ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ; ಇನ್ನೂ 4 ಗೇಟ್ ಅಳವಡಿಸಿದರೆ ಹೊರ ಹರಿವು ಸಂಪೂರ್ಣ ನಿಯಂತ್ರಣ -Tungabhadra Dam-hospet news installation of gate to tungabhadra dam successful remaining 4 gates installation soon rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ; ಇನ್ನೂ 4 ಗೇಟ್ ಅಳವಡಿಸಿದರೆ ಹೊರ ಹರಿವು ಸಂಪೂರ್ಣ ನಿಯಂತ್ರಣ -Tungabhadra Dam

ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ; ಇನ್ನೂ 4 ಗೇಟ್ ಅಳವಡಿಸಿದರೆ ಹೊರ ಹರಿವು ಸಂಪೂರ್ಣ ನಿಯಂತ್ರಣ -Tungabhadra Dam

Tungabhadra Dam: ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋದ 6 ದಿನಗಳ ಬಳಿಕ ತುಂಗಭದ್ರಾ ಡ್ಯಾಂಗೆ ಹೊಸ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಇನ್ನೂ 4 ಗೇಟ್‌ಗಳನ್ನು ಅಳವಡಿಸಿದರೆ ಹೊರ ಹರಿವು ಸಂಪೂರ್ಣ ನಿಂತ್ರಣಕ್ಕೆ ಬರಲಿದೆ ಎಂದು ಗೊತ್ತಾಗಿದೆ.

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಮುರಿದು ನೀರುಪಾಲದ 19ನೇ ಗೇಟ್‌ಗೆ ಬದಲಾಗಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆದಿದೆ.
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಮುರಿದು ನೀರುಪಾಲದ 19ನೇ ಗೇಟ್‌ಗೆ ಬದಲಾಗಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆದಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಗೇಟ್‌ಗೆ ಪರ್ಯಾಯವಾಗಿ ಹೊಸ ಗೇಟ್ ಅಳವಡಿಕೆ ಕಾರ್ಯ ವಾರದ ಬಳಿಕ ಯಶಸ್ವಿಯಾಗಿದ್ದು, ಇನ್ನೂ 4 ಗೇಟ್‌ಗಳನ್ನು ಅಳವಡಿಸಿದರೆ ನೀರಿನ ಹೊರ ಹರಿವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಉಳಿದ ಗೇಟ್‌ಗಳ ಅಳವಡಿಕೆ ಕಾರ್ಯ ಇಂದು (ಆಗಸ್ಟ್ 17, ಶನಿವಾರ) ನಡೆಯಲಿದೆ ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕೊಚ್ಚಿಹೋಗಿರುವ ಡ್ಯಾಂನ 19 ನೇ ಗೇಟ್‌ಗೆ ಹೊಸ ಗೇಟ್ ಅಳವಡಿಸುವ ಸಂಬಂಧ ಎಂಜಿನಿಯರ್‌ಗಳು, ಜಲ ಮೆಕಾನಿಕಲ್ ಹಾಗೂ ಇತರೆ ಸಿಬ್ಬಂದಿ ಕಾರ್ಯನಿರತರಾಗಿದ್ದರು. ಅಂತಿಮವಾಗಿ ಶುಕ್ರವಾರ (ಆಗಸ್ಟ್ 16) ಸಂಜೆ ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿರುವ 5 ಕ್ರೆಸ್ಟ್ ಗೇಟ್‌ಗಳ ಪೈಕಿ ಮೊದಲ ಕ್ರೆಸ್ಟ್ ಗೇಟ್‌ ಅನ್ನು ಅಳವಡಿಸಿದ್ದಾರೆ. ಇದರಿಂದ ಜಲಾಶಯದಿಂದ ಭಾರಿ ಹೊರ ಹರಿವನ್ನು ನಿಯಂತ್ರಿಸಿದ್ದಾರೆ.

ಜಲ ಮೆಕ್ಯಾನಿಕಲ್ ಇಂಜಿನಿಯರ್ ಎನ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಹೊಸಹಳ್ಳಿಯಲ್ಲಿರುವ ಹಿಂದೂಸ್ತಾನ್ ಇಂಜಿನಿಯರಿಂಗ್ ಕಂಪನಿಯ ಶೆಡ್‌ನಲ್ಲಿ ಗೇಟ್‌ಗಳನ್ನು ಘಟಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಟ್ಟು 5 ಘಟಕಗಳ ಪೈಕಿ ಮೊದಲ ಘಟಕವನ್ನು ಅಳವಡಿಸಲಾಗಿದೆ. ಉಳಿದ ನಾಲ್ಕು ಘಟಕಗಳನ್ನು ಒಂದೆರಡು ದಿನಗಳಲ್ಲಿ ಅಳವಡಿಸುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 10ರ ಶನಿವಾರ ರಾತ್ರಿ ತುಂಗಾಭದ್ರಾ ಜಲಾಶಯದ 19ನೇ ಗೇಟ್ ನೀರಿನಲ್ಲಿ ಕೊಚ್ಚಿ ಹೋಗಿರುವುದು ಗಮನಕ್ಕೆ ಬಂದಿತ್ತು. ಇದರಿಂದಾಗಿ ಈವರೆಗೆ ಅಪಾರ ಪ್ರಮಾಣದ ನೀರಿ ಹೊರ ಹೋಗಿದೆ. ಅಣೆಕಟ್ಟಿನ ಕ್ರೆಸ್ಟ್ ಗೇಟ್‌ನ ಜೀವಿತಾವಧಿ ಸುಮಾರು 40 ವರ್ಷಗಳು. ಆದರೆ ಕೊಚ್ಚಿ ಹೋಗದ ಗೇಟ್‌ಗೆ 30 ವರ್ಷಗಳ ಕಾಲ ನೀರನ್ನು ತಡೆ ಹಿಡಿದ ಇತಿಹಾಸವಿತ್ತು. ಕೊಪ್ಪಳ ಜಿಲ್ಲಾ ಸಚಿವ ಶಿವರಾಜ್ ತಂಗಡಗಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್ ಸೇರಿದಂತೆ ಇತರರು ಇಂಜಿನಿಯರ್ ತಂಡವನ್ನು ಅಭಿನಂದಿಸಿದ್ದಾರೆ.