇಂದು (ಆಗಸ್ಟ್ 24) ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಸೂಚಿಸಿದೆ. ಅದೇ ರೀತಿ ಉತ್ತರ ಕನ್ನಡದಲ್ಲೂ ಭರ್ಜರಿ ಮಳೆ ಆಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಆದರೆ, ಕರಾವಳಿ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡು ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೂ ಕರಾವಳಿ ಭಾಗಕ್ಕೆ ಆಗಸ್ಟ್ 26ರ ತನಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮೀನುಗಾರರು ಸಮುದ್ರಕ್ಕಿಳಿಯಬೇಡಿ ಎಂದ ಹವಾಮಾನ ಇಲಾಖೆ

ಮೀನುಗಾರರು ಸಮುದ್ರಕ್ಕೆ ಇಳಿಯಬೇಡಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಏಕೆಂದರೆ ಪ್ರಸ್ತುತ ಗಾಳಿಯ ವೇಗದ ಗಂಟೆಗೆ 45 ಕಿಮೀನಿಂದ 55 ಕಿಮೀ ವೇಗದಲ್ಲಿ 65 ಕಿಮೀ ತನಕ ಬೀಸುವ ಗಾಳಿಯು ಕರ್ನಾಟಕ ಕರಾವಳಿ ಉದ್ದಕ್ಕೂ ಮತ್ತು ಹೊರಗೆ ಚಾಲ್ತಿಯಲ್ಲಿದೆ. ಸಮುದ್ರದ ಅಲೆಗಳು ಉಲ್ಬಣವಾಗುವ ಸಾಧ್ಯತೆ ಇದೆ. ಹಾಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬೇಡಿ ಎಂದು ಇಲಾಖೆ ತಿಳಿಸಿದೆ.

ಆಗಸ್ಟ್​ 25-26ರಂದು ಹವಾಮಾನ ಹೇಗಿದೆ?

ಇಂದು ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯ ಸಂಭವ ಇದ್ದರೆ, ಆಗಸ್ಟ್​ 25, 26ರಂದು ಕರಾವಳಿ ಕರ್ನಾಟಕದಲ್ಲೇ ಅತ್ಯಧಿಕ ಮಳೆ ಕಾಣಿಸಿಕೊಳ್ಳಲಿದೆ ಎಂದು ಇಲಾಖೆ ಸೂಚಿಸಿದೆ. ಹವಾಮಾನ ಇಲಾಖೆ ವರದಿ ಮುನ್ಸೂಚನೆಯ ನಡುವೆಯೂ ಕಳೆದ ಎರಡು ಮೂರು ದಿನಗಳಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಅಲ್ಲಲ್ಲಿ ಸಾಧಾರಣ ಮಳೆ ಬಂದಿದೆ. ಆದರೂ ಜುಲೈ ಮತ್ತು ಆಗಸ್ಟ್​ ಆರಂಭದಲ್ಲಿ ಬಂದಂತಹ ಮಳೆ ಇನ್ನೂ ಕಾಣಿಸಿಕೊಂಡಿಲ್ಲ.

ಬೆಂಗಳೂರಿನ ಸುತ್ತಮುತ್ತಲಿನ ಮುನ್ಸೂಚನೆ

ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಮುಂದಿನ 24 ಗಂಟೆಗಳಲ್ಲಿ (ಆಗಸ್ಟ್​ 25ರ ಬೆಳಗಿನ ತನಕ) ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಆದರೆ, ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಮಳೆ ಕಾಣಿಸಿಕೊಂಡಿಲ್ಲ.

ಆಗಸ್ಟ್​ 23ರ ಶುಕ್ರವಾರ ಎಲ್ಲೆಲ್ಲಿ ಮಳೆಯಾಗಿದೆ?

ನೈರುತ್ಯ ಮಾನ್ಸೂನ್ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆ ಮಳೆಯಾಗಿದೆ. ಕಲಬುರಗಿ, ಉತ್ತರ ಕನ್ನಡ, ರಾಯಚೂರು, ಯಾದರಿಗಿ, ವಿಜಯಪುರ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಅಧಿಕ ಮಳೆ ಸುರಿದಿದ್ದೆಲ್ಲಿ?

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಆಗಸ್ಟ್​ 23ರಂದು ಅತ್ಯಧಿಕ ಮಳೆ ಸುರಿದಿದೆ. ಇಲ್ಲಿ 7 ಸೆಂ.ಮೀ ಮಳೆ ಸುರಿದಿದೆ. ಕೊಟ್ಟಿಗೆ ಹಾರ 5 (ಚಿಕ್ಕಮಗಳೂರು), ಸೇಡಂ 4 (ಕಲಬುರಗಿ), ಕದ್ರಾ 3 (ಉತ್ತರ ಕನ್ನಡ), ಕ್ಯಾಸಲ್ ರಾಕ್ 2 (ಉತ್ತರ ಕನ್ನಡ), ಮಂಕಿ 2 (ಉತ್ತರ ಕನ್ನಡ), ಸಿದ್ಧಾಪುರ 2 (ಉಡುಪಿ), ಕುಮುಟಾ 2 (ಉತ್ತರ ಕನ್ನಡ), ಯಲ್ಲಾಪುರ 2 (ಉತ್ತರ ಕನ್ನಡ), ಲಿಂಗಸೂಗೂರು 2 (ರಾಯಚೂರು), ಶಹಾಪುರ 2 (ಯಾದಗಿರಿ), ಚಿತ್ತಾಪುರ 2 (ಕಲಬುರಗಿ), ಜೇವರ್ಗಿ 2 (ಕಲಬುರಗಿ) ಸೆಂ.ಮೀ ಮಳೆಯಾಗಿದೆ. ಉಡುಪಿ, ಕೋಟಾ ತಲಾ ಒಂದು, ಉತ್ತರ ಕನ್ನಡದ ಗೋಕರ್ಣ, ಶಿರಾಲಿ, ಗೇರುಸೊಪ್ಪ​ ತಲಾ 1, ವಿಜಯಪುರದ ಝಲ್ಕಿ ಕ್ರಾಸ್, ಬಸವನ ಬಾಗೇವಾಡಿ, ಇಂಡಿ, ಮುದ್ದೇಬಿಹಾಳ ತಲಾ 1, ಕಲಬುರಗಿಯ ಯಡ್ರಾಮಿ ಸೇರಿದಂತೆ ಹಲವು ಸ್ಥಳಗಳಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.