ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಮನೆಯಲ್ಲಿ ಕುಳಿತು ಹೀಗೆ ಮಾಡಿದರೆ ಮುಗೀತು -PVC Aadhaar Card
ಪಿವಿಸಿ ಆಧಾರ್ ಕಾರ್ಡ್‌ಗಳು ಸುಲಭವಾಗಿ ಹಾಳಾಗುವುದಿಲ್ಲ. ಇದು ಕ್ಯೂಆರ್ ಕೋಡ್, ಮೈಕ್ರೋ-ಟೆಕ್ಸ್ಟ್, ಹೊಲೊಗ್ರಾಮ್ ಹಾಗೂ ಗೋಸ್ಟ್ ಇಮೇಜ್ ಸೆಕ್ಯುರಿಟಿಯನ್ನು ಒಳಗೊಂಡಿರುತ್ತದೆ. ಪಿವಿಸಿ ಆಧಾರ್ ಕಾರ್ಡ್ ಅನ್ನು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅಪ್ಲೇ ಮಾಡಬಹುದು. ಅದು ಹೇಗೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. (ವರದಿ: ವಿನಯ್ ಭಟ್)
ಬ್ಯಾಂಕ್ ವ್ಯವಹಾರ, ಸರ್ಕಾರಿ ಸೇವೆಗಳು, ಶಾಲಾ-ಕಾಲೇಜು, ಉದ್ಯೋಗ ಸೇರಿದಂತೆ ಎಲ್ಲೆಡೆ ಆಧಾರ್ ಕಾರ್ಡ್ ಬೇಕೇ ಬೇಕು. ಎಲ್ಲಾ ಕಡೆಗಳಲ್ಲಿ ಬಳಕೆಯಾಗುವ ಆಧಾರ್ ಕಾರ್ಡ್ ಬಹಳ ಮುಖ್ಯವಾದ ಸರ್ಕಾರಿ ದಾಖಲೆಯಾಗಿದೆ. ಹಿಂದಿನ ಆಧಾರ್ ಕಾರ್ಡ್‌ಗಳು ಕಾಗದದ ಶೈಲಿಯಲ್ಲಿ ಬರುತ್ತಿದ್ದವು. ಆದರೆ, ಅದು ನಿತ್ಯ ಒಂದಲ್ಲಾ ಒಂದು ಕೆಲಸದ ನಿಮಿತ್ತ ಅದರ ಬಳಕೆಯಿಂದಾಗಿ ಹರಿದುಹೋಗುತ್ತದೆ. ಹೀಗಾದಾಗ, ನೀವು ಮತ್ತೆ ಆಧಾರ್ ಕಾರ್ಡ್ ಅನ್ನು ಪಡೆಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪಿವಿಸಿ ಆಧಾರ್ ಕಾರ್ಡ್ ಉತ್ತಮ ಆಯ್ಕೆಯಾಗಿದೆ. ಪಿವಿಸಿ ಆಧಾರ್ ಕಾರ್ಡ್‌ಗಳು ಸುಲಭವಾಗಿ ಹಾಳಾಗುವುದಿಲ್ಲ. ಇದನ್ನು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಮಾಡಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪಿವಿಸಿ ಆಧಾರ್ ಕಾರ್ಡ್ ಎಂದರೇನು?
PVC ಒಂದು ಪ್ಲಾಸ್ಟಿಕ್ ಕಾರ್ಡ್ ಆಗಿದೆ. ಈ ಕಾರ್ಡ್ ಬೇಗ ಹಾಳಾಗುವುದಿಲ್ಲ. ಇದು ಕ್ಯೂಆರ್ ಕೋಡ್, ಮೈಕ್ರೋ-ಟೆಕ್ಸ್ಟ್, ಹೊಲೊಗ್ರಾಮ್ ಮತ್ತು ಗೋಸ್ಟ್ ಇಮೇಜ್ ಸೆಕ್ಯುರಿಟಿಯನ್ನು ಒಳಗೊಂಡಿರುತ್ತದೆ.
ಪಿವಿಸಿ ಆಧಾರ್ ಕಾರ್ಡ್ ಗೆ ಅಪ್ಲೇ ಮಾಡುವುದು ಹೇಗೆ?
- ಇದಕ್ಕಾಗಿ ನೀವು ಮೊದಲು ಯುಐಡಿಎಐ ನ ಅಧಿಕೃತ ವೆಬ್‌ಸೈಟ್ https://uidai.gov.in ಗೆ ಹೋಗಿ.
- ನಂತರ My Aadhaar ವಿಭಾಗದಲ್ಲಿ ಟ್ಯಾಪ್ ಮಾಡಿ, ಅಲ್ಲಿ ನೀವು ಆರ್ಡರ್ ಪಿವಿಸಿ ಆಧಾರ್ ಕಾರ್ಡ್ ಆಯ್ಕೆಯನ್ನು ಟ್ಯಾಪ್ ಮಾಡಿ.
- ಬಳಿಕ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ಒಟಿಪಿ ಆಯ್ಕೆಯನ್ನು ಟ್ಯಾಪ್ ಮಾಡಿ
- ಕೂಡಲೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ಪರಿಶೀಲಿಸಿ
ಒಟಿಪಿ ನಮೂದಿಸಿ.
- ನಂತರ ಆಧಾರ್ ಕಾರ್ಡ್‌ನ ಡಿಜಿಟಲ್ ಪ್ರತಿ ಕಾಣಿಸಿಕೊಳ್ಳುತ್ತದೆ. ಇದರ ನಂತರ ವಿವರಗಳನ್ನು
ಪರಿಶೀಲಿಸಬೇಕಾಗುತ್ತದೆ.
- ನೀವು ಪ್ಲೇಸ್ ಆರ್ಡರ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಇದಾದ ನಂತರ 50 ರೂಪಾಯಿ ಪಾವತಿ
ಮಾಡಬೇಕಾಗುತ್ತದೆ.
- ಇಲ್ಲಿ ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿ
ಮಾಡಬಹುದು.
- ಬಳಿಕ ನಿಮ್ಮ ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಆಗುತ್ತದೆ. 15 ದಿನಗಳಲ್ಲಿ ಸ್ಪೀಡ್ ಪೋಸ್ಟ್
ಮೂಲಕ ನಿಮ್ಮ ಮನೆಗೆ ತಲುಪುತ್ತದೆ.
ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
- ಇ-ಆಧಾರ್ ಡೌನ್‌ಲೋಡ್ ಮಾಡಲು, ಮೊಬೈಲ್ ಸಂಖ್ಯೆಯ ಮೂಲಕ ಪರಿಶೀಲನೆಯನ್ನು
ಮಾಡಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ
ಕಳುಹಿಸಲಾಗುತ್ತದೆ
ಆಧಾರ್ ಬಳಕೆದಾರರು UIDAI ನ MyAadhaar ಪೋರ್ಟಲ್
https://myadhaar.uidai.gov.in/genricDownloadAadhaar/hi ಗೆ ಭೇಟಿ ನೀಡಬೇಕು.
- ಇದರ ನಂತರ ನೀವು mAadhaar ಅಪ್ಲಿಕೇಶನ್ ಬಳಸಿ ಇ-ಆಧಾರ್ ಅನ್ನು ಡೌನ್‌ಲೋಡ್
ಮಾಡಬಹುದು.
ಪಿವಿಸಿ ಆಧಾರ್ ಕಾರ್ಡ್‌ನ ಪ್ರಯೋಜನಗಳು
ಭದ್ರತಾ ದೃಷ್ಟಿಯಿಂದ ಪಿವಿಸಿ ಆಧಾರ್ ಕಾರ್ಡ್ ಬಹಳ ಮುಖ್ಯ. ಇದನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಂತೆ ಸುಲಭವಾಗಿ ಇರಿಸಬಹುದು. ಇದರ ತಯಾರಿಕೆಯ ವೆಚ್ಚ ಕೇವಲ 50 ರೂ. ಇದರ ಆನ್‌ಲೈನ್ ಪ್ರಕ್ರಿಯೆ ಕೂಡ ತುಂಬಾ ಸುಲಭವಾಗಿದೆ. (ವರದಿ: ವಿನಯ್ ಭಟ್).